More

    ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ನರಸಿಂಹ ಜಯಂತಿ ಆಚರಣೆ

    ಬೆಂಗಳೂರು: ಮಂಗಳವಾರ ನಗರದಾದ್ಯಂತ ಶ್ರೀ ನರಸಿಂಹ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನರಹಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯಿತು. ಭಕ್ತರು ಬೆಳಗ್ಗೆಯಿಂದ ರಾತ್ರಿವರೆಗೂ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಭಾಗವಾನ್ ವಿಷ್ಣು ಅರ್ಧ ಪುರುಷ ಹಾಗೂ ಅರ್ಧ ಸಿಂಹ ಅವತಾರ ತಾಳಿದ ಮಂಗಳಕರ ದಿನ. ಅಂದರೆ ವೈಶಾಖ ಮಾಸದ ಶುಕ್ಲ ಚತುರ್ದಶಿಯಂದು ಮುುಸ್ಸಂಜೆಯಲ್ಲಿ ನರಸಿಂಹದೇವರು ಅವತರಿಸಿದ ವಿಶೇಷ ದಿನ. ಪ್ರತಿ ವರ್ಷ ಈ ದಿನವನ್ನು ಶ್ರೀ ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತದೆ.

    ಬಸವನಗುಡಿಯ ಉತ್ತರಾಧಿಮಠ, ರಾಜಾಜಿನಗರದ ಇಸ್ಕಾನ್ ದೇವಾಲಯ, ಬಳೇಪೇಟೆಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ, ಬಸವೇಶ್ವರನಗರದ ಶ್ರೀ ವರಪ್ರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಸೇರಿ ನಗರದ ನರಸಿಂಹ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜೆ, ಅಲಂಕಾರಗಳು, ಉತ್ಸವಗಳು ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts