More

    ಮೈಸೂರಿನಲ್ಲಿ ಯೋಗ ಟೀಚರ್ ಟ್ರೈನಿಂಗ್ ಕೋರ್ಸ್‌ಗೆ ಅರ್ಜಿ ಆಹ್ವಾನ

    ಮೈಸೂರು: ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಮಾನ್ಯತೆ ಪಡೆದಿರುವ ಇಂಟರ್‌ನ್ಯಾಷನಲ್ ಯೋಗ ಆರ್ಗನೈಜೇಷನ್‌ನಲ್ಲಿ ನೋಂದ ಣಿಯಾಗಿರುವ ನಗರದ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಇಂಟರ್‌ನ್ಯಾಷನಲ್ ಯೋಗ ಟೀಚರ್ ಟ್ರೈನಿಂಗ್ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಿವಪ್ರಕಾಶ್ ಹೇಳಿದರು.

    ಕೋರ್ಸ್‌ಗೆ ಸೇರ್ಪಡೆಗೊಂಡವರಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳು ದೊರೆಯಲಿದೆ. ಒಟ್ಟು ಮೂರು ತಿಂಗಳ ಕಾಲ ಕೋರ್ಸ್ ಪ್ರತಿ ಶನಿವಾರ ಸಂಜೆ ಹಾಗೂ ಭಾನುವಾರ ಬೆಳಗ್ಗೆ ನಡೆಯಲಿದೆ. ಈ ಕೋರ್ಸ್‌ನಲ್ಲಿ ಯೋಗಾಸನ, ಯೋಗ ಥೆರಪಿ, ಪ್ರಾಣಾಯಾಮ, ಧ್ಯಾನ, ಮುದ್ರಾ ಥೆರಪಿ, ಯೋಗಶಾಸ್ತ್ರ, ಪತಂಜಲಿ ಯೋಗಸೂತ್ರಗಳು, ಶರೀರಶಾಸ್ತ್ರ, ಫಿಸಿಯಾಲಜಿ, ಆಹಾರ ಕ್ರಮ, ಮನೆ ಮದ್ದು, ಜೀವನ ಕೌಶಲ್ಯದ ಕುರಿತು ತಿಳಿಸಿಕೊಡಲಾಗುವುದು. ಮಾಹಿತಿಗೆ ಮೊ: 90355 06790 ಸಂಪರ್ಕಿಸಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts