More

  ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: ಯಾರಿಗೆಲ್ಲಾ ಅನುಕೂಲ?

  ಬೆಂಗಳೂರು ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವು ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಸಿಇಟಿಯಲ್ಲಿ ರ‌್ಯಾಂಕ್ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ. ಪರೀಕ್ಷೆಗೆ ನೋಂದಣಿ ಮಾಡಿದ ವಿಷಯವಾರು 69,346 ಮಂದಿಯಲ್ಲಿ 31,843 ವಿದ್ಯಾರ್ಥಿಗಳ ಅಂಕದಲ್ಲಿ ಸುಧಾರಣೆ ಕಂಡಿದೆ.

  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆ-2ರ ಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 1,48,942 ಮಂದಿಯಲ್ಲಿ 52,505 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಶೇ.35.25 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

  ಸಿಇಟಿ ರ‌್ಯಾಂಕ್ ಹೆಚ್ಚಳಕ್ಕೆ ಅನುಕೂಲ:

  ಲಿತಾಂಶ ಸುಧಾರಣೆ ಬಯಸಿ 32,940 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಒಂದೇ ವಿದ್ಯಾರ್ಥಿಯು ಹಲವು ವಿಷಯಗಳನ್ನು ಪರೀಕ್ಷೆ ಪಡೆದು ಕೆಲವು ವಿಷಯಗಳಲ್ಲಿ ಲಿತಾಂಶ ಸುಧಾರಣೆ ಮತ್ತು ಕೆಲವು ವಿಷಯಗಳಲ್ಲಿ ಅಂಕ ಕಡಿಮೆಯಾಗಿರುತ್ತದೆ. ಆದ್ದರಿಂದ ಎಷ್ಟು ಮಂದಿಗೆ ಅಂಕ ಸುಧಾರಣೆಯಾಗಿದೆ ಮತ್ತು ಕಡಿಮೆಯಾಗಿದೆ ಎಂಬುದನ್ನು ಲೆಕ್ಕ ಮಾಡಲು ಸಾಧ್ಯವಿಲ್ಲವೆಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

  ಆದರೆ, ವಿಷಯವಾರು ಸುಧಾರಣೆಯಲ್ಲಿ ವಿಜ್ಞಾನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಭೌತಶಾಸದಲ್ಲಿ 23,689, ರಸಾಯನಶಾಸದಲ್ಲಿ 20,226, ಗಣಿತ-17,100 ಮತ್ತು ಜೀವಶಾಸದಲ್ಲಿ 8331 ಮಂದಿ ಸೇರಿ ಒಟ್ಟು 69,346 ಮಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ ಕ್ರಮವಾಗಿ 14,065, 7127, 8,933 ಮತ್ತು 1,718 ಮಂದಿ ಲಿತಾಂಶ ಸುಧಾರಣೆಯಾಗಿದೆ. ಈ ಮೂಲಕ ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿರುವ ಸಿಇಟಿಯಲ್ಲಿ ರ‌್ಯಾಂಕ್ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ.

  ಅತಿ ಹೆಚ್ಚು ಒಂದೆರಡು ದಿನಗಳಲ್ಲಿ ಪ್ರಕಟ:

  ಪರೀಕ್ಷೆ-2ರ ಲಿತಾಂಶವನ್ನು ಮಂಗಳವಾರ ಮಂಡಳಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ-1 ಮತ್ತು 2ರಲ್ಲಿ ವಿಷಯವಾರು ಗಳಿಸಿದ ಅತಿ ಹೆಚ್ಚು ಅಂಕಗಳನ್ನು ಪರಿಗಣಿಸಿ ಲಿತಾಂಶವನ್ನು ಒಂದೆರಡು ದಿನಗಳಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts