More

    ಬೀಳೂರು ಗುರುಬಸವ ಸಹಕಾರಿ ಸಂಘಕ್ಕೆ 1.78 ಕೋಟಿ ರೂ.ನಿವ್ವಳ ಲಾಭ

    ಬಾಗಲಕೋಟೆ: ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘವು 2021-22 ಸಾಲಿನಲ್ಲಿ 1,78,32,148 ರೂ. ನಿವ್ವಳ ಲಾಭವಾಗಿದೆ. ಕಳೆದ ಎರಡು ದಶಕಗಳಿಂದ ಬ್ಯಾಂಕ್ ಪ್ರಗತಿ ಪಥದತ್ತ ಸಾಗುತ್ತಿದೆ. ಈ ವರ್ಷವು ಕೂಡಾ ಶೇ.15 ರಷ್ಟು ಲಾಭಾಂಶ ನೀಡಲಾಗುವುದು ಎಂದು ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಘೋಷಣೆ ಮಾಡಿದರು.
    ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘವು 1000 ಜನ ಸದಸ್ಯರೊಂದಿಗೆ 20 ಲಕ್ಷ ರೂ.ಷೇರು ಬಂಡವಾಳದೊಂದಿಗೆ ಏಪ್ರೀಲ್ 2 ರಂದು 2001 ದುಧನಿ-ನಿಂಬಾಳದ ಜಡೆಯಶಾಂತಲಿಂಗ ಸ್ವಾಮೀಜಿ, ಬೀಳೂರ ಮುರಗೇಂದ್ರ ಸ್ವಾಮೀಜಿ ಅಮೃತ ಹಸ್ತದಿಂದ ಕಾರ್ಯಾರಂಭಮಾಡಿತು. ಅಂದಿನಿಂದ ಇಲ್ಲಿಯವರೆಗೆ ಸಂಘವು ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    31.3.2012 ರಲ್ಲಿ 1993 ಇದ್ದ ಸದಸ್ಯರ ಸಂಖ್ಯೆ ಇಂದು 6694 ಕ್ಕೆ ಹೆಚ್ಚಳವಾಗಿದೆ. 44.68 ಲಕ್ಷ ರೂ. ಇದ್ದ ಷೇರು ಬಂಡವಾಳ 370.94 ಲಕ್ಷ ರೂ. ವರೆಗೆ ಏರಿಕೆಯಾಗಿದೆ. 1.65 ಲಕ್ಷ ರೂ. ಇದ್ದ ನಿಧಿ 2,564.39 ಲಕ್ಷ ರೂ. ವರೆಗೆ ಆಗಿದೆ. 977.77 ಲಕ್ಷ ರೂ. ಇದ್ದ ಠೇವುಗಳು 31777.55 ಲಕ್ಷ ರೂ. ವರೆಗೆ ಹೆಚ್ಚಳವಾಗಿದೆ. 630.00 ಲಕ್ಷ ರೂ. ವರೆಗೆ ಇದ್ದ ಗುಂತಾವಣೆಗಳು 20,284.25 ಲಕ್ಷ ರೂ. ವೆರೆಗೆ ಹೆಚ್ಚಳವಾಗಿದೆ. 363.33 ಲಕ್ಷ ರೂ.ವರೆಗೆ ಇದ್ದ ಸಾಲಗಳು 11,758.07 ಲಕ್ಷ ರೂ. ಏರಿಕೆಯಾಗಿದೆ. ಆರಂಭದಲ್ಲಿ 1024.41 ಲಕ್ಷ ರೂ.ಇದ್ದ ದುಡಿಯುವ ಬಂಡವಾಳ 34,712.88 ಲಕ್ಷ ರೂ. ವರೆಗೆ ಹೆಚ್ಚಳವಾಗಿದೆ. 13.44 ಲಕ್ಷ ರೂ. ಇದ್ದ ಲಾಭ 178.32 ಲಕ್ಷ ರೂ. ವರೆಗೆ ಹೆಚ್ಚಳವಾಗಿದ್ದು, ಈ ವರ್ಷವು ಕೂಡಾ ಪ್ರತಿಶತ 15 ರೂ. ರಷ್ಟು ಡಿವ್ವಿಡೆಂಟ್ ಕೊಡಲಾಗುವುದು ಎಂದು ಹೇಳಿದರು.
    ಸಂಘವು ಉದ್ಯಮಿದಾರರಿಗೆ, ವ್ಯಾಪಾರಸ್ಥರಿಗೆ, ನೌಕರರದಾರರಿಗೆ, ಕೂಲಿ ಕಾರ್ಮಿಕರಿಗೆ ಸೇರಿದಂತೆ ವಿವಿಧ ಸದಸ್ಯರಿಗೆ ಅವರವರ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಅನುಸಾರವಾಗಿ ಆರ್ಥಿಕ ನೆರವನ್ನು ಒದಗಿಸಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಂಘವು ನಿರಂತರವಾಗಿ ಶ್ರಮಿಸುತ್ತಿದೆ. ಜಾಮೀನು ಸಾಲ, ಸಂಬಳ ಭದ್ರತೆ ಸಾಲ, ಆಸ್ತಿ ಭದ್ರತೆ ಸಾಲ, ಮನೆ ಕಟ್ಟುವ ಸಾಲ, ವಾಹನ ಸಾಲ, ರೋಖು ಪತ್ತಿನ ಸಾಲ, ಬಂಗಾರದ ಮೇಲೆ ಭದ್ರತೆ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
    ಸಂಘದ ಉಪಾಧ್ಯಕ್ಷ ಮುರಗೆಪ್ಪ ನಾರಾ, ನಿರ್ದೇಶಕರಾದ ಗುರುಬಸವ ಸೂಳಿಭಾವಿ, ಅಶೋಕ ಸಜ್ಜನ (ಬೇವೂರ), ಪ್ರಕಾಶ ರೇವಡಿಗಾರ, ರುದ್ರಪ್ಪ ಅಕ್ಕಿಮರಡಿ, ಮಹೇಶ ಅಂಗಡಿ, ಪ್ರಭು ಸರಗಣಾಚಾರಿ ಸೇರಿದಂತೆ ಸಂಘದ ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts