More

    ಬಿಜೆಪಿ ಬಂಡಾಯ ಅಭ್ಯರ್ಥಿ ಸಜ್ಜನ್ ನಾಮಪತ್ರ

    ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದರು.
    ನಗರದ ಕನ್ನಡ ಭವನದಲ್ಲಿ ರಾಯಚೂರು, ಬೀದರ್, ಯಾದಗಿರಿ, ಕಲಬುರಗಿ, ವಿಜಯನಗರ ಸೇರಿ ವಿವಿಧೆಡೆಯಿಂದ ಆಗಮಿಸಿದ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಸುರೇಶ ಸಜ್ಜನ್, ಬಿಜೆಪಿಯಲ್ಲಿ ಹಲವು ವರ್ಷದಿಂದ ಕೆಲಸ ಮಾಡಿz್ದÉÃನೆ. ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದ್ದರಿಂದ ಸಂಜೀವಿನಿ ಕಾರ್ಡ್ ಮಾಡಿಸುವುದು ಸೇರಿ ಪದವೀಧರರ ಸೇವೆ ಮಾಡಿz್ದÉÃನೆ. ಆದರೆ ಪಕ್ಷ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದು, ಎಲ್ಲ ಮುಖಂಡರ ಬೆಂಬಲದAತೆ ಕಣಕ್ಕೆ ಇಳಿದಿದ್ದು, ನನ್ನ ಸೇವಾ ಕೆಲಸಗಳು, ಎಲ್ಲರ ಬೆಂಬಲದಿAದ ಗೆಲ್ಲುತ್ತೇನೆ ಎಂದರು.
    ವಿವಿಧೆಡೆಯಿAದ ಆಗಮಿಸಿದ ಪ್ರಮುಖರು ಮಾತನಾಡಿ, ಏನೂ ಇಲ್ಲದೆ ಸಂಜೀವಿನಿ ಕಾರ್ಡ್, ಪದವೀಧರರ ಮತ ನೋಂದಣಿ ಮಾಡಿಸಿದ್ದೀರಿ. ಶಿಕ್ಷಕರಿಗೆ ಹಲವು ಯೋಜನೆ ತಲುಪಿಸಿದ್ದೀರಿ. ಎಂಎಲ್‌ಸಿ ಕಚೇರಿ ಇಲ್ಲದ ವೇಳೆಯಲ್ಲಿ ಸ್ವತಃ ಕಚೇರಿ ಆರಂಭಿಸಿ ಸೇವೆ ಸಲ್ಲಿಸಿದ್ದು, ಸ್ಪರ್ಧೆಗೆ ನಿಲ್ಲಿ, ಗೆಲ್ಲಿಸುತ್ತೇವೆ ಎಂದು ವಿಶ್ವಾಸ ತುಂಬಿದರು.
    ಪ್ರೊ.ಎಸ್.ಎಲ್.ಪಾಟೀಲ್ ಮಾತನಾಡಿ, ಕಲಬುರಗಿಗೆ ಕೊಟ್ಟರೆ ಮಾತ್ರ ಗೆಲುವು ಸಾಧ್ಯ ಎಂಬುದಲ್ಲ. ಎಲ್ಲ ಜಿಲ್ಲೆಗಳವರನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದರು.
    ನAತರ ಬೆಂಬಲಿಗರೊAದಿಗೆ ಬೈಕ್ ರ‍್ಯಾಲಿ, ಡೊಳ್ಳು, ಹಲಗೆ, ಬಸವ ಧ್ವಜದೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿ, ಆರ್.ಸಿ.ಕೃಷ್ಣಾ ಬಾಜಪೇಯಿ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ವಿಜಯಕುಮಾರ ಪಾಟೀಲ್ ತೆಗಲತಿಪ್ಪಿ, ಯಲ್ಲಪ್ಪ ಕುರಕುಂದಿ, ಪ್ರಕಾಶ ಅಂಗಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts