More

    ಬಾಂಗ್ಲಾಕ್ಕೆ ಗೋವಿನಜೋಳ ಸಾಗಿಸಿದ ನೈಋತ್ಯ ರೈಲ್ವೆ

    ಹುಬ್ಬಳ್ಳಿ: ರಾಜ್ಯದಿಂದ ಬಾಂಗ್ಲಾದೇಶಕ್ಕೆ ಗೋವಿನಜೋಳ ರಫ್ತಾಗುತ್ತಿದ್ದು, ಇದನ್ನು ನೈಋತ್ಯ ರೈಲ್ವೆ ಸಾಗಾಣಿಕೆ ಮಾಡುತ್ತಿದೆ. ನ. 20ರಂದು ಬಾಗಲಕೋಟೆಯಲ್ಲಿ 42 ವ್ಯಾಗನ್​ಗಳಿಗೆ 2477 ಮೆಟ್ರಿಕ್ ಟನ್ ಗೋವಿನಜೋಳ ತುಂಬಲಾಗಿತ್ತು. ಶನಿವಾರ ವಿಜಯಪುರದಲ್ಲಿ 42 ವ್ಯಾಗನ್​ಗಳಿಗೆ 2484 ಮೆ. ಟನ್ ಸರಕನ್ನು ಹೇರಲಾಯಿತು. ಬಾಂಗ್ಲಾದೇಶದ ದರ್ಶನ ಎಂಬ ಸ್ಥಳಕ್ಕೆ ಇವನ್ನು ತಲುಪಿಸಲಾಗುತ್ತದೆ.

    ಈ ಬೆಳವಣಿಗೆಯು ರಾಜ್ಯದಿಂದ ಕೃಷಿ ಉತ್ಪನ್ನಗಳನ್ನು ಹೊರದೇಶಗಳಿಗೆ ರಫ್ತು ಮಾಡುವುದಕ್ಕೆ ಹೊಸ ಉತ್ತೇಜನವಾಗಿದೆ. ರೈತರು ಮತ್ತು ವ್ಯಾಪಾರಿಗಳು ಕೃಷಿ ಉತ್ಪನ್ನಗಳನ್ನು ಗಡಿಯಾಚೆಗೆ ತಲುಪಿಸಲು ರೈಲ್ವೆಯು ಸಹಾಯ ಮಾಡಲಿದೆ.

    ಬಾಗಲಕೋಟೆ ಮತ್ತು ವಿಜಯಪುರದಿಂದ ಬಾಂಗ್ಲಾದೇಶಕ್ಕೆ 4900 ಮೆ. ಟನ್​ಗಿಂತ ಹೆಚ್ಚಿನ ಸರಕು ಸಾಗಣೆಯಿಂದ ನೈಋತ್ಯ ರೈಲ್ವೆ 152.70 ಲಕ್ಷ ರೂ. ಆದಾಯ ಬರಲಿದೆ.

    ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ಪ್ರಬಂಧಕ ಅರವಿಂದ ಮಾಲ್ಖೇಡೆ ನೇತೃತ್ವದಲ್ಲಿ ಅಧಿಕಾರಿಗಳು ಆಸಕ್ತಿ ವಹಿಸಿ ಹೊರದೇಶಕ್ಕೆ ಸರಕು ಸಾಗಿಸಲು ಕ್ರಮ ಕೈಗೊಂಡಿರುವುದನ್ನು ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಶ್ಲಾಘಿಸಿದ್ದಾರೆ. ಕೃಷಿಕರು ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರಸ್ಥರು ರೈಲ್ವೆ ಸೇವೆಯನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts