More

    ಬನ್ನಿಹಟ್ಟಿ-ಕದರಮಂಡಲಗಿ ರಸ್ತೆ ಹಾಳು

    ಬ್ಯಾಡಗಿ: ತಾಲೂಕಿನ ಬನ್ನಿಹಟ್ಟಿ-ಕದರಮಂಡಲಗಿ ರಸ್ತೆಯ ಡಾಂಬರ್ ಕಿತ್ತು ಹೋಗಿ ದೊಡ್ಡ ಗುಂಡಿಗಳು ಉಂಟಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಎರಡು ವರ್ಷಗಳಿಂದ ಮಳೆ ಹೊಡೆತಕ್ಕೆ ಅಂದಾಜು 2 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ದ್ವಿಚಕ್ರ, ಆಟೋ, ದೊಡ್ಡ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ರಸ್ತೆ ದುರಸ್ತಿಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಒತ್ತಾಯಿಸಿದರೂ ಗಮನಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮಳೆಗಾಲದಲ್ಲಿ ಕೆಸರಿನ ಗದ್ದೆ: ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿ ಹೊಂಡದಂತಾಗುತ್ತವೆ. ರೈತರು ಹೊಲಕ್ಕೆ ಹೋಗಲು ತೊಂದರೆಯಾಗಿದೆ. ರಾತ್ರಿ ಹೊತ್ತು ದ್ವಿಚಕ್ರ ವಾಹನ ಸವಾರರು ಸಾಕಷ್ಟು ಬಾರಿ ಗುಂಡಿಗಳಲ್ಲಿ ಬಿದ್ದು, ನೋವು ಅನುಭವಿಸಿದ್ದಾರೆ. ಮಳೆಗಾಲದಲ್ಲಿ ಯಾರಾದರೂ ನಿಧನ ಹೊಂದಿದರೆ ಅಂತ್ಯಸಂಸ್ಕಾರಕ್ಕಾಗಿ ರುದ್ರಭೂಮಿಗೆ ತೆರಳಲು ಹರಸಾಹಸಪಡಬೇಕಿದೆ.

    ಬನ್ನಿಹಟ್ಟಿ ಗ್ರಾಮದಿಂದ ತೆರಳುವ 5 ಕಿ.ಮೀ. ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ಲಾಕ್​ಡೌನ್​ನಿಂದಾಗಿ ಕೆಲಸ ಆರಂಭಿಸಿಲ್ಲ. ಮಳೆಗಾಲ ಆರಂಭವಾಗುವ ಮುನ್ನವೇ ರಸ್ತೆ ನಿರ್ವಿುಸಲಾಗುವುದು. ಕೂಲಿಕಾರರು ಮತ್ತಿತರ ಸಮಸ್ಯೆಗಳಿಂದಾಗಿ ರಸ್ತೆ ದುರಸ್ತಿಗೆ ಸ್ವಲ್ಪ ವಿಳಂಬವಾಗಿದೆ.

    | ಜೆ. ರಾಜಪ್ಪ ಲೋಕೋಪಯೋಗಿ ಇಂಜಿನಿಯರ್

    ಗ್ರಾಮದ ರುದ್ರ ಭೂಮಿ ಹಾಗೂ ರಾಣೆಬೆನ್ನೂರಿಗೆ ತೆರಳುವ ರಸ್ತೆಯಲ್ಲಿ ಕಂದಕ ದಂತಹ ಗುಂಡಿಗಳು ಉಂಟಾಗಿವೆ. ಗ್ರಾಪಂ ಜನಪ್ರತಿನಿಧಿಗಳು, ವಿವಿಧ ಸಂಘ- ಸಂಸ್ಥೆಗಳ ಪದಾಧಿ ಕಾರಿಗಳು ಲೋಕೋಪಯೋಗಿ ಇಂಜಿನಿಯರ್​ಗೆ ಸಾಕಷ್ಟು ಬಾರಿ ತಿಳಿಸಿದರೂ ಪ್ರಯೋ ಜನವಾಗಿಲ್ಲ. ಸರ್ಕಾರದ ನಡೆ ಹಳ್ಳಿಯ ಕಡೆ ಎನ್ನುವ ಕಾರ್ಯಕ್ರಮದಲ್ಲಿ ಸಾರ್ವ ಜನಿಕರು ದೂರು ಸಲ್ಲಿಸಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

    | ಡಿ.ಎಚ್. ಬುಡ್ಡನಗೌಡ್ರ

    ವಕೀಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts