ವಿಧಾನ ಪರಿಷತ್​ ಸದಸ್ಯಗೆ ಫುಲ್​ ಕ್ಲಾಸ್​ ತಗೊಂಡ ಸಾರ್ವಜನಿಕರು; ಆಗಿದ್ದಿಷ್ಟು…

blank

ಕೋಲಾರ: ಆತ‌ ವಿಧಾನಪರಿಷತ್​ ಸದಸ್ಯ. ಗೊತ್ತಿದ್ದೋ ಗೊತ್ತಲ್ಲದೆಯೊ ತಪ್ಪು ನಡೆದು ಹೋಗಿದೆ. ಆಗಿರುವ ತಪ್ಪುನ್ನು ಸಮಾಧಾನವಾಗಿ ಬಗ್ಗೆ ಹರಿಸಿಕೊಳ್ಳದೆ ದರ್ಪ ತೋರಿದ ಎಂಎಲ್​ಸಿಗೆ ಸಾರ್ವಜನಿಕರು ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಕ್ಲಾಸ್​ಗೆ ದಂಗಾದ ಎಂಎಲ್​ಸಿ ಕೆಲಕಾಲ ತಬ್ಬಿಬ್ಬರಾಗಿದ್ದಾರೆ.

blank

ಹೌದು, ಕೋಲಾರದ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೋಲಾರಕ್ಕೆ ಆಗಮಿಸುತ್ತಿದ್ದ ಎಂ.ಎಲ್.ಸಿ ರವಿ ಕುಮಾರ್ ಇದ್ದ ಕಾರು ಹಿಂಬದಿಯಿಂದ ಬೈಕ್​ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದಾನೆ.

ಹೊಸಕೋಟೆ ತಾಲೂಕಿನ‌ ಬೈಕ್​ ಸವಾರ ಗೋಪಾಲ ಗಾಯಗೊಂಡು ನರಳಾಡುತ್ತಿದ್ದರೂ ಕಾರಿನಿಂದ ಕೆಳಗಿಳಿಯದೆ ದರ್ಪ ತೋರಿಸಿದ ಎಂಎಲ್.ಸಿ ರವಿ ಕುಮಾರ್​ಗೆ ಸ್ಥಳೀಯರು ಫುಲ್‌ ಕ್ಲಾಸ್ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನೀನ್ಯಾವ ಸೀಮೆ ಎಂ.ಎಲ್.ಸಿ? ನಿನಗೆ ಮಾನ ಮರ್ಯಾದೆ ಇದೆಯಾ?’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಿನಿಂದ‌ ಕೆಳಗೆ‌ ಇಳಿಯದೆ ದರ್ಪ‌ ತೊರಿದ ವಿಧಾನ ಪರಿಷತ್ ಸದಸ್ಯರ ಮೇಲೆ ಸಾರ್ವಜನಿಕರು‌ ಆಕ್ರೋಶ ವ್ಯಕ್ತಪಡಿಸಿದಲ್ಲದೆ ಕಾರಿ‌ನ ಮುಂದೆ ಕುಳಿತು ಪ್ರತಿಭಟನೆಗೆ ಮುಂದಾದರು.ಈ ಸಂದರ್ಭದಲ್ಲಿ‌ ಕಾರಿನಿಂದ ಹೊರಬಂದ‌ ಎಂ.ಎಲ್​.ಸಿ ರವಿಕುಮಾರ್ ಅಲ್ಲಿದ್ದ ಸಾರ್ವಜನಿಕರ‌ ಜೊತೆ ವಾಗ್ವಾದಕ್ಕೆ ಇಳಿದರು. ಒಬ್ಬ ಜನಪ್ರತಿನಿಧಿಯಾಗಿ ಗಾಯಗೊಂಡ ವ್ಯಕ್ತಿಯ ಆರೋಗ್ಯ ವಿಚಾರಿಸದೆ ದರ್ಪ ತೋರುತ್ತಿದ್ದೀಯಾ ಯಾವ ಮಿನಿಸ್ಟರ್ ಕರೆಸುವೆ ಕರೆಸು ಎಂದು ಎಂಎಲ್‌ಸಿ ಗೆ ಸಾರ್ವಜನಿಕರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನು‌ ಕಾರು‌ ಡಿಕ್ಕಿಯಿಂದ ಸಣ್ಣಪುಣ್ಣ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಒಂದು ಹಂತದಲ್ಲಿ‌ ಸಾರ್ವಜನಿಕರು ಮತ್ತು ಎಂ.ಎಲ್.ಸಿ ನಡುವೆ ಮಾತಿನ‌ ಚಕಮಕಿ ಮತ್ತು ವಾಗ್ವಾದ ಹೆಚ್ಚಾದ ಹಿನ್ನಲೆಯಲ್ಲಿ ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಬೇಕಾಯಿತು. ಅಪಘಾತವದರೂ ಸಹ ಕನಿಷ್ಟ ಗಾಯಾಳಿಗೆ ಚಿಕಿತ್ಸೆ ಕೊಡಿಸದೆ ದರ್ಪ ತೋರಿದ್ದು, ಅವರ ಈ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳದಲ್ಲಿಯೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank