More

    ಜೀವನವನ್ನು ಎಂಜಾಯ್ ಮಾಡಿ… ಸಮಯ ಅನ್ನೋದು ಮತ್ತೆ ಸಿಗಲ್ಲ; ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸುದೀಪ್


    ಕಟೀಲು(ದ.ಕ) :
    ಕೋಟ್ಯಂತರ ರೂ ಖರ್ಚು ಮಾಡಿ ಸಂಸ್ಥೆ ಹುಟ್ಟು ಹಾಕುವುದು ಮುಖ್ಯವಲ್ಲ. ಸಂಸ್ಥೆ ಕಟ್ಟಲಿಕ್ಕೆ ಕಷ್ಟ ಇಲ್ಲ. ಕಟ್ಟಡ, ಸ್ಕೂಲ್ ಕಟ್ಟಬಹುದು. ಆದರೆ ಅದಕ್ಕೆ ಜೀವ ತುಂಬುವುದು ವಿದ್ಯಾರ್ಥಿಗಳು. ಶಾಲೆಯನ್ನು ಉತ್ತುಂಗಕ್ಕೆ ಏರಿಸುವುದು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ವಿದ್ಯಾರ್ಥಿ ಜೀವನವನ್ನು ಚೆನ್ನಾಗಿ ಎಂಜಾಯ್ ಮಾಡಿ, ಮತ್ತೆ ಈ ಜೀವನ ಬರಲ್ಲ. ಇವತ್ತಾಗಿದ್ದು ಮತ್ತೆ ಬರಲ್ಲ. ಸಮಯ ಅನ್ನೋದು ಮತ್ತೆ ಸಿಗಲ್ಲ. ಇದ್ದಾಗ ಜಸ್ಟ್ ಎಂಜಾಯ್.

    ಹೀಗೆಂದವರು ಚಿತ್ರ ನಟ ಕಿಚ್ಚ ಸುದೀಪ್. ಶನಿವಾರ ಕಟೀಲು ದೇಗುಲದ ಶಿಕ್ಷಣ ಸಂಸ್ಥೆ ಸಂಯೋಜನೆಯಲ್ಲಿ ನಡೆದ ನುಡಿಹಬ್ಬದಲ್ಲಿ ಅವರು ಮಾತನಾಡಿದರು. ಕಟೀಲು ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಪಾಸಿಟಿವ್ ಫೀಲಿಂಗ್ ಕಂಡೆ. ತುಂಬ ಸಿಂಪಲ್ ದೇವಸ್ಥಾನ. ಮತ್ತೆ ಮತ್ತೆ ಬರಬೇಕು ಅನ್ನಿಸುತ್ತದೆ ಎಂದರು.

    ತಾಯಿನಾಡು ತುಳುನಾಡು, ತುಳು ಭಾಷೆ ನಾಡಿನ ಬಗ್ಗೆ ವಿದ್ಯಾರ್ಥಿನಿ ಗಾಯತ್ರಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ತುಳುನಾಡು ನನ್ನ ತಾಯಿನಾಡು ಅಂತ ನೀವೇ ಹೇಳಿದ್ದೀರಿ. ತಾಯಿ ಬಗ್ಗೆ ಅಭಿಪ್ರಾಯ ಹೇಳಬಾರದು. ಪ್ರೀತಿ ಇರಬೇಕು ಎಂದರು.

    ವಿದ್ಯಾರ್ಥಿ ಜೀವನದ ಸವಿ ನೆನಪು ಬಗ್ಗೆ ವಿದ್ಯಾರ್ಥಿ ಆಕಾಶ್ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್, ಪಾಸಾಗಿದ್ದೇನೆ ಸಾರ್, ಫೈಲಾಗಿಲ್ಲ ಎಂದರು. ವಿದ್ಯಾರ್ಥಿಗಳಿಗೆ ತಮ್ಮ ಸಂದೇಶವೇನು ಎಂಬ ಹೃತಿಕ್ ಅವರ ಪ್ರಶ್ನೆಗೆ, ಬೆಳೆಯೋದಕ್ಕೆ ಆತುರ ಬೇಡ, ಅರಾಮವಾಗಿ ಬೆಳೆಯಿರಿ, ಪ್ರೀತಿಯಿಂದ ಬೆಳೆಯಿರಿ. ಈ ಟೈಮ್ ಮುಂದೆ ಸಿಗಲ್ಲ ಎಂದು ಉತ್ತರಿಸಿದರು. ವಿದ್ಯಾರ್ಥಿಗಳು ರಚಿಸಿದ ಸುದೀಪ್ ಚಿತ್ರಗಳನ್ನು ಕಿಚ್ಚ ಸುದೀಪ್‌ಗೆ ಕೊಡುಗೆಯಾಗಿ ಕೊಟ್ಟು ಹಸ್ತಾಕ್ಷರ ಪಡೆದರು.

    ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಪ್ರದ್ಯುಮ್ನ ರಾವ್ ಶಿಬರೂರು, ಸನತ್ ಶೆಟ್ಟಿ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ವಾಸುದೇವ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಅನಂತ ಆಸ್ರಣ್ಣ, ಸದಾನಂದ ಆಸ್ರಣ್ಣ ವಿನಿತ್‌ರಾಜ್ ಶೆಟ್ಟಿ, ಮೋಹನ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಸಾಯಿನಾಥ ಶೆಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts