More

    ಪ್ರಧಾನಿ ಮೋದಿಯಿಂದ ದೇಶದ ಕೀರ್ತಿ ಹೆಚ್ಚಿದೆ : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಣ್ಣನೆ, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ

    ಕೆಜಿಎಫ್: ವಿಶ್ವಾದ್ಯಂತ ದೇಶದ ಕೀರ್ತಿ ಹೆಚ್ಚುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶ್ರಮ ಹೆಚ್ಚಿದೆ. ಬಿಜೆಪಿಯಲ್ಲಿ ತತ್ವ, ದೇಶ ಮೊದಲು ನಂತರ ಪಕ್ಷ. ಆದರೆ ಕಾಂಗ್ರೆಸ್​ನಲ್ಲಿ ಕುಟುಂಬ ತತ್ವ ಮೊದಲು ನಂತರ ದೇಶ. ಕಾಂಗ್ರೆಸ್​ ಮುಳುಗುವ ಹಡುಗು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವ್ಯಂಗ್ಯವಾಡಿದರು.
    ನಗರದ ರಾರ್ಬಟ್​ಸನ್​ಪೇಟೆ ಅಶೋಕ ನಗರದಲ್ಲಿ ಮುನೇಶ್ವರ ದೇವಾಲಯದ ಕುಂಭಾಭಿಷೇಕ ಮಹೋತ್ಸವದಲ್ಲಿ ಬಿಜೆಪಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
    ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ವಿದೇಶಗಳಿಗೆ ತೆರಳುವುದು ಭಾರತ ದೇಶದ ರಕ್ಷಣೆ ಅಭಿವೃದ್ಧಿಗಾಗಿ. ಆದರೆ ಕಾಂಗ್ರೆಸ್​ ಸಂಸದ ರಾಹುಲ್​ಗಾಂಧಿ ವಿದೇಶಕ್ಕೆ ತೆರಳುವುದು ಅನ್ಯ ಕಾರಣಗಳಿಗೆ ಎಂದು ಹೇಳುತ್ತಾರೆ. ಇದೇ ಬಿಜೆಪಿಗೂ ಕಾಂಗ್ರೆಸ್​ಗೂ ಇರುವ ವ್ಯತ್ಯಾಸ ಎಂಬುದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
    ಸಂಸದ ಮುನಿಸ್ವಾಮಿ ಮಾತನಾಡಿ, ಜಿಲ್ಲೆಯ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರದ ಸಚಿವರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಬಿಜಿಎಂಎಲ್​ ವ್ಯಾಪ್ತಿಯಲ್ಲಿ ಲಭ್ಯವಿರುವ 970 ಎಕರೆ ಜಮೀನನ್ನು ಈಗಾಗಲೇ ಸರ್ವೇ ಮಾಡಲಾಗಿದ್ದು, ಕೇಂದ್ರ ಸ್ವಾಮ್ಯದ ಜಮೀನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಗೊಳ್ಳಲಿದ್ದು, ಲಭ್ಯವಿರುವ ಜಮೀನಿನಲ್ಲಿ ಕೈಗಾರಿಕಾ ಹಬ್​ ನಿಮಾರ್ಣಕ್ಕೆ ಸರ್ಕಾರ ಮುಂದೆ ಬರಲಿದೆ. ಇದರಿಂದ ಈ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ ಎಂದರು.
    ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದ್ದು ಕೆಜಿಎಫ್​ನಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸುವ ನಿಟ್ಟಿನಲ್ಲಿ ಮಾಜಿ ಶಾಸಕ ಸಂಪಂಗಿ, ನಗರ ಬಿಜೆಪಿ ಅಧ್ಯಕ್ಷ ಕಮಲನಾಥನ್​, ಜಯಪ್ರಕಾಶ್​ನಾಯ್ಡು, ಸುರೇಶ್​ ನಾರಾಯಣಕುಟ್ಟಿ ಸಹಕಾರದೊಂದಿಗೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
    ಬಹಿರಂಗ ಸಭೆಯಲ್ಲಿ ಭಾಗವಹಿದ್ದ ಅಣ್ಣಮಲೈ ನಂತರ ಆಶೋಕನಗರದಲ್ಲಿರುವ ಮುನೇಶ್ವರ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.
    ಅಂಬೇಡ್ಕರ್​ ಪ್ರತಿಮೆಗೆ ಮಾರ್ಲಾಪಣೆ ಮಾಡುವಾಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್​ ನಾರಾಯಣಕುಟ್ಟಿ ಮುನೇಶ್ವರ ದೇವಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳುತ್ತಿದ್ದಂತೆ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಜಯಪ್ರಕಾಶ್​ನಾಯ್ಡು ಮಧ್ಯ ಪ್ರವೇಶ ಮಾಡಿ ಬಹಿರಂಗ ಸಭೆಗೆ ನಾವು ಜನರನ್ನು ಕರೆ ತಂದಿರುವುದು. ಆದ್ದರಿಂದ ಮೊದಲು ಬಹಿರಂಗ ಸಭೆಗೆ ತೆರಳಲಿ ಎಂದು ಹೇಳಿದ್ದು, ಸ್ಥಳದಲ್ಲಿ ಹಾಜರಿದ್ದ ಕಾರ್ಯಕರ್ತರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
    ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ,ನಾರಾಯಣಸ್ವಾಮಿ, ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್​, ಬಿಜೆಪಿ ಮುಖಂಡರಾದ ಚಂದ್ರಾರೆಡ್ಡಿ, ಆಹಾರ ಮತ್ತು ನಾಗರಿಕರ ಸರಬರಾಜು ನಿಗಮದ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್​, ಮಾಜಿ ಜಿಪಂ ಸದಸ್ಯ ಮಹೇಶ್​, ನಗರ ಬಿಜೆಪಿ ಅಧ್ಯಕ್ಷ ಕಮಲ್​ನಾಥನ್​, ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್​ನಾಯ್ಡು, ರವಿಕುಮಾರ, ಗಾಂಧಿ, ವೇಣಿಪಾಂಡ್ಯನ್​, ರಾಧವಿಜಿಕುಮಾರ್​ ಇತರರಿದ್ದರು.

    ಬಿಜಿಎಂಎಲ್​ ಮುಚ್ಚಲು ಕಾಂಗ್ರೆಸ್​ ಮಾಜಿ ಸಂಸದ ಕೆಎಚ್​ ಕಾರಣ: ಬಿಜಿಎಂಎಲ್​ ಕಾರ್ಖಾನೆಗೆ ಬೀಗ ಹಾಕಲು ಕೋಲಾರ ಜಿಲ್ಲೆಯನ್ನು ಸತತವಾಗಿ 7 ಬಾರಿ ಪ್ರತಿನಿಧಿಸಿದ ಕೆ.ಎಚ್​.ಮುನಿಯಪ್ಪ ಕಾರಣ. ಆದರೆ, ಬಿಜೆಪಿ ಸಂಸದ ಮುನಿಸ್ವಾಮಿ ಬಿಜಿಎಂಎಲ್​ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಲ್ಲಿ ಸತತ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ಯಶಸ್ವಿಯಾಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅಣ್ಣಾಮಲೈ ಹೇಳಿದರು.

    ಶಾಸಕಿ ಶಾಸಕಿ ಎಂ.ರೂಪಕಲಾ ಆತ್ಮವಲೋಕನ ಮಾಡಿಕೊಳ್ಳಲಿ: ಕೆಜಿಎಫ್​ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಮೃತಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳು ಯಾವ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದೆ ಎಂಬುದನ್ನು ಶಾಸಕಿ ಎಂ.ರೂಪಕಲಾ ಅರಿತುಕೊಳ್ಳಲಿ ಎಂದು ಮುನಿಸ್ವಾಮಿ ಹೇಳಿದರು.

    ಮಾಜಿ ಶಾಸಕ ಸಂಪಂಗಿ ಗೈರು: ಮುನೇಶ್ವರ ದೇವಾಲಯ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸಂಪಂಗಿ ಹಾಗೂ ಬೆಂಬಲಿಗರು ಅಣ್ಣಮಲೈ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇದು ಅವರ ಬೆಂಬಲಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿ ಸಂಪಂಗಿ ಗೈರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts