More

    ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ

    ಚಿಕ್ಕಮಗಳೂರು: ಮಕ್ಕಳಲ್ಲಿರುವ ವಿಭಿನ್ನ ಪ್ರತಿಭೆಯನ್ನು ಶಿಕ್ಷಕರು ಹಾಗೂ ಪಾಲಕರು ಗುರುತಿಸುವ ಮೂಲಕ ಮಕ್ಕಳನ್ನು ಉನ್ನತ ಮಟ್ಟದಲ್ಲಿ ಬೆಳೆಸಲು ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಹೇಳಿದರು. ಗೌರಿಕಾಲುವೆ ವಿದ್ಯಾಭಾರತಿ ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಕ್ಷೇತ್ರ ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಗರ 1 ಕ್ಲಸ್ಟರ್ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.

    ಎಲ್ಲ ಮಕ್ಕಳೂ ಪ್ರತಿಭೆ ಹೊಂದಿರುತ್ತಾರೆ. ಅದನ್ನು ಹೊರತರುವ ಮಾರ್ಗ ತೋಚದಿರುವ ಹಿನ್ನೆಲೆಯಲ್ಲಿ ಪಾಲಕರು ಹಾಗೂ ಶಿಕ್ಷಕರು ಸೂಕ್ಷ್ಮವಾಗಿ ಗಮನಿಸಿ ಹೊರತರುವ ನಿಟ್ಟಿನಲ್ಲಿ ಶ್ರಮವಹಿಸಿದರೆ ಯಶಸ್ಸು ಲಭಿಸಲಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಡೊಳ್ಳುಕುಣಿತ, ನಂದಿಕುಣಿತ ಕಾರ್ಯಕ್ರಮಗಳಿಗೆ ಬಹುಮಾನ ವಿತರಿಸುವ ವಿಶ್ವಾಸವನ್ನು ಕಲಾವಿದರು ಹೊಂದಿದ್ದರು. ಆದರೆ ಉತ್ತಮ ಅಂಶಗಳನ್ನು ಹೊಂದಿರುವಂತಹ ಗ್ರಾಮೀಣ ಭಾಗದ ಹೊಲಊಳುತ್ತ ಪದಕಟ್ಟುವವರಿಗೆ, ಬೀಜ ಬಿತ್ತುವವರಿಗೆ, ಗಾಡಿ ಓಡಿಸುವ ಇತರೆ ನೃತ್ಯಗಾರರಿಗೆ ಬಹುಮಾನ ವಿತರಿಸಲಾಯಿತು. ಇದರಿಂದ ಕೆಲವರಿಗೆ ಬೇಸರವಾಗಿರಬಹುದು. ಆದರೆ ಜಾನಪದದಲ್ಲಿ ಉತ್ತಮ ಅಂಶಗಳನ್ನು ಹೊಂದಿದರೆ ಮಾತ್ರ ಗೌರವ ದೊರೆಯಲಿದೆ ಎಂದರು.

    ವಿದ್ಯಾಭಾರತಿ ಶಾಲೆ ಸಂಸ್ಥಾಪಕ ಅಪ್ಸರ್ ಅಹಮ್ಮದ್ ಮಾತನಾಡಿ, ಖಾಸಗಿ ಶಾಲೆಗಳು ಉದ್ದೇಶ ಹಣ ಗಳಿಸುವುದು ಎಂಬುದು ಕೆಲವರ ಅಭಿಪ್ರಾಯ. ಆದರೆ ಸುಮಾರು 29 ಶಾಲೆಗಳಿಂದ ಮಕ್ಕಳನ್ನು ಒಟ್ಟುಗೂಡಿಸಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿದ್ಯಾಭಾರತಿ ಶಾಲೆ ಕಾರ್ಯಕ್ರಮ ಆಯೋಜಿಸಿದೆ. ಇದು ಮಕ್ಕಳ ಪ್ರತಿಭೆ ಹೊರತರುವ ಕಾರ್ಯ ಎಂದರು. ನಗರಸಭಾ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಪಾಲಕರು ಶ್ರಮ ವಹಿಸಬೇಕು. ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಮುಂದೆ ಸಾಗಲು ಪ್ರೋತ್ಸಾಹಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts