More

    ವಿದ್ಯಾಪೀಠ ಹಾಸ್ಟೆಲ್‌ನಲ್ಲಿ 8 ವಿದ್ಯಾರ್ಥಿಗಳಿಗೆ ಸೋಂಕು; ಒಂದೇ ತಿಂಗಳಲ್ಲಿ 11ನೇ ಕ್ಲಸ್ಟರ್ ಮಾದರಿ ಕೋವಿಡ್​ ಪ್ರಕರಣ

    ಬೆಂಗಳೂರು: ನಗರದ ವಿದ್ಯಾಪೀಠದ ಸರ್ಕಾರಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ನಿಲಯದ 8 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಇವರ ಸಂಪರ್ಕಕ್ಕೆ ಬಂದಿರುವ 158 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ವಿದ್ಯಾಪೀಠದ ಹಾಸ್ಟೆಲ್‌ನಲ್ಲಿ ಐದಕ್ಕಿಂತ ಅಧಿಕ ಜನರಿಗೆ ಸೋಂಕು ಪತ್ತೆಯಾಗುವ ಮೂಲಕ ಇದು ಒಂದು ತಿಂಗಳ ಅವಧಿಯಲ್ಲಿ 11ನೇ ಕ್ಲಸ್ಟರ್ ಮಾದರಿ ಕರೊನಾ ಸೋಂಕಿನ ಪ್ರಕರಣವಾಗಿದೆ.

    ಮಾ.8ಕ್ಕೆ ಸರ್ಕಾರಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿತ್ತು. ನಂತರ ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ 7 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಜಯನಗರದ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರ ಸಂಪರ್ಕಕ್ಕೆ ಬಂದ 158 ವಿದ್ಯಾರ್ಥಿಗಳನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ ಎಂದು ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ಮಾಹಿತಿ ನೀಡಿದ್ದಾರೆ.

    ಈವರೆಗೆ ಕಂಡುಬಂದ ಕ್ಲಸ್ಟರ್ ಕರೊನಾ ಪ್ರಕರಣದ ವಿವರ

    1. ಕಾವಲ್ ಭೈರಸಂದ್ರದ ಮಂಜುಶ್ರೀ ನರ್ಸಿಂಗ್ ಕಾಲೇಜು: 40
    2. ಬಿಳೇಕಹಳ್ಳಿಯ ರಾಜ್ ಲೇಕ್ ವ್ಯೂ ವಸತಿ ಸಮುಚ್ಚಯ: 109
    3. ಬೆಳ್ಳಂದೂರಿನ ಎಸ್‌ಜೆಆರ್ ಅಪಾರ್ಟ್‌ಮೆಂಟ್: 22
    4. ಸಂಭ್ರಮ್ ಕಾಲೇಜು: 11
    5. ಸಂಭ್ರಮ್ ಕಾಲೇಜಿನ ಪೇಯಿಂಗ್ ಗೆಸ್ಟ್ ಹೌಸ್: 8
    6. ಅಗ್ರಗಾಮಿ ಕಾಲೇಜು: 7
    7. ವೆನಿಜಿಯ ಅಪಾರ್ಟ್‌ಮೆಂಟ್: 6
    8. ವಸಂತಪುರದ ಶ್ರೀ ಸಾಯಿ ಅಪಾರ್ಟ್‌ಮೆಂಟ್: 8
    9. ಕೆ.ಆರ್.ಪುರದ ಪ್ರಾಥಮಿಕ ಶಾಲೆ: 9
    10. ಥಣಿಸಂದ್ರದ ನವಗ್ರಹ ಅಪಾರ್ಟ್‌ಮೆಂಟ್: 6
    11. ವಿದ್ಯಾಪೀಠದ ಸರ್ಕಾರಿ ವಿದ್ಯಾರ್ಥಿ ನಿಲಯ: 8

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts