More

    ಪುಂಡರ ವಿರುದ್ಧ ಕ್ರಮ ಜರುಗಿಸಿ

    ರಾಮದುರ್ಗ: ಕನ್ನಡ ಧ್ವಜ ಸುಟ್ಟು ಕನ್ನಡಕ್ಕೆ ಅಪಮಾನ ಮಾಡುತ್ತಿರುವ ಹಾಗೂ ಸ್ವಾತಂತ್ರೃ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಪುಂಡರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳಿಂದ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕನ್ನಡ ಬಾವುಟ ಮೆರವಣಿಗೆ ಮೂಲಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

    ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಎಂಇಎಸ್ ಹಾಗೂ ಶಿವಸೇನೆ ಪುಂಡರು ಕೂಡಲೇ ಗಡಿಪಾರು ಮಾಡಬೇಕು. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೃತ್ಯಗಳಿಗೆ ಮಹಾರಾಷ್ಟ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಡಿ ಬೆಂಕಿ ಹಚ್ಚುವ ಮೂಲಕ ಕನ್ನಡಿಗರ ಅಪಾರ ಆಸ್ತಿಗಳಿಗೆ ಹಾನಿ ಉಂಟು ಮಾಡಿದ್ದಾರೆ. ಇಂತವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪ್ರಮಾದ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.

    ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಮತ್ತು ಪ್ರವೀಣ ಶೆಟ್ಟಿ ಬಣ), ಪ್ರದೇಶ ಕುರುಬರ ಸಂಘ ಹಾಗೂ ಹಾಲುಮತ ಮಹಾಸಭಾ ತಾಲೂಕು ಘಟಕ, ಕರ್ನಾಟಕ ಭೀಮ ಸೇನೆ ಸಮಿತಿ, ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕೂಲಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು 100 ಮೀ. ಉದ್ದದ ಹಳದಿ ಮತ್ತು ಕೆಂಪು ಬಣ್ಣದ ಬೃಹತ್ ಕನ್ನಡ ಬಾವುಟದೊಂದಿಗೆ ಮೆರವಣಿಗೆ ನಡೆಸಿದರು. ಶಿವರೆಡ್ಡಿ ಜಗಾಪುರ, ವಿಶ್ವನಾಥ ಕುಂಬಾರ, ಈರಣ್ಣ ಕಲ್ಯಾಣಿ, ವಿನಯ ಚಂದರಗಿ, ಬಾಲು ನಿರಂಜನ, ಅಪ್ಪಣ್ಣ ಬಾಡಗಾರ, ವಿಠ್ಠಲ ಜಟಗಣ್ಣವರ, ಅಶೋಕ ಮೆಟಗುಡ್ಡ, ರುದ್ರಣ್ಣ ಗಡದೆ, ಕೆಂಪಣ್ಣ ಕ್ವಾರಿ, ಮಂಜುನಾಥ ಹದ್ಲಿ, ನೂರಮಹ್ಮದ್ ಅಕ್ಕೊಜಿ, ಮಂಜುನಾಥ ಮಾದರ, ಯಲ್ಲಪ್ಪ ಮಾದರ, ಪುಷ್ಪಾ ಹಿರೇಮಠ, ಭೂಮಿಕಾ ತಳವಾರ, ಶಶಿಕಾಂತ ನೆಲ್ಲೂರ, ರಾಘವೇಂದ್ರ ದೊಡಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts