More

    ಪರಿಸ್ಥಿತಿಯ ಗಂಭೀರತೆ ಅರಿಯದ ಜನತೆ

    ಹಾವೇರಿ: ಕರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಸಾಮಾಜಿಕ ಅಂತರವೇ ಮದ್ದು ಎಂದು ಸರ್ಕಾರ ಲಾಕ್​ಡೌನ್ ಘೋಷಿಸಿದೆ. ಆದರೆ, ನಗರದ ತರಕಾರಿ ಹರಾಜು ಮಾರುಕಟ್ಟೆಯಲ್ಲಿ ಇದ್ಯಾವುದೂ ಪಾಲನೆಯಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಹೆಜ್ಜೆಹೆಜ್ಜೆಗೂ ಪೊಲೀಸ್ ಸಿಬ್ಬಂದಿ ಇದ್ದರೂ ಪ್ರಯೋಜನಕ್ಕಿಲ್ಲದಂತಾಗಿದೆ.

    ನಗರದ ಹಾನಗಲ್ಲ ರಸ್ತೆಯಲ್ಲಿ ಗುರುವಾರ ತರಕಾರಿಯ ಹರಾಜಿಗೆ ಹತ್ತಾರು ಹಳ್ಳಿಗಳಿಂದ ರೈತರು, ಅದನ್ನು ಖರೀದಿಸುವವರು, ಮಾರಾಟ ಮಾಡುವವರು ಸೇರಿ ಐನೂರಕ್ಕೂ ಅಧಿಕ ಜನರು ಬೆಳ್ಳಂಬೆಳಗ್ಗೆ ಬಂದಿದ್ದರು. ಅಲ್ಲಿ 30ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಡಿವೈಎಸ್​ಪಿ, ಸಿಪಿಐಗಳು ಇದ್ದರು. ಆದರೆ, ಅವರ್ಯಾರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯಾಪಾರಸ್ಥರಿಗಾಗಲಿ, ರೈತರಿಗಾಗಲಿ, ಕೊಳ್ಳುವವರಿಗಾಗಲಿ ಬರಿ ಬಾಯಿ ಮಾತಲ್ಲೇ ಹೇಳುತ್ತ ಸಂಚರಿಸಿದರು. ಇದರಿಂದ ಯಾವುದೇ ಪ್ರಯೋಜನವಿಲ್ಲದೇ ಎಲ್ಲರೂ ಗುಂಪುಗೂಡಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

    ಸೊಪ್ಪು ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ: ತರಕಾರಿ ಹರಾಜು ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿಯಾಗುತ್ತದೆ ಎಂದು ಸೊಪ್ಪು ಹರಾಜನ್ನು ಹಾನಗಲ್ಲ ರಸ್ತೆ ಬದಿಯ ಪುಟ್​ಪಾತ್​ನಲ್ಲಿ ನಡೆಸಲಾಯಿತು. ಇಲ್ಲಿ ತಹಸೀಲ್ದಾರ್ ಶಂಕರ ಜಿ.ಎಸ್. ನೇತೃತ್ವ ವಹಿಸಿ ಸ್ವಲ್ಪ ಮಟ್ಟಿಗೆ ಜನಸಂದಣಿಯನ್ನು ನಿಯಂತ್ರಣಕ್ಕೆ ತಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts