More

    ಪರಸ್ಪರ ಅಂತರ ಕಾಯುವುದೇ ಸವಾಲು…!

    ರಾಣೆಬೆನ್ನೂರ: 3.0 ಲಾಕ್​ಡೌನ್ ಅವಧಿ ಮೇ 17ರಂದು ಕೊನೆಯಾಗಲಿದೆ. ಆದರೆ, ಜನ ಮಾತ್ರ ಗುಂಪು ಗುಂಪಾಗಿ ಬ್ಯಾಂಕ್, ಎಟಿಎಂ, ಸರ್ಕಾರಿ ಕಚೇರಿ ಸೇರಿ ವಿವಿಧೆಡೆ ಜನಸಂದಣಿ ಪ್ರದೇಶದಲ್ಲಿ ಪರಸ್ಪರ ಅಂತರ ಕಾಯುವುದೇ ಸವಾಲಾಗಿದೆ.

    ನಗರದ ಎಟಿಎಂ ಹಾಗೂ ಬ್ಯಾಂಕ್​ಗಳಿಗೆ ಹೋಗಲು ಜನರಿಗೆ ಭಯ ಶುರುವಾಗಿದೆ. ಹಲವು ಜನ ಬಳಸುವ ಎಟಿಎಂಗಳಲ್ಲಿ ಸದಾ ಜನಜಂಗುಳಿ ಇರುತ್ತದೆ.

    ದಂಡ ವಿಧಿಸಿದರೂ ಲೆಕ್ಕಕ್ಕಿಲ್ಲ: ಜಿಲ್ಲೆಯಲ್ಲಿ ಈಗಾಗಲೇ ಮೂರು ಕರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನಲ್ಲಿ ಈಗಾಗಲೇ ಹೊರ ಜಿಲ್ಲೆಯಿಂದ ಬಂದ 2164 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಬೇರೆ ರಾಜ್ಯದಿಂದ ಬಂದಿರುವ 39 ಜನರನ್ನು ಹಾಸ್ಟೆಲ್ ಕ್ವಾರಂಟೈನ್ ಮಾಡಲಾಗಿದೆ. ಎರಡ್ಮೂರು ದಿನದಿಂದ ನಗರಸಭೆ ಅಧಿಕಾರಿಗಳು ಪರಸ್ಪರ ಅಂತರ ಕಾಯ್ದುಕೊಳ್ಳದ 156 ಜನರಿಗೆ 100 ರೂ.ನಂತೆ ದಂಡ ವಿಧಿಸಿದ್ದು, 15,600 ರೂ. ವಸೂಲಿ ಮಾಡಿದ್ದಾರೆ. ಆದರೂ ಜನತೆ ಮಾತ್ರ ಸರ್ಕಾರದ ನಿಯಮಾವಳಿ ಪಾಲಿಸುವಲ್ಲಿ ನಿಷ್ಕಾಳಜಿ ತೋರುತ್ತಿದ್ದಾರೆ.

    ಲಾಕ್​ಡೌನ್ ಪಾಲಿಸಲು ಸರ್ಕಾರ ಹಲವು ನಿಯಮಗಳನ್ನು ರೂಪಿಸಿದೆ. ಆದರೆ, ಬ್ಯಾಂಕ್​ನಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ. ನಗರದ ಒಂದೊಂದು ಎಟಿಎಂಗಳ ಒಳಗೆ ಕನಿಷ್ಠ 8ರಿಂದ 10 ಜನ ಸೇರುತ್ತಿದ್ದಾರೆ. ಮಾಸ್ಕ್ ಕೂಡ ಧರಿಸುತ್ತಿಲ್ಲ. ಒಬ್ಬರನ್ನೊಬ್ಬರು ತಳ್ಳುತ್ತ, ತಿಕ್ಕಾಡುತ್ತ ಹಣ ಪಡೆದು ಅಥವಾ ತುಂಬಿ ಬರುವುದರಲ್ಲಿ ಸುಸ್ತಾಗಿ ಹೋಗುತ್ತಾರೆ.

    ನಗರದಲ್ಲಿನ ಬೆರಳೆಣಿಕೆಯಷ್ಟು ಬ್ಯಾಂಕ್​ಗಳ ಎಟಿಎಂಗಳನ್ನು ಬಿಟ್ಟರೆ ಶೇ. 90ರಷ್ಟು ಎಟಿಎಂಗಳಲ್ಲಿ ಭದ್ರತೆಯಿಲ್ಲ. ಸೆಕ್ಯುರಿಟಿ ಗಾರ್ಡ್, ನೆಟ್​ವರ್ಕ್ ಕೂಡ ಸರಿಯಾಗಿ ಇರುವುದಿಲ್ಲ. ಎಟಿಎಂಗಳಿಗೆ ಬರುವವರಿಗೆ ಸ್ಯಾನಿಟೈಸರ್ ಕೊಡುವುದು ಕನಸಿನ ಮಾತು. ಎಟಿಎಂಗಳನ್ನು ಸುಸಜ್ಜಿತಗೊಳಿಸಿ ಹಣ ತುಂಬಿದರೆ ಗ್ರಾಹಕರ ತೊಂದರೆ ತಪ್ಪುತ್ತದೆ ಎಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

    ರಸ್ತೆಯಲ್ಲಿ ಸಂಚರಿಸುವ ಬಡಪಾಯಿಗಳಿಂದ, ಅಂಗಡಿಕಾರರಿಂದ ದಂಡ ವಸೂಲಿ ಮಾಡುವ ಅಧಿಕಾರಿಗಳು, ನಿಯಮಗಳನ್ನು ಗಾಳಿಗೆ ತೂರಿರುವ ಬ್ಯಾಂಕ್​ಗಳಿಗೂ ದಂಡ ವಿಧಿಸಬೇಕು. ಸರ್ಕಾರಿ ಕಚೇರಿಗಳ ಎದುರು ಬೇಕಾಬಿಟ್ಟಿಯಾಗಿ ನಿಲ್ಲುವವರಿಗೆ ದಂಡ ಹಾಕಬೇಕು.

    | ಹರ್ಷಾ ಲಾಂಜೇಕರ, ಸ್ಥಳೀಯ ನಿವಾಸಿ

    ನಗರದ ಸರ್ಕಾರಿ ಕಚೇರಿ, ಬ್ಯಾಂಕ್, ಎಟಿಎಂ ಎದುರು ಸೇರುತ್ತಿರುವ ಜನತೆಯಿಂದ ಆಗುತ್ತಿರುವ ತೊಂದರೆ ಕುರಿತು ಸಂಬಂಧಪಟ್ಟವರೊಂದಿಗೆ ರ್ಚಚಿಸಿ, ಕ್ರಮ ಜರುಗಿಸಲಾಗುವುದು.

    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts