More

    ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸಿ

    ಗಂಗಾವತಿ: ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸುವಂತೆ ಒತ್ತಾಯಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನಗರದ ಬಸವೇಶ್ವರ ಪ್ರತಿಮೆ ಬಳಿ ಶನಿವಾರ ಸಂಜೆ ವರೆಗೆ ಧರಣಿ ನಡೆಸಿ ಶಿರಸ್ತೇದಾರ್ ರವಿಕುಮಾರ ನಾಯ್ಕವಾಡಿಗೆ ಮನವಿ ಸಲ್ಲಿಸಿದರು.

    ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಸರ್ಕಾರಿ ಕಚೇರಿಗಳು ದುಬಾರಿ ಬಾಡಿಗೆಯ ಖಾಸಗಿ ಕಟ್ಟಡದಲ್ಲಿದ್ದು, ಸರ್ಕಾರಿ ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಕೆಲ ಕಚೇರಿ ಕಟ್ಟಡಗಳು ಸುಸ್ಥಿತಿಯಲ್ಲಿದ್ದರೂ, ಹಳೇ ಕಟ್ಟಡ ಎಂಬ ಕಾರಣಕ್ಕಾಗಿ ಪಾಳು ಬಿದ್ದಿವೆ.

    ಗುಂಡಮ್ಮ ಕ್ಯಾಂಪ್‌ನಲ್ಲಿ ಸಿಟಿ ಮಾರುಕಟ್ಟೆಗೆ ಕೋಟ್ಯಂತರ ರೂ. ಖರ್ಚು ಮಾಡಿದ್ದರೂ, ಇದುವರೆಗೆ ಉದ್ಘಾಟನೆಯಾಗಿಲ್ಲ. ಉಪವಿಭಾಗ ಆಸ್ಪತ್ರೆಯಲ್ಲಿ ತಜ್ಞವೈದ್ಯರ ನಿಯೋಜನೆ, ಹಾಸ್ಟೆಲ್, ಅಂಗನವಾಡಿಗಳಿಗೆ ಸ್ವಂತ ಕಟ್ಟಡ, ಗುತ್ತಿಗೆ ನೌಕರರ ಕಾಯಂ, ಕನಕಗಿರಿ, ಕಾರಟಗಿಗೆ ಬಸ್ ಡಿಪೋ ಆರಂಭ, ಶಾಲಾ ಕಾಲೇಜುಗಳಲ್ಲಿ ನೈರ್ಮಲೀಕರಣಕ್ಕಾಗಿ ಡಿ ಗ್ರೂಪ್ ನೌಕರರ ನೇಮಕ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಬಣ ಮತ್ತು ರೈತ ಸಂಘದ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

    ವಿವಿಧ ಸಂಘಟನೆ ಪದಾಧಿಕಾರಿಗಳಾದ ಜಡಿಯಪ್ಪ ಹಂಚಿನಾಳ್, ಹರೀಶ್ ಚವ್ಹಾಣ, ಹಂಪೇಶ ಜಿ.ಹರಿಗೋಲು, ಶರಣಪ್ಪ ದೊಡ್ಮನಿ, ಕೃಷ್ಣಮೆಟ್ರಿ, ಚಂದ್ರಶೇಖರ್ ನಿಸರ್ಗ, ಕನಕರಾಯ ಹೊಸಳ್ಳಿ, ಆಂಜನೇಯ, ಚಾಂದ್‌ಪಾಶಾ, ದುರುಗೇಶ, ಅಮರೇಶ ಪಾಟೀಲ್, ಪಂಪಾಪತಿ ಕುರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts