More

    ಪ್ರಮುಖ ಚರ್ಚೆಗಳೊಂದಿಗೆ ಶೆರ್ಪಾ ಯಶಸ್ವಿ

    ಹೊಸಪೇಟೆ: ರೋಮ್ ಬಳಿಕ ಅತ್ಯಂತ ಶ್ರೀಮಂತ ಸಾಮ್ರಾಜ್ಯ ಎಂಬ ಹೆಗ್ಗಳಿಕೆ ಪಡೆದ ವಿಜಯನಗರ ರಾಜಧಾನಿ ಹಂಪಿಯಲ್ಲಿ ಕಳೆದ ಒಂದು ವಾರದಿಂದ ನಡೆದ ಜಿ-20 ಭಾಗವಾಗಿ ಆಯೋಜಿಸಿದ್ದ ಎರಡು ಹಂತದ ಸಭೆಗಳು ಭಾನುವಾರ ತೆರೆ ಕಂಡವು. ಹಂಪಿ ನೆಲದಲ್ಲಿ ಚರ್ಚಿಸಿದ ಜಾಗತಿಕ ಮಟ್ಟದ ವಿಚಾರಗಳ ಸಮಾಲೋಚನೆ ಫಲಪ್ರದಗೊಂಡಿವೆ.

    ಸಾಂಸ್ಕೃತಿಕ ಕಾರ್ಯಕಾರಿ ತಂಡದ ಸಭೆಯಲ್ಲಿ ದೇಶ-ವಿದೇಶಗಳ ಸಂಸ್ಕೃತಿ, ಕಲೆ ಕುರಿತು ಪ್ರಮುಖ ಚರ್ಚೆಗಳು ನಡೆದವು. ನಾನಾ ಕಾರಣಗಳಿಂದ ಇತರೆ ದೇಶಗಳ ಪಾಲಾಗಿರುವ ಕಲೆ, ಸಂಸ್ಕೃತಿ ಹಿರಿಮೆಯನ್ನು ಮೂಲ ದೇಶಗಳ ಹೆಸರಲ್ಲೇ ದಾಖಲಿಸುವುದು, ಸಾಂಸ್ಕೃತಿಕ ಮಹತ್ವವುಳ್ಳ ಶಿಲ್ಪಗಳು, ಪ್ರತಿಮೆ ಹಾಗೂ ಕಲಾಕೃತಿಗಳನ್ನು ಮಾತೃ ರಾಷ್ಟ್ರಗಳಿಗೆ ಹಿಂದಿರುಗಿಸುವ ಬಗ್ಗೆ ಸವಿಸ್ತಾರ ಚರ್ಚೆ ನಡೆಸಲಾಯಿತು.

    ಈ ನಿಟ್ಟಿನಲ್ಲಿ 1970ರ ಯುನೆಸ್ಕೋ ಒಡಂಬಡಿಕೆಯಂತೆ ಜಿ-20 ರಾಷ್ಟ್ರಗಳು ಪರಸ್ಪರ ಸಹಕರಿಸಬೇಕು ಎಂಬುದು ಸೇರಿದಂತೆ ಮಹತ್ವದ ಶಿಫಾರಸುಗಳನ್ನು ಸಭೆ ಹೇಳಿದೆ. ಇದರ ಫಲವಾಗಿ ಇತರೆ ದೇಶಗಳಲ್ಲಿರುವ 150ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾಕೃತಿಗಳು ಭಾರತಕ್ಕೆ ಮರಳುವ ವಿಶ್ವಾಸವನ್ನು ಗಟ್ಟಿಗೊಳಿಸಿದೆ. ಅಲ್ಲದೇ, ಸಿಡಬ್ಲುೃ ಸಭೆ ಭಾಗವಾಗಿ ಲಂಬಾಣಿ ಕಸೂತಿ ಪ್ರದರ್ಶನ ಗಿನ್ನಿಸ್ ದಾಖಲೆ ಬರೆದಿರುವುದು ಗಮನಾರ್ಹ.

    ಇದನ್ನು ಓದಿ:ಅನಿಸಿಕೆ: ಚೀನಾವನ್ನು ಕಟ್ಟಿಹಾಕಲು ಸಮರ್ಥವಾಗಿದೆ ಭಾರತ

    ಹಂಪಿಯಲ್ಲಿ ನಡೆದ ಮೂರನೇ ಶೆರ್ಪಾ ಸಭೆಯೂ ಯಶಸ್ವಿಯಾಗಿದೆ. ಮೂರು ದಿನಗಳ ಸಭೆಯಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆ, ವಾಣಿಜ್ಯದ ದೃಷ್ಟಿಯಿಂದ ನೀಲಿ ಸಮುದ್ರಗಳ ಸಮರ್ಪಕ ಬಳಕೆ, ಹವಾಮಾನ ಬದಲಾವಣೆ, ಶಿಕ್ಷಣ, ಆರೋಗ್ಯ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳ ಹೆಚ್ಚಿಸಲು ತಂತ್ರಜ್ಞಾನ ಬಳಕೆ, ಮಹಿಳೆಯರ ಸಬಲೀಕರಣ, ಅಪೌಷ್ಟಿಕತೆ ನಿಯಂತ್ರಣ, ಸೈಬರ್ ಕ್ರೈಂ, ಭಯೋತ್ಪಾದನೆ ನಿಗ್ರಹ, ಶಾಂತಿ ಸ್ಥಾಪನೆ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

    ಆಫ್ರಿಕಾ ಒಕ್ಕೂಟಕ್ಕೆ ಕಾಯಂ ಸದಸ್ಯತ್ವ ನೀಡುವುದಕ್ಕೆ ಒಕ್ಕೋರಲ ಬೆಂಬಲ ವ್ಯಕ್ತವಾಯಿತು.
    ಜಿ-20 ಸಭೆ ಭಾಗವಾಗಿ ಹಂಪಿ ಐತಿಹಾಸಿಕ ಸ್ಮಾರಕಗಳ ವೀಕ್ಷಿಸಿದ ವಿದೇಶಿ ಗಣ್ಯರು, ಇಲ್ಲಿನ ಶಿಲ್ಪಕಲೆ, ವಾಸ್ತು ಶಿಲ್ಪಕ್ಕೆ ಮನಸೋತರು. ಭಾರತೀಯ ಸಂಗೀತದ ರಸದೌತಣಕ್ಕೆ ಜಿ-20 ಪ್ರತಿನಿಧಿಗಳು ಮನಸೋತರು.

    ಹಂಪಿಯಲ್ಲಿ ನಡೆದ ಮೂರನೇ ಶೆರ್ಪಾ ಸಭೆಗಳು ಅಭೂತಪೂರ್ವವಾಗಿ ಯಶಸ್ವಿಗೊಂಡಿವೆ. ಬಹುತೇಕ ಎಲ್ಲ ವಿಚಾರ ವಿನಿಮಯ, ಚರ್ಚೆಗಳಲ್ಲಿ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಪಾಲ್ಗೊಂಡಿದ್ದರು. ಹೀಗಾಗಿ ಅತ್ಯಂತ ಪರಿಣಾಮಕಾರಿ ಶಿಫಾರಸುಗಳನ್ನು ಮಾಡಿದ್ದು, ಮುಂದಿನ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ ನಾಲ್ಕನೇ ಶೆರ್ಪಾ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಪ್ರಧಾನಿ ಹಾಗೂ ನಾಯಕರ ಸಭೆಯಲ್ಲಿ ನಿರ್ಧಾರವಾಗಲಿದೆ.
    ಅಮಿತಾಬ್ ಕಾಂತ್, ಭಾರತೀಯ ಶೆರ್ಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts