More

    ನೀರು ನಿರ್ವಹಣೆಗೆ ಸಹಕಾರ ಅಗತ್ಯ

    ಗೋಣಿಕೊಪ್ಪ: ಸಮೀಪದ ಬಾಳೆಲೆ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಎದುರಾಗಿರುವ ನೀರಿನ ಸಮಸ್ಯೆ ಕುರಿತು ಚರ್ಚಿಸಲಾಯಿತು.

    ಬಾಳೆಲೆ ಕೊಡವ ಸಮಾಜದಲ್ಲಿ ಗ್ರಾಪಂ ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಸಾರ್ವಜನಿಕರು ಸಮರ್ಪಕವಾಗಿ ನೀರು ಪೂರೈಸುವಂತೆ ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ, ಬಿಸಿಲ ತಾಪ ದಿನೆದಿನೇ ಹೆಚ್ಚುತ್ತಿದ್ದು ನೀರಿನ ಕೊರತೆಯನ್ನು ನಿಭಾಯಿಸಲು ಗ್ರಾಮ ಪಂಚಾಯಿತಿ ನಿರಂತರವಾಗಿ ಶ್ರಮಿಸುತ್ತಿದೆ. ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಇದಕ್ಕೆ ಧ್ವನಿಗೂಡಿಸಿದ ಗ್ರಾಪಂ ಸದಸ್ಯ ಅದೇಂಗಡ ವಿನು ಉತ್ತಪ್ಪ, ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯು ಸರ್ಕಾರ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

    ಸದಸ್ಯ ಪೊಡಮಾಡ ಸುಖೇಸ್ ಭೀಮಯ್ಯ ಮಾತನಾಡಿ, ಜಲ್ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಯು ಬಾಳೆಲೆ ಮತ್ತು ದೇವನೂರು ಭಾಗದಲ್ಲಿ ಪ್ರಗತಿಯಲ್ಲಿದ್ದು, ಈ ಕಾಮಗಾರಿ ಪೂರ್ಣಗೊಂಡ ನಂತರ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಕಾಣಲಿದೆ ಎಂದರು.
    ನರೇಗಾ ಯೋಜನೆ, ಸಾರ್ವಜನಿಕ ಶೌಚಾಲಯ, ತೋಟಗಾರಿಕೆ, ಅಸ್ಪತ್ರೆ ಮತ್ತಿತರ ವಿಚಾರವಾಗಿ ಹಾಜರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸದಸ್ಯರು, ಗ್ರಾಮಸ್ಥರು ಚರ್ಚಿಸಿದರು.

    ಗ್ರಾಪಂ ಉಪಾಧ್ಯಕ್ಷ ಕಳ್ಳಿಚಂಡ ರಕ್ಷಿತ್ ಕುಶಾಲಪ್ಪ, ನೋಡಲ್ ಅಧಿಕಾರಿಗಳಾದ ಪಶುವೈದ್ಯಾಧಿಕಾರಿ ಡಾ.ಭವಿಷ್ಯ ಕುಮಾರ್, ಗ್ರಾಪಂ ಸದಸ್ಯರಾದ ಅಡ್ಡೇಂಗಡ ನವೀನ್, ಕೊಕ್ಕೇಂಗಡ ಸುಮಿತಾ, ಗಂಗೆ, ಗೌರಿ, ಪುಟ್ಟಮ್ಮ, ಗ್ರೇಸಿ, ಪ್ರಮೀಳಾ, ಸಿಂಗ, ಪುಷ್ಪಾವತಿ ಚಂದ್ರ, ಪಿಡಿಒ ಪರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಇದೇ ವೇಳೆ ಪೌರಕಾರ್ಮಿಕ ಮೂರ್ತಿಯನ್ನು ಗ್ರಾಪಂ ಆಡಳಿತದ ವತಿಯಿಂದ ಗೌರವಿಸಲಾಯಿತು.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts