More

    ಮಂದಂಗಡ, ಅಚ್ಚಪಂಡ ತಂಡ ಮುಂದಿನ ಹಂತಕ್ಕೆ

    ಗೋಣಿಕೊಪ್ಪ: ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ವಿಜಯಲಕ್ಷ್ಮೀ ಮತ್ತು ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ 14 ತಂಡಗಳು ಗೆಲುವಿನ ನಗೆ ಬೀರಿದವು.

    ಪುರುಷರ ಪಂದ್ಯಾಟ: ಮೈದಾನ ಒಂದರಲ್ಲಿ ನಡೆದ ಪಂದ್ಯಾಟದಲ್ಲಿ ಅದೇಂಗಡ ಮತ್ತು ಮಂದಂಗಡ ನಡುವೆ ನಡೆದ ಪಂದ್ಯಾಟದಲ್ಲಿ ಮಂದಂಗಡ ತಂಡ 9 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಅದೇಂಗಡ ತಂಡ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಮಂದಂಗಡ ತಂಡ 4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿ ಗೆಲುವಿನ ನಗೆ ಬೀರಿತು.

    ನಂದಿನೆರವಂಡ ಮತ್ತು ಅಚ್ಚಪ್ಪಂಡ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ನಂದಿನೆರವಂಡ ತಂಡ 8 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತು. ಗುರಿ ಬೆನ್ನತ್ತಿದ ಅಚ್ಚಪಂಡ ತಂಡ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿ 10 ವಿಕೆಟ್‌ಗಳ ಜಯ ದಾಖಲಿಸಿತು.

    ಅರಮಣಮಾಡ ಮತ್ತು ಚೋವಂಡ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಚೋವಂಡ ತಂಡ 8 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಅರಮಣಮಾಡ ತಂಡ 3.1 ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು 56 ರನ್ ಗಳಿಸಿ 9 ವಿಕೆಟ್‌ಗಳ ಗೆಲುವು ದಾಖಲಿಸಿತು. ಕಾಳಮಂಡ ಮತ್ತು ಚೆರುಮಂದಂಡ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಚೆರುಮಂದಂಡ ತಂಡ 8 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 119 ರನ್ ಗಳಸಿತು. ಕಾಳಮಂಡ ತಂಡ 8 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿ 46 ರನ್‌ಗಳ ಸೋಲು ಕಂಡಿತು.

    ಚಂಗಣಮಾಡ ಮತ್ತು ಮಾಚೆಟ್ಟಿರ (ಹಾಲುಗುಂದ) ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಚಂಗಣಮಾಡ ತಂಡ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 65 ರನ್ ಗಳಿಸಿತು. ಮಾಚೆಟ್ಟಿರ ತಂಡ 6.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

    ಕೇಟೀರ ಮತ್ತು ಮುಕ್ಕಾಟಿರ (ಕುಂಬಳದಾಳು) ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಕೇಟೀರ ತಂಡ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತು. ಮುಕ್ಕಾಟಿರ ತಂಡ 3.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿ ಗೆಲುವು ಸಾಧಿಸಿತು.

    ಮೈದಾನ ಎರಡರಲ್ಲಿ ನಡೆದ ಪಂದ್ಯಾಟದಲ್ಲಿ ಮಾಚಿಮಾಡ ತಂಡ ಪಾರುವಂಗಡ ತಂಡದ ಎದುರು 9 ರನ್‌ಗಳ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಮಾಚಿಮಾಡ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿತು. ಪಾರುವಂಗಡ 6.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 90 ಗಳಿಸಿ ಗೆಲುವು ದಾಖಲಿಸಿತು.

    ಕೋಡಿಮಣಿಯಂಡ ಮತ್ತು ನಾಪಂಡ ತಂಡದ ಪಂದ್ಯಾಟದಲ್ಲಿ ಕೋಡಿಮಣಿಯಂಡ ತಂಡ 8 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 107 ರನ್ ಗಳಸಿತು. ನಾಪಂಡ ತಂಡ 8 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿ 25 ರನ್ ಗಳಿಂದ ಸೋಲು ಕಂಡಿತು.

    ಬಾಚಿನದಂಡ ಮತ್ತು ನುಚ್ಚಿಮಣಿಯಂಡ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ನುಚ್ಚಿಮಣಿಯಂಡ ತಂಡ 8 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತು. ವಾಚಿನದಂಡ ತಂಡ 4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 60 ಗಳಿಸಿ 6 ವಿಕೆಟ್ ಗೆಲುವು ಸಾಧಿಸಿತು.

    ಮಹಿಳೆಯರ ಪಂದ್ಯಾಟ: ಅಚ್ಚಪಂಡ ಮತ್ತು ಕಾಂಡಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಚ್ಚಪಂಡ ತಂಡ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದರು. ಕಾಂಡಂಡ ತಂಡ 5 ಓವರ್ ಗೆ 3 ವಿಕೆಟ್ ನಷ್ಟಕ್ಕೆ 25 ರನ್ ಗಳಸಿ 7 ವಿಕೆಟ್‌ಗಳ ಜಯ ಸಾಧಿಸಿತು.

    ಮೂಕಳೆರ ಮತ್ತು ಕೊಂಗಂಡ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಮೂಕಳೆರ ತಂಡ 5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 33 ರನ್ ಗಳಸಿದರು. ಕೊಂಗಂಡ ತಂಡ 5 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

    ಕೊಣಿಯಂಡ ಮತ್ತು ಕಡೇಮಾಡ ತಂಡದ ನಡುವೆ ನಡೆದ ಪಂದ್ಯದಲ್ಲಿ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 47 ರನ್ ಗಳಿಸಿತು. ಕಡೇಮಾಡ ತಂಡ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 29 ರನ್ ಗಳಿಸಿ 18 ರನ್ ಗಳ ಸೋಲು ಕಂಡಿತು.

    ಬಾಚಿಮಂಡ ಮತ್ತು ಕೊಟ್ರಮಾಡ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಕೊಟ್ರಮಾಡ ತಂಡ 5 ಓವರ್‌ಗಳಲ್ಲಿ 38 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬಾಚಿನದಂಡ ತಂಡ 5 ಓವರ್‌ಗಳಲ್ಲಿ 39 ರನ್ ಗಳಿಸಿ 10 ವಿಕೆಟ್ ಗೆಲುವು ದಾಖಲಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts