More

    ಪಠ್ಯಪುಸ್ತಕ ನೀರು ಪಾಲು

    ನರಗುಂದ: ವಿದ್ಯಾರ್ಥಿಗಳ ಬದುಕಿನ ಮೇಲೆ ನೆರೆ ಬರೆ ಎಳೆದಿದೆ. ಮಲಪ್ರಭಾ ನದಿ ಪ್ರವಾಹದ ಬಿಸಿ ತಾಲೂಕಿನ ಕೊಣ್ಣೂರ ಗ್ರಾಮದ

    ಮಕ್ಕಳಿಗೂ ತಟ್ಟಿದ್ದು, ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕದಲ್ಲಿದ್ದಾರೆ.

    ಕೊಣ್ಣೂರ ಗ್ರಾಮದ ಸ್ಪೂರ್ತಿ ಮಾನಮ್ಮನರ ಎನ್ನುವ 5ನೇ ತರಗತಿ ವಿದ್ಯಾರ್ಥಿನಿ ಮುರಾರ್ಜಿ ಪರೀಕ್ಷೆ ಬರೆಯುವ ನಿರೀಕ್ಷೆಯಲ್ಲಿದ್ದಳು. ಆದರೆ, ಪ್ರವಾಹಕ್ಕೆ ಹೆದರಿ ಕುಟುಂಬಸ್ಥರು ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದರು. ಪ್ರವಾಹ ತಗ್ಗಿದ ಮೇಲೆ ಮನೆಗೆ ಬಂದಾಗ, ಪುಸ್ತಕಗಳು ಹಾಳಾಗಿರುವುದನ್ನು ಕಂಡು ವಿದ್ಯಾರ್ಥಿನಿಗೆ ಶಾಕ್ ಆಗಿದೆ. ಇದು ಒಬ್ಬ ವಿದ್ಯಾರ್ಥಿನಿಯ ಕಥೆಯಲ್ಲ. ಮಲಪ್ರಭಾ ನದಿಪಾತ್ರದ ಗ್ರಾಮಗಳಲ್ಲಿರುವ ಸಾವಿರಾರು ವಿದ್ಯಾರ್ಥಿಗಳ ಕಣ್ಣೀರಿನ ಕಥೆ.

    ಪ್ರವಾಹದ ರುದ್ರನರ್ತನಕ್ಕೆ ಅನೇಕ ವಿದ್ಯಾರ್ಥಿಗಳ ಪಠ್ಯ-ಪುಸ್ತಕಗಳು ನೀರಲ್ಲಿ ತೇಲಿಹೋಗಿವೆ. 2019ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಬಿದ್ದಿರುವ ಶಾಲಾ ಕೊಠಡಿಗಳು ಇನ್ನೂ ದುರಸ್ತಿಯಾಗ್ಲಿಲ. ಹೀಗಾಗಿ ಅತ್ತ ಶಾಲೆಯೂ ಇಲ್ಲ. ಇತ್ತ ಪಠ್ಯ ಪುಸ್ತಕಗಳು ನೀರು ಪಾಲಾದರೆ, ನಾವು ಓದುವುದಾರೂ ಹೇಗೆ? ಎಂಬುದು ವಿದ್ಯಾರ್ಥಿಗಳ ಅಳಲು.

    ಕರೊನಾತಂಕದ ಜತೆಗೆ, ನೆರೆಯೂ ವಕ್ಕರಿಸಿರುವುದರಿಂದ ವಿದ್ಯಾರ್ಥಿಗಳನ್ನು ಹೈರಾಣಾಗಿಸಿದೆ. ಇದರಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿದ್ಯಾಗಮ ಯೋಜನೆಗೆ ಹಿನ್ನಡೆ ಉಂಟಾಗುತ್ತಿದೆ ಎನ್ನುತ್ತಾರೆ ಪೋಷಕರು.

    ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದಿಂದಾಗಿ ಮನೆಯಲ್ಲಿದ್ದ ಪಠ್ಯಪುಸ್ತಕಗಳು ಹಾಳಾಗಿವೆ. ಎರಡು ಬ್ಯಾಗ್ ಮತ್ತು ಕೆಲವೊಂದು ಪುಸ್ತಕಗಳು ತೇಲಿಕೊಂಡು ಹೋಗಿವೆ. ಇದರಿಂದ ವಿದ್ಯಾಭ್ಯಾಸಕ್ಕೆ ಸಮಸ್ಯೆ ಉಂಟಾಗಿದೆ. ಹೊಸ ಪುಸ್ತಕಗಳನ್ನು ಕೊಟ್ಟರೆ ಓದಿಗೆ ಸಹಕಾರಿಯಾಗಲಿದೆ.

    | ಸ್ಪೂರ್ತಿ ಮಾನಮ್ಮನವರ, ವಿದ್ಯಾರ್ಥಿನಿ

    ನರಗುಂದ ತಾಲೂಕಿನ ಎಲ್ಲ ಶಾಲೆಗಳಿಗೆ ಈಗಾಗಲೇ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಪ್ರವಾಹದಲ್ಲಿ ಮಕ್ಕಳ ಪುಸ್ತಕಗಳು ನೆನೆದು ಹಾನಿಗೊಂಡಿದ್ದರೆ ಅಂತವರಿಗಾಗಿ ಹೆಚ್ಚುವರಿ ಬೇಡಿಕೆಯನ್ನು ಸಲ್ಲಿಸಿ ಮತ್ತೆ ಪಠ್ಯ ಪುಸ್ತಕಗಳನ್ನು ಒದಗಿಸಲಾಗುತ್ತದೆ.

    | ಎಂ.ಎಸ್. ಚೂರಿ, ಶಿಕ್ಷಣ ಸಂಯೋಜಕ

    ==========

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts