More

    ನಿರಂತರವಾಗಿ ಜ್ಞಾನದಾಹಿಗಳಾಗಿ

    ಹುಣಸೂರು: ವಿದ್ಯಾರ್ಥಿಗಳು ನಿರಂತರವಾಗಿ ಜ್ಞಾನದಾಹಿಗಳಾಗಿರಬೇಕೆಂದು ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.

    ತಾಲೂಕಿನ ಗಾವಡಗೆರೆ ಗ್ರಾಮದ ಸರ್ಕಾರಿ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಪ್ರೌಢಶಾಲಾ ವಿಭಾಗದ ಆದರ್ಶ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಮಾನವನಿಗೆ ಸಂಬಂಧಿಸಿದ ಎಲ್ಲ ಸುಖಗಳು ಅಲ್ಪಾವಧಿ ಮಾತ್ರ. ಆದರೆ ಅವನು ಪಡೆದುಕೊಳ್ಳುವ ಜ್ಞಾನ ಮಾತ್ರ ನಿರಂತರವಾಗಿ ಅವನ ಜತೆಯಲ್ಲಿ ಇದ್ದು, ಅವನ ಅಭ್ಯುದಯಕ್ಕೆ ನಾಂದಿ ಹಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ನಿರಂತರವಾಗಿ ಜ್ಞಾನ ಪಿಪಾಸುಗಳಾಗಬೇಕು ಎಂದರು.

    ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮುಂತಾದ ಪ್ರಾತಃಸ್ಮರಣೀಯರೆಲ್ಲ್ಲ ಜ್ಞಾನ ದಾಹಿಗಳಾಗಿದ್ದರು. ಅರಿವನ್ನು ಹುಡುಕಿ ಅರಮನೆಯಿಂದ ಹೊರ ನಡೆದ ಸಿದ್ಧಾರ್ಥ ಜ್ಞಾನೋದಯದ ನಂತರ ಬುದ್ಧನಾಗಿ ಮನುಕುಲದ ಚರಿತ್ರೆಯಲ್ಲಿ ಅಮರನಾದ. 12ನೇ ಶತಮಾನದ ಶರಣರು ಜ್ಞಾನಿಗಳಾಗಿ ಸಮ ಸಮಾಜದ ಕನಸು ಕಂಡರು. ಇಂತಹ ಮೇರು ಪುರುಷರ ಆದರ್ಶದ ಬೆಳಕಿನ ಹಾದಿ ನಿಮಗೂ ತೆರೆದಿದೆ. ಆ ದಾರಿಯಲ್ಲಿ ಮುನ್ನಡೆದು ಬದುಕನ್ನು ಸಾರ್ಥಕ ಮಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲ ಬಿ.ಸಿ.ಚಿನ್ನೇಗೌಡ ಮಾತನಾಡಿ, ಸಮಾಜದ ಎಲ್ಲ ಹಂತದ ವ್ಯಕ್ತಿಗಳಿಗೂ ಕೆಲವು ಕನಿಷ್ಠ ಮಟ್ಟದ ಆದರ್ಶಗಳು ಬೇಕಾಗುತ್ತವೆ. ಅವು ಅವರನ್ನು ಸಮಾಜದ ಉನ್ನತ ವ್ಯಕ್ತಿಗಳನ್ನಾಗಿ ರೂಪಿಸುತ್ತವೆ. ಅಂತಹ ಸಹೃದಯರಿಂದ ನಾಡು ಬೆಳಗುತ್ತದೆ ಎಂದು ಅಭಿಪ್ರಾಯ ಪಟ್ಟರು.

    ಪ್ರಾಂಶುಪಾಲ ಜನಾರ್ದನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಎಸ್.ಡಿ.ಎಂ.ಸಿ ಸದಸ್ಯ ಮಹದೇವನಾಯ್ಕ, ಶಿಕ್ಷಕ ಲಿಂಗರಾಜು ಅವರು ಶಾಲಾ ಮಂತ್ರಿ ಮಂಡಲದ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಲೋಕೇಶ್ ಕುಮಾರ್, ಉಮೇಶ್ ಆಚಾರ್ಯ, ಲಕ್ಷ್ಮಣ, ಸುಮನಾರಾಣಿ, ಚಂದ್ರಕಲಾ, ಪ್ರಮೀಳಾ, ರವೀಶ್ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts