More

    ಮತದಾನ ಅರಿವು ರೀಲ್ಸ್‌ಗಳನ್ನು ನಿರ್ಮಿಸಿ

    ಹುಣಸೂರು: ವಿದ್ಯಾರ್ಥಿಗಳು ಮತದಾನದ ಅರಿವು ಕುರಿತ ರೀಲ್ಸ್‌ಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಕೈಜೋಡಿಸಲಿ ಎಂದು ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಸಲಹೆ ನೀಡಿದರು.


    ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ತಾಲೂಕು ಸ್ವೀಪ್ ಸಮಿತಿ ಮತ್ತು ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತದಾನದ ಅಗತ್ಯ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯು ಸಾರ್ವಜನಿಕರಿಗೆ ರೀಲ್ಸ್ ಮಾಡುವ ಅವಕಾಶ ನೀಡಿದೆ. ರೀಲ್ಸ್‌ನಲ್ಲಿ ಮತದಾನದ ಮಹತ್ವ, ಪ್ರತಿ ವೋಟಿನ ಮೌಲ್ಯ, ನೈತಿಕ ಮತದಾನ ಮತ್ತು ಎಲ್ಲ ವರ್ಗಗಳನ್ನು ಪ್ರತಿಬಿಂಬಿಸುವಂತಹ ವಿಡಿಯೋಗಳನ್ನು ಗರಿಷ್ಠ 40 ರಿಂದ 60 ಸೆಕೆಂಡ್ ಅವಧಿ ಒಳಗೆ ರೀಲ್ಸ್ ಗಳನ್ನು ಮಾಡಿ ಛಿಛಿಞಠ್ಠ್ಟ್ಠ2018ಃಜಞಜ್ಝಿ.್ಚಟಞ ಗೆ ಕಳುಹಿಸಬಹುದಾಗಿದೆ. ರೀಲ್ಸ್ ಕಳುಹಿಸಲು ಏ.10 ಅಂತಿಮ ದಿನವಾಗಿದೆ. ಉತ್ತಮ ಸಂದೇಶವುಳ್ಳ ಆಯ್ದ ಮೂರು ರೀಲ್ಸ್ ಮತ್ತು ವಿಡಿಯೋಗಳನ್ನು ರಚಿಸಿದವರಿಗೆ ಸೂಕ್ತ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.


    ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿ, ವಿಜಿಲ್ ಆ್ಯಪ್, ವೋಟರ್ ಹೆಲ್ಪ್‌ಲೈನ್ ಆ್ಯಪ್ ಮತ್ತು ಸಕ್ಷಮ್ ಆ್ಯಪ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


    ತಹಸೀಲ್ದಾರ್ ಎಂ.ನಯನಾ, ತಾಲೂಕು ಪಂಚಾಯಿತಿ ಮ್ಯಾನೇಜರ್ ಮಹೇಶ್ ನಾಯಕ್, ಪ್ರಭಾರ ಪ್ರಾಂಶುಪಾಲೆ ನೀತು ಸಂತೋಷ್, ನಗರಸಭೆ ನೋಡಲ್ ಇಂಜಿನಿಯರ್ ಸೋಮಸುಂದರಂ, ಸಂತೋಷ್ ಕುಮಾರ್ ಇದ್ದರು. ಇದೇ ವೇಳೆ ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts