More

    ನಾಳೆಯಿಂದ ಹಿಂದು-ಮುಸ್ಲಿಮ್ ಭಾವೈಕ್ಯತೆಯ ಹಬ್ಬ

    ಧರ್ಮಾಪುರ: ಹಿಂದು-ಮುಸ್ಲಿಮರ ಭಾವೈಕ್ಯತೆ ಮೆರೆಯುವ ರತ್ನಪುರಿ(ದರ್ಗ)ಯ ಶ್ರೀ ಆಂಜನೇಯಸ್ವಾಮಿ ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಮುಸ್ಲಿಮರ ಜಮಾಲ್ ಬೀಬೀಮಾ ಸಾಹೇಬರ ಗಂಧೋತ್ಸವ(ಉರುಸ್) ಫೆ.24ರಿಂದ 27ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

    ರಾಜ್ಯದ ವಿವಿಧೆಡೆಯಿಂದ ಭಕ್ತರು ಭಾಗವಹಿಸುವ ಪ್ರಮುಖ ಜಾತ್ರೆ ಇದಾಗಿದ್ದು, ಈ ಜಾತ್ರೆಗೆ ಜಾನುವಾರುಗಳನ್ನು ಕಟ್ಟುವುದೇ ವಿಶೇಷತೆಯಾಗಿದೆ. ಕೊಂಡೋತ್ಸವ, ಗಂಧೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿ ವರ್ಷ ವಿಭಿನ್ನ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.

    ಆಂಜನೇಯಸ್ವಾಮಿ ಹಾಗೂ ಆಧುನೀಕರಣಗೊಂಡಿರುವ ಜಮಾಲ್ ಬೀಬೀಮಾಸಾಹೇಬರ ದರ್ಗಾವು ಜಾತ್ರಾಮಾಳದ ಹತ್ತಿರದಲ್ಲೇ ಇರುವುದು ಇಲ್ಲಿನ ಮತ್ತೊಂದು ವಿಶೇಷ.
    ಶ್ರೀ ಆಂಜನೇಯಸ್ವಾಮಿ ದೇಗುಲ ಸಮಿತಿಯು ಕಳೆದ 55 ವರ್ಷಗಳಿಂದ ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಕೊಂಡೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ 16 ವರ್ಷಗಳಿಂದ ಉತ್ಸವದಂದು ಸಾವಿರಾರು ಮಂದಿಗೆ ಅನ್ನದಾನ ನಡೆಸಿಕೊಂಡು ಬರಲಾಗುತ್ತಿದೆ.

    ಉದ್ದೂರ್‌ಕಾವಲ್, ಉಯಿಗೊಂಡನಹಳ್ಳಿ, ಧರ್ಮಾಪುರ, ಆಸ್ಪತ್ರೆಕಾವಲ್ ಪಂಚಾಯಿತಿಗಳು ಸೇರಿದಂತೆ ಧರ್ಮಾಪುರ, ನಂಜಾಪುರ, ಗೌರಿಪುರ, ದಾಸನಪುರ, ಹಳ್ಳದಕೂಪ್ಪಲು, ತರಿಕಲ್ಲು, ಮಲ್ಲೆಗೌಡನಕೂಪ್ಪಲು, ಹೊನ್ನಿಕುಪ್ಪೆ, ಮುದ್ದನಹಳ್ಳಿ, ಹುಂಡಿಮಾಳ, ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಸ್ಥರು ಜಾತ್ರೆ ಯಶಸ್ಸಿಗೆ ಸಹಕಾರ ನೀಡುತ್ತಾರೆ.

    ಫೆ.24ರಂದು ಜಾತ್ರೆ ಮಹೋತ್ಸವವನ್ನು ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸಲಿದ್ದು, ಶಾಸಕ ಜಿ.ಟಿ.ದೇವೆಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಂಸದ ಪ್ರತಾಪ್‌ಸಿಂಹ, ಜಿ.ಡಿ.ಹರೀಶ್‌ಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

    ಫೆ.24ರಂದು ಆಂಜನೇಯಸ್ವಾಮಿಗೆ ಹೋಮ, ಹವನ, ಮಹಾಭಿಷೇಕ, ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ, ಫೆ.25ರಂದು ಮಹಾಮಂಗಳಾರತಿ, ಅನ್ನ ಸಂತರ್ಪಣೆ, ಕಬಡ್ಡಿ ಪಂದ್ಯಾವಳಿ, ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಕಲಾ ತಂಡದೊಂದಿಗೆ ಜಾತ್ರಾ ಮೆರವಣಿಗೆ, ಫೆ.26ರಂದು ಗಂಧೋತ್ಸವ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts