More

    ನಾಲ್ಕು ವಾರದೊಳಗೆ ವರದಿ ಸಲ್ಲಿಸಲು ನಿರ್ದೇಶನ

    ಕಾರವಾರ: ಹೊನ್ನಾವರದ ಟೊಂಕಾ ಬಂದರು ವಿವಾದ ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್​ಎಚ್​ಆರ್​ಸಿ)ಗೆ ತಲುಪಿದೆ. ಈ ಸಂಬಂಧ ತನಿಖೆ ನಡೆಸಿ ನಾಲ್ಕು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಎಸ್​ಪಿಗೆ ಆಯೋಗವು ನಿರ್ದೇಶನ ನೀಡಿದೆ.
    ಹೊನ್ನಾವರ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಎಚ್​ಪಿಪಿಎಲ್) ಕಂಪನಿಯು ನಿರ್ವಿುಸಲು ಯೋಜಿಸಿರುವ ಬಂದರಿಗೆ ವಿರೋಧ ವ್ಯಕ್ತಪಡಿಸಿ ಜ. 24ರಂದು ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಸ್ಥಳೀಯರು ಆಯೋಗಕ್ಕೆ ದೂರು ನೀಡಿದ್ದರು. ಅದಕ್ಕೆ ಸ್ಪಂದಿಸಿದ ಆಯೋಗ ಪ್ರಕರಣ ದಾಖಲಿಸಿಕೊಂಡು ಎಸ್​ಪಿಗೆ ನೋಟಿಸ್ ನೀಡಿದೆ. ಇದೇ ವಿಚಾರವಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಯಾವುದಾದರೂ ನೋಟಿಸ್ ಅಥವಾ ಆದೇಶ ಜಾರಿಯಾಗಿದ್ದರೆ ಅದರ ಪ್ರತಿಯನ್ನೂ ನಾಲ್ಕು ವಾರಗಳ ಒಳಗಾಗಿ ಕಳುಹಿಸಬೇಕು. ದೂರಿನ ಪ್ರತಿಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿಗೂ ಕಳುಹಿಸಬೇಕು. ಒಂದು ವೇಳೆ, ಇದರಲ್ಲಿ ವಿಫಲವಾದರೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗವು ಎಚ್ಚರಿಕೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts