More

    ‘ನಶೆ ಮುಕ್ತ ಚಿತ್ರದುರ್ಗ ಜಿಲ್ಲೆ’ ವಿಶೇಷ ಕಾರ‌್ಯಾಚರಣೆ

    ಚಿತ್ರದುರ್ಗ: ಗಾಂಜಾ, ಹೆರಾಯಿನ್, ಅಫೀಮು, ಕೊಕೇನ್ ಮತ್ತಿತರ ಮಾದಕ ವಸ್ತುಗಳ ಉತ್ಪಾದನೆ, ಸಂಗ್ರಹ, ಮಾರಾಟ, ಬಳಕೆ ನಿಯಂತ್ರಿಸಲು ಜಿ ಲ್ಲೆಯಲ್ಲಿ‘ನಶೆ ಮುಕ್ತ ಚಿತ್ರದುರ್ಗ ಜಿಲ್ಲೆ’ವಿಶೇಷ ಕಾರ‌್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಪಿ ಧರ್ಮೆಂದರ್ ಕುಮಾರ್ ತಿಳಿಸಿದ್ದಾರೆ.
    ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾದಕ ವಸ್ತುಗಳ ಸೇವನೆಯ, ಈ ಸಾಮಾಜಿಕ ಪಿಡುಗಿನ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು, ಮಾಹಿತಿ ಸಂಗ್ರಹಿಸಲು, ದಾಳಿ ನಡೆಸಿ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಾರ‌್ಯಾಚರಣೆ ಹಮ್ಮಿಕೊಳ್ಳಲಾಗಿದೆ.
    ಆದ್ದರಿಂದ ಈ ಕುರಿತ ಮಾಹಿತಿಯನ್ನು ಪಿಐ, 9480803173 ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಂ.9 480803100ಗೆ ತಿಳಿಸುವಂತೆ ಎಸ್‌ಪಿ ನಾಗರಿಕರನ್ನು ಕೋರಿದ್ದಾರೆ. ಮಾಹಿತಿ ಕೊಡುವವರ ಹೆಸರು, ವಿಳಾಸ ಗೌಫ್ಯವಾಗಿರುತ್ತದೆ ಎಂದು ಅ ವರು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts