More

    ‘ನಮ್ ನಾಣಿ ಮದ್ವ್ವೆ ಪ್ರಸಂಗ’ ಚಿತ್ರ 7ಕ್ಕೆ ತೆರೆಗೆ 

    ದಾವಣಗೆರೆ:‘ನಮ್ ನಾಣಿ ಮದ್ವ್ವೆ ಪ್ರಸಂಗ’ ಹಾಸ್ಯಭರಿತ ಚಿತ್ರ ರಾಜ್ಯದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಪ್ರಿಲ್ 7ರಂದು ಬಿಡುಗಡೆ ಆಗಲಿದೆ ಎಂದು ಚಿತ್ರದ ನಟ ಮಧು ಹೆಗಡೆ ತಿಳಿಸಿದರು.
    ಗ್ರಾಮೀಣ ಪ್ರದೇಶದ ರೈತರಿಗೆ ಮದುವೆಯಾಗಲು ವಧುಗಳು ಸಿಗುತ್ತಿಲ್ಲ ಎಂಬುದು ಎಲ್ಲೆಡೆ ಕೇಳಿಬರುತ್ತಿರುವ ಗಂಭೀರ ಸಮಸ್ಯೆ. ದೇ ಕಥಾ ವಸ್ತು ಹಂದರವುಳ್ಳ ಚಿತ್ರದಲ್ಲಿ ಹಾಸ್ಯದ ಮುಖೇನ ನಿರ್ದೇಶಕರು ಸಾಮಾಜಿಕ ಸಂದೇಶ ನೀಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಅನ್ವಿತಾ ಆರ್ಟ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ಹೌಸ್‌ಫುಲ್, ನಿಂಬೆಹುಳಿ ಚಿತ್ರದ ನಂತರ ಹೇಮಂತ್ ಹೆಗಡೆ ಚಿತ್ರ ನಿರ್ದೇಶನ ಮಾಡಿದ್ದು ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಸ್ವತಃ ನಾಯಕರಾಗಿಯೂ ನಟಿಸಿದ್ದಾರೆ.
    ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ರಾಜೇಶ್ ನಟರಂಗ, ಗಿರೀಶ್ ಶಿವಣ್ಣ, ಪದ್ಮಜಾರಾವ್ ಸೆರಿ ಪ್ರಮುಖ ರಂಗಭೂಮಿ ಕಲಾವಿದರು ತಾರಾಗಣದಲ್ಲಿದ್ದಾರೆ. ಶಿರಸಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ವಿ.ಮನೋಹರ್, ರವಿ ಮುರೂರ್ ಸಂಗೀತ ನಿರ್ದೇಶನ ಮಾಡಿದ್ದುಮ, ಕೃಷ್ಣ ಭಂಜನ್ ಛಾಯಾಗ್ರಹಣವಿದೆ.
    ಪ್ರೇಕ್ಷಕರು ಕಾಂತಾರ ಚಿತ್ರದಿಂದ ಇನ್ನೂ ಹೊರಬಂದಿಲ್ಲ. ಎಲ್ಲ ಚಿತ್ರವೂ ಕೆಜಿಎಫ್, ಕಾಂತಾರ ಆಗಲು ಸಾಧ್ಯವಿಲ್ಲ. ವಿಭಿನ್ನ ಕಥಾ ಹಂದರದ ಹೊಸ ಬಗೆಯ ಚಿತ್ರಗಳು ಬರಬೇಕು. ಎಲ್ಲರೂ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದರು.
    ಸುದ್ದಿಗೋಷ್ಠಿಯಲ್ಲಿ ವಕೀಲ ಎಂ.ವಿ.ರೇವಣಸಿದ್ದಯ್ಯ, ಹರ್ಷಿಲ್ ಕೌಶಿಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts