More

    ನಮನ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಪ್ರಾಂಚೈಸಿ, ಆಟಗಾರರ ಆಯ್ಕೆ

    ಬಾಳೆಹೊನ್ನೂರು: ಪಟ್ಟಣದ ನಮನ ಸ್ಪೋರ್ಟ್ಸ್ ಕ್ಲಬ್​ನಿಂದ ಜ.17ರಿಂದ 19ರವರೆಗೆ ನಡೆಯುವ ನಮನ ಪ್ರೀಮಿಯರ್ ಲೀಗ್ (ಎನ್​ಪಿಎಲ್) ಕ್ಷೇತ್ರ ಮಟ್ಟದ ಟೆನಿಸ್​ಬಾಲ್ ಪಂದ್ಯಾವಳಿಗೆ ಪ್ರಾಂಚೈಸಿ ಹಾಗೂ ಆಟಗಾರರ ಆಯ್ಕೆಯನ್ನು ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಸಲಾಯಿತು.

    ಪ್ರಾಂಚೈಸಿಗಳ ಆಯ್ಕೆ ಹಾಗೂ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯನ್ನು ಬಾಳೆಹೊನ್ನೂರು ಸ್ಪೋರ್ಟ್ಸ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಭಾಸ್ಕರ್ ವೆನಿಲ್ಲಾ ಉದ್ಘಾಟಿಸಿದರು.

    ಪಂದ್ಯಗಳು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಪಂದ್ಯಗಳನ್ನು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡಲಾಗುವುದು. ಚಾಂಪಿಯನ್ಸ್​ಗಳಿಗೆ 50 ಸಾವಿರ ರೂ. ನಗದು, ಟ್ರೋಫಿ, ರನ್ನರ್ಸ್​ಗಳಿಗೆ 30 ಸಾವಿರ ರೂ., ಟ್ರೋಫಿ ಹಾಗೂ ತೃತೀಯ, ಚತುರ್ಥ ಬಹುಮಾನಗಳನ್ನೂ ನೀಡಲಾಗುವುದು.

    ಜೇಸಿ ಪೂರ್ವಾಧ್ಯಕ್ಷ ಎಂ.ಡಿ.ಪ್ರಕಾಶ್, ಸಿ.ಪಿ.ರಮೇಶ್, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಸಂತೋಷ್​ಕುಮಾರ್, ಉಪನ್ಯಾಸಕ ಸಿ.ವಿ.ಸುನೀಲ್, ಕ್ರಿಕೆಟ್ ಆಟಗಾರ ರೋಹಿತ್ ಪೂಜಾರಿ, ಸುಮೇಶ್ ಶೆಟ್ಟಿ, ಜಗದೀಶ್ ಅರಳೀಕೊಪ್ಪ, ಅಜಿತ್, ವಿನಯ್, ಬಿಲ್ಲವ ಸಂಘದ ಕಾರ್ಯದರ್ಶಿ ಕೆ.ಪ್ರಸಾದ್, ಸತೀಶ್ ಅರಳೀಕೊಪ್ಪ, ಸತೀಶ್ ಕಿಣಿ ಇತರರಿದ್ದರು.

    16 ಪ್ರಾಂಚೈಸಿ ಆಯ್ಕೆ: ಎನ್​ಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಶೃಂಗೇರಿ ಕ್ಷೇತ್ರದ 16 ಪ್ರಾಂಚೈಸಿ ಹಾಗೂ ಮಾಲೀಕರನ್ನು ಆಯ್ಕೆ ಮಾಡಲಾಗಿದೆ ಎಂದು ನಮನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿ.ಎಚ್.ಮನುಕುಮಾರ್ ತಿಳಿಸಿದರು. ಶೃಂಗೇರಿ ಕ್ಷೇತ್ರಮಟ್ಟದ ಪಂದ್ಯಾವಳಿ ಇದಾಗಿದ್ದು, ಕ್ಷೇತ್ರದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಿಡ್ಡಿಂಗ್​ನಲ್ಲಿ ಭಾಗವಹಿಸಲು 250 ಆಟಗಾರರು ನೋಂದಾಯಿಸಿಕೊಂಡಿದ್ದು, ಪ್ರತಿ ಪ್ರಾಂಚೈಸಿಯಲ್ಲಿ ಇಬ್ಬರು ಐಕಾನ್ ಆಟಗಾರರು ಸೇರಿ ತಲಾ 13 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 11 ಆಟಗಾರರನ್ನು ಅಂಕ ನೀಡುವ ಮೂಲಕ ಹಾಗೂ 2 ಐಕಾನ್ ಆಟಗಾರರನ್ನು ಅಂಕರಹಿತವಾಗಿ ಆಯ್ಕೆ ಮಾಡಿಕೊಳ್ಳಲು ಪ್ರಾಂಚೈಸಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts