More

    ಧನ್ನೂರು ದಲಿತರ ಸ್ಮಶಾನಕ್ಕಾಗಿ ಭೂಮಿ ಖರೀದಿಸಿ

    ಭಾಲ್ಕಿ: ಧನ್ನೂರು(ಎಚ್) ಗ್ರಾಮದಲ್ಲಿ ದಲಿತ ಸಮುದಾಯದ ಸ್ಮಶಾನಕ್ಕಾಗಿ ಪಟ್ಟಾ ಭೂಮಿ ಖರೀದಿಗೆ ಸ್ಥಳ ಗುರುತಿಸಲಾಗಿದೆ. 24 ಗಂಟೆಗಳಲ್ಲಿ ಜಿಲ್ಲಾಧಿಕಾರಿ ಖರೀದಿ ಪ್ರಕ್ರಿಯೆ ಆರಂಭಿಸಿ ಭೂಮಿಯನ್ನು ಸ್ಮಶಾನಕ್ಕಾಗಿ ಹದ್ದುಬಸ್ತು ಮಾಡಿ ಹಸ್ತಾಂತರಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

    ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿ ಇಲ್ಲದಿರುವ ಬಗ್ಗೆ ಕೆಲ ತಿಂಗಳ ಹಿಂದೆ ತಿಳಿದ ತಕ್ಷಣ ಸಕರ್ಾರಿ ಭೂಮಿ ಖರೀದಿಸಲು ತಹಸೀಲ್ದಾರ್ಗೆ ಸೂಚಿಸಿದ್ದೆ. ಆದರೆ ಸಕರ್ಾರಿ ಜಮೀನು ಇಲ್ಲದಿರುವುದು ಗಮನಕ್ಕೆ ಬಂದ ಬಳಿಕ ಪಟ್ಟಾ ಜಮೀನು ಖರೀದಿಗೆ ಸೂಚನೆ ನೀಡಿದರೂ ಮಾರಾಟಕ್ಕೆ ಜನರು ಸಿದ್ಧರಿಲ್ಲ ಎಂಬ ವಿಷಯ ಅಧಿಕಾರಿಗಳು ತಿಳಿಸಿದ್ದರು. ನಂತರ ಜಮೀನು ಖರೀದಿ ಜವಾಬ್ದಾರಿ ಗ್ರಾಮದ ಮುಖಂಡ ಶಿವರಾಜ ಹಾಸನಕರ್ ಅವರಿಗೆ ವಹಿಸಿದ ಬಳಿಕ ಕಳೆದ ಮಾಚರ್್ 8ರಂದು ಬಸವರಾಜ ಎಂಬುವರು 2.37 ಎಕರೆ ಪಟ್ಟಾ ಭೂಮಿಯನ್ನು ಸ್ಮಶಾನಕ್ಕಾಗಿ ಮಾರಲು ಸಮ್ಮತಿಸಿದರು. ಈ ಪ್ರಸ್ತಾವನೆ ತಹಸೀಲ್ದಾರ್ಗೆ ಸಲ್ಲಿಸಿದ್ದು, ಅವರು ಆ.16ರಂದು ಡಿಸಿಗೆ ಕಳಿಸಿದ್ದಾರೆ. ಆದರೆ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

    ಸಕರ್ಾರಕ್ಕೆ ಬಡವರ, ದಲಿತರ ಬಗ್ಗೆ ಕಾಳಜಿ ಇಲ್ಲ. ಸಕರ್ಾರದ ಬಳಿ ಸ್ಮಶಾನ ಭೂಮಿ ಖರೀದಿಸಲೂ ಹಣ ಇಲ್ಲದಿದ್ದರೆ ಬಹಿರಂಗವಾಗಿ ಹೇಳಲಿ. ಅಧಿವೇಶನದ ಬಳಿಕ ನಾನು ವೈಯಕ್ತಿಕ ನೆರವು ನೀಡುವ ಜತೆಗೆ ಜನರಿಂದ ದೇಣಿಗೆ ಸಂಗ್ರಹಿಸಿ ಭೂಮಿ ಖರೀದಿಸಿ ಸ್ಮಶಾನಭೂಮಿ ಸಮಸ್ಯೆ ಪರಿಹರಿಸುವುದಾಗಿ ಪ್ರಕಟಣೆಯಲ್ಲಿ ಸವಾಲು ಹಾಕಿದ್ದಾರೆ.

    ಜನರ ಸಂಕಷ್ಟ ಅರಿತು ಕಾಲಕಾಲಕ್ಕೆ ಸಕರ್ಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ದೊರಕಿಸಲು ಪ್ರಯತ್ನ ಮಾಡುತ್ತಿದ್ದೇನೆ. ಬಿಜೆಪಿ ಸಕರ್ಾರದಲ್ಲಿ ಮಾನವೀಯತೆ ಇಲ್ಲವಾಗಿದೆ. ಗಂಭೀರ, ತುತರ್ು ವಿಷಯಗಳಿಗೂ ತಕ್ಷಣ ಸ್ಪಂದಿಸದಿರುವುದು ಈ ಲೋಪಕ್ಕೆ ಕಾರಣ.
    | ಈಶ್ವರ ಖಂಡ್ರೆ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts