More

    ತಾಲೂಕು ಆಡಳಿತ ತೆರವುಗೊಳಿಸಿದ ಭೂಮಿ ಭೂ ರಹಿತ ದಲಿತರಿಗೆ ನೀಡಿ

    ಚಿಕ್ಕಮಗಳೂರು: ತಾಲೂಕು ಆಡಳಿತ ಗೋಮಾಳ ಮತ್ತು ಕಾಫಿ ಖರಾಬು ಹೆಚ್ಚುವರಿ ಜಮೀನನ್ನು ಬಹು ಜಮೀನು ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಈ ಜಮೀನನ್ನು ಭೂರಹಿತ ದಲಿತರಿಗೆ ಕಾಯ್ದಿರಿಸಿ ಮಂಜೂರು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾಗ ಮನವಿ ನೀಡಿದರು.

    ಈ ವೇಳೆ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್, ಎನ್.ಆರ್.ಪುರ ತಾಲೂಕಿನ ಕಸಬಾ ಹೋಬಳಿ ಸೂಸಲವಾನಿ ಗ್ರಾಮದ ಸರ್ವೇ ನಂ ೩೨/೨ ರಲ್ಲಿ ಗೋಮಾಳ ಮತ್ತು ಕಾಫಿ ಖರಾಬು ಹೆಚ್ಚುವರಿ ಜಮೀನನ್ನು ಬಹು ಜಮೀನು ಒತ್ತುವರಿದಾರರಿಂದ ತೆರವುಗೊಳಿಸಲಾಗಿದೆ. ಈ ಜಮೀನುನ ಭೂರಹಿತ ದಲಿತರಿಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
    ಇದೇ ಸರ್ವೆ ನಂಬರ್‌ನಲ್ಲಿ ೨೦.೮ ಎಕರೆ ಸರ್ಕಾರಿ ಜಮೀನನ್ನು ಭೂಮಾಲೀಕರು ಅತಿಕ್ರಮವಾಗಿ ಸರ್ಕಾರಿ ಕಂದಾಯ ಭೂಮಿಯನ್ನು ಹೊಂದಿದ್ದು, ಈ ಬಗ್ಗೆ ಪರಿಶೀಲಿಸಿದ ತಾಲೂಕು ಆಡಳಿತ ಒತ್ತುವರಿ ತೆರವುಗೊಳಿಸಿದೆ. ಈ ಭೂಮಿಯನ್ನು ಬಡ ಭೂರಹಿತ ದಲಿತರಿಗೆ ಕೃಷಿ ಸಾಗುವಳಿಗಾಗಿ ಮತ್ತು ನಿವೇಶನಕ್ಕಾಗಿ ಕಾಯ್ದಿರಿಸಬೇಕು ಎಂದು ಮನವಿ ಮಾಡಿದರು.
    ಎನ್.ಆರ್.ಪುರ ತಾಲೂಕಿನಾದ್ಯಂತ ಇಂತಹ ಭೂಕಬಳಿಕೆಯ ಸಮಸ್ಯೆಗಳಿದ್ದು, ಉಳ್ಳವರು ಭೂಕಬಳಿಕೆ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ತಾವು ತಾಲೂಕು ದಂಡಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ತ್ವರಿತವಾಗಿ ಸ್ಥಳ ಪರಿಶೀಲಿಸಿ ಸರ್ವೆ ಮಾಡಿಸಿ ದಲಿತರಿಗೆ ಭೂಮಂಜೂರಾತಿ ನೀಡಬೇಕೆಂದು ಮನವಿ ಒತ್ತಾಯಿಸಿದರು.
    ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಂ.ವಿ.ಭವಾನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ರಾಜೇಶ್, ಮೃತ್ಯುಂಜಯ, ಅಬ್ದುಲ್ ರೆಹಮನ್, ತಾಲೂಕು ಸಂಘಟನಾ ಸಂಚಾಲಕ ಬಿ.ಆರ್ ಸಿದ್ದಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts