More

    ದೊಡ್ಡಹಳ್ಳದ ತುಂಬ ಜಾಲಿಕಂಟಿ

    ರೋಣ: ತಾಲೂಕಿನ ಮುಗಳಿ ಗ್ರಾಮದ ದೊಡ್ಡ ಹಳ್ಳದಲ್ಲಿನ ಜಾಲಿಕಂಟಿಗಳನ್ನು ತೆರವುಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ.

    ಗ್ರಾಮದ ದೊಡ್ಡಹಳ್ಳದ ತುಂಬಾ ಜಾಲಿಕಂಟಿ ಬೆಳೆದಿದ್ದರಿಂದ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿ ಮಣ್ಣು ಕೊಚ್ಚಿಹೋಗಿದೆ. ಇದರಿಂದ ಸಾವಿರಾರು ಎಕರೆ ಭೂಮಿ ಫಲವತ್ತತೆ ಕಳೆದುಕೊಂಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೆರೆ, ಹಳ್ಳಗಳ ಸಂರಕ್ಷಣೆಗೆ ನೂರಾರು ಕೋಟಿ ರೂ. ಬಿಡುಗಡೆ ಮಾಡುತ್ತಿವೆ. ಆದರೆ, ಗ್ರಾಮದ ದೊಡ್ಡ ಹಳ್ಳ ಅಭಿವೃದ್ಧಿಪಡಿಸಿಲ್ಲ. ಇದರಿಂದ ಗ್ರಾಮಸ್ಥರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ತಹಸೀಲ್ದಾರ್, ಜಿಲ್ಲಾಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ರೈತರಾದ ರಾಮಪ್ಪ ಜಿಗಳೂರ, ಶೇಖಪ್ಪ ದೇಸಾಯಿ, ಫಕೀರಪ್ಪ ಜಿಗಳೂರ, ಸಣ್ಣ ಮುದಕಪ್ಪ ನಿಶಾನಿ ಆರೋಪಿಸಿದರು.

    ಗ್ರಾಮದ ದೊಡ್ಡಹಳ್ಳದಲ್ಲಿ ಬೆಳೆದ ಜಾಲಿಕಂಟಿಗಳನ್ನು ಕೀಳಿಸಿದರೆ ಹಳ್ಳದಲ್ಲಿ ಸಂಗ್ರಹವಾಗುವ ನೀರು ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರಾವರಿ ಬೇಸಾಯ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ, ಬೇಸಿಗೆಯಲ್ಲಿ ದನಕರುಗಳಿಗೆ ಕುಡಿಯಲು ನೀರು ದೊರಕಿಸಿದಂತಾಗುತ್ತದೆ.

    | ಧರ್ಮಪ್ಪ ಉಸುಲಕೊಪ್ಪ, ಮುಗಳಿ ಗ್ರಾಮಸ್ಥ

    ಉದ್ಯೋಗ ಖಾತ್ರಿ ಯೋಜನೆಯಡಿ ಮುಗಳಿ ಗ್ರಾಮಸ್ಥರು ನಮ್ಮೊಂದಿಗೆ ಕೈಜೋಡಿಸಿದರೆ ಹಳ್ಳದಲ್ಲಿರುವ ಎಲ್ಲ ಕಂಟಿಗಳನ್ನು ತೆರವುಗೊಳಿಸಲು ಸಾಧ್ಯ. ಈ ಕೆಲಸಕ್ಕೆ ಅವರು ಮುಂದೆ ಬಂದರೆ ನಾವು ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತೇವೆ.

    | ರಾಜು ದೊಂಡಕರ, ವಲಯ ಅರಣ್ಯಾಧಿಕಾರಿ ರೋಣ

    ಮುಗಳಿ ಗ್ರಾಮಸ್ಥರು ಹಳ್ಳ ರಕ್ಷಿಸುವ ನಿಟ್ಟಿನಲ್ಲಿ ಮುಂದೆ ಬಂದು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬರುವುದಾದರೆ, ಅದಕ್ಕೆ ತಗಲುವ ಸಂಪೂರ್ಣ ವೆಚ್ಚ ನೀಡಲಾಗುವುದು. ಹಳ್ಳದ ನೀರಿನಿಂದ ಫಲವತ್ತಾದ ಮಣ್ಣು ಹರಿದು ಹೋಗುವುದನ್ನು ತಡೆಯಲು ಹಳ್ಳದ ಬದಿ ಕಲ್ಲು ಪಿಚ್ಚಿಂಗ್ ಮಾಡಲಾಗುವುದು.

    | ಸಂತೋಷ ಪಾಟೀಲ, ರೋಣ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts