More

    ದಡ ಸೇರಲಾರದೆ ಸಂಕಷ್ಟದಲ್ಲಿದ್ದ ಮೀನುಗಾರರ ರಕ್ಷಣೆ

    ಭಟ್ಕಳ: ಭಾರಿ ಮಳೆ, ಗಾಳಿಯಿಂದ ಸಮುದ್ರದಲ್ಲಿ ಅಲೆಗಳು ಹೆಚ್ಚಾಗಿದ್ದರಿಂದ ದಡಕ್ಕೆ ಬರಲಾಗದೇ ರಕ್ಷಣೆಗೆ ಮೊರೆಯಿಟ್ಟ ಮೀನುಗಾರರನ್ನು ಭಟ್ಕಳ ಮುಂಡಳ್ಳಿ ಮೀನುಗಾರರು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ ಘಟನೆ ಭಾನುವಾರ ನಡೆದಿದೆ.

    ಭಾನುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಮಾದೇವ ತಿಮ್ಮಪ್ಪ ಮೊಗೇರ ಅಳ್ವೆಕೋಡಿ ಭಟ್ಕಳ ಅವರ ಮಾಲೀಕತ್ವದ ಗಿಲ್ನೇಟ್ ದೋಣಿಯಲ್ಲಿ ಅಳ್ವೆಕೋಡಿ ಬಂದರು ಮೂಲಕ ಮೀನುಗಾರಿಕೆಗೆ ತೆರಳಿದ್ದ ಸಚಿನ್ ಮೊಗೇರ, ನಾರಾಯಣ ಮೊಗೇರ, ಜ್ಞಾನೇಶ ಮೊಗೇರ ಹಾಗೂ ಹರೀಶ ಮೊಗೇರ ಭಾರಿ ಗಾಳಿ- ಮಳೆಯಿಂದ ದಡಕ್ಕೆ ಬರಲಾಗದೇ ಕಾಗೆ ಗುಡ್ಡದ ಸಮೀಪ ಸಿಲುಕಿಕೊಂಡಿದ್ದರು. ರಕ್ಷಣೆಗಾಗಿ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದರು.

    ಮೀನುಗಾರರ ಸಂಕಷ್ಟ ಅರಿತ ಮುಂಡಳ್ಳಿಯ 5 ಜನರ ತಂಡ ಅಪಾಯ ಮಟ್ಟವನ್ನೂ ಲೆಕ್ಕಿಸದೆ ಸಹಾಯಕ್ಕೆ ಧಾವಿಸಿತು. ಭಾರಿ ಗಾಳಿ, ಮಳೆಯ ನಡುವೆಯೂ ಸಮಾರು 10 ನಾಟಿಕಲ್ ಮೈಲು ದೂರ ಹೋಗಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸಿತು. ಮುಂಡಳ್ಳಿಯ ಅಬೂಬುಕ್ಕರ, ವಿನೋದ ಮೊಗೇರ, ದೇವಿದಾಸ ಮೊಗೇರ ಮುರ್ಡೆಶ್ವರ, ಮಂಜುನಾಥ ಮೊಗೇರ ಮುರ್ಡೆಶ್ವರ, ಕೃಷ್ಣ ಮೊಗೇರ ಬೆಳ್ನಿ ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಿಸಿದವರು. ಅವರ ಕಾರ್ಯಕ್ಕೆ ಎಲ್ಲಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

    ಕಾರವಾರ ತೀರದಲ್ಲಿ ಮುಳುಗಿದ ಮಲ್ಪೆ ಬೋಟ್ : ಅಬ್ಬರದ ಅಲೆಗಳಿಗೆ ಸಿಲುಕಿ ಮಲ್ಪೆ ಮೂಲದ ಬೋಟ್ ಕಾರವಾರದ ಸಮೀಪ ಮುಳುಗಡೆಯಾದ ಘಟನೆ ಭಾನುವಾರ ನಡೆದಿದೆ. ಮಲ್ಪೆಯ ಜಾನ್ಹವಿ ಕೋಟ್ಯಾನ್ ಅವರಿಗೆ ಸೇರಿದ ಬ್ರಾಮರಿ ಬೋಟ್ ಮುಳುಗಿದ್ದು, ಅದರಲ್ಲಿದ್ದ ಭಟ್ಕಳ ಹಾಗೂ ಉಡುಪಿ ಭಾಗದ ಏಳು ಜನ ಮೀನುಗಾರರು ಬೇರೆ ಬೋಟ್ ಹತ್ತಿಕೊಂಡು ಕಾರವಾರ ಸೇರಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಅಬ್ಬರದ ಅಲೆಗಳಿಂದ ಬೋಟ್ ಒಡೆದು ಒಳಗಡೆ ನೀರು ತುಂಬಿಕೊಂಡಿತು ಎನ್ನಲಾಗಿದೆ.

    ಮೀನುಗಾರ ನಾಪತ್ತೆ: ಭಟ್ಕಳದ ಬೆಳಕೆ ಸಮೀಪ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾದ ಘಟನೆ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts