More

    ತವರಿಗೆ ಬಂದ ವಲಸಿಗರು ಕ್ವಾರಂಟೈನ್ಗೆ

    ಕಲಬುರಗಿ: ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿ ಲಾಕ್ಡೌನ್ನಲ್ಲಿ ಸಿಲುಕಿದ್ದ 1251 ಕಾಮರ್ಿಕರು ವಿಶೇಷ ಶ್ರಮಿಕ ರೈಲಿನಲ್ಲಿ ಮಂಗಳವಾರ ನಸುಕಿನ ಜಾವ ನಗರದ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದರು.
    ಕಲಬುರಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗೆ ಸೇರಿದ ಈ ಜನ ಹೊಟ್ಟೆ ತುಂಬಿಸಿಕೊಳ್ಳಲು ಮುಂಬೈ, ಪುಣೆ ಹೀಗೆ ಹೀಗೆ ನಾನಾ ಕಡೆ ಹೋಗಿದ್ದರು. ತವರಿಗೆ ಬಂದ ಸಂಭ್ರಮದಲ್ಲಿದ್ದ ಈ ಎಲ್ಲರ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕೈಗೆ ಸೀಲ್ ಹಾಕಿ ನಿಗದಿತ ಕ್ವಾರಂಟೈನ್ ಕೇಂದ್ರಗಳಿಗೆ ಕಳಿಸಿಕೊಡಲಾಯಿತು. ನಮ್ಮೂರಿಗೆ ಬಂದೇವಲ್ಲ ಎಂಬ ಧನ್ಯತಾಭಾವ ಅವರ ಮುಖದಲ್ಲಿ ಕಂಡು ಬಂದಿತು.
    ಸಂಸದ ಡಾ.ಉಮೇಶ ಜಾಧವ್ ಮನವಿ ಮೇರೆಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸಿ ಥಾಣೆಯಿಂದ ಕಾರ್ಮಿಕರನ್ನು ಶ್ರಮಿಕ ರೈಲಿನಲ್ಲಿ ಕಲಬುರಗಿಗೆ ಕರೆತರುವ ವ್ಯವಸ್ಥೆ ಮಾಡಿದ್ದು, ಪ್ರತಿ ಬೋಗಿ ಬಳಿಯೇ ಸ್ಥಾಪಿಸಿದ್ದ ಕೌಂಟರ್ನಲ್ಲಿ ಆರೋಗ್ಯ ಇಲಾಖೆಯವರು ತಪಾಸಣೆ ನಡೆಸಿದರು. ಕಂದಾಯ ಮತ್ತು ಪಾಲಿಕೆ ಸಿಬ್ಬಂದಿ ವಲಸಿಗರ ಸಮಗ್ರ ವಿವರ ಪಡೆದು ಕೈಗೆ ಸೀಲ್ ಹಾಕುವ ಮೂಲಕ ಕಡ್ಡಾಯವಾಗಿ ಕ್ವಾರಂಟೈನ್ಗೆ ಕಳುಹಿಕೊಟ್ಟರು. ಅನೇಕ ಕಾರ್ಮಿಕರು ತಮ್ಮ ಕಂಕುಳಲ್ಲಿ ಮಕ್ಕಳು, ತಲೆ ಮೇಲೆ ಗಂಟು-ಮೂಟೆ ಹೊತ್ತು ನಿಲ್ದಾಣದಿಂದ ಹೊರಗಡೆ ಹೆಜ್ಜೆ ಹಾಕಿದರು.
    ಮಂಗಳವಾರ ಬೆಳಗ್ಗಿನ ಜಾವ 2.30ರ ಸುಮಾರಿಗೆ ಕಲಬುರಗಿಗೆ ಬಂದಿಳಿದ ಕಾರ್ಮಿಕರನ್ನು ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮೂಡ, ದತ್ತಾತ್ರೇಯ ಪಾಟೀಲ್ ರೇವೂರ, ಜಿಲ್ಲಾಧಿಕಾರಿ ಶರತ್ ಬಿ., ನಗರ ಪೊಲೀಸ್ ಆಯುಕ್ತ ಸತೀಶಕುಮಾರ್ ಎನ್., ಜಿಪಂ ಸಿಇಒ ಡಾ.ರಾಜಾ ಪಿ., ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರಬಾಬು, ಎಡಿಸಿ ಡಾ.ಶಂಕರ ವಣಿಕ್ಯಾಳ, ಈಶಾನ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಮ್, ರೈಲ್ವೆ ಅಧಿಕಾರಿ ಪ್ರಸಾದರಾವ್ ಮೊದಲಾದವರು ಬರಮಾಡಿಕೊಂಡರು. ವಿವಿಧ ಇಲಾಖೆ ಸಿಬ್ಬಂದಿ ಆಗಮನ ಪ್ರಕ್ರಿಯೆ ಪೂರ್ಣಗೊಳಿಸಿದರು.
    ಪ್ರತಿಯೊಬ್ಬರಿಂದ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಪಡೆದು ಸೇವಾ ಸಿಂಧು ಆ್ಯಪ್ನಲ್ಲಿ ಅಪ್ಲೋಡ್ ಮಾಡಿ ಮಾಹಿತಿ ಖಚಿತಪಡಿಸಿಕೊಳ್ಳಲಾಯಿತು. ಈ ಕೆಲಸ ಬೆಳಗ್ಗೆ 7ರವರೆಗೂ ನಡೆಯಿತು. ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ರೈಲು ನಿಲ್ದಾಣದಲ್ಲಿ ನಿರ್ಮಿಸಿದ್ದ ಒಂದೇ ದ್ವಾರದ ಮೂಲಕ ಅವರವರ ತಾಲೂಕುಗಳಿಗೆ ಈಶಾನ್ಯ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಕಳಿಸಿಕೊಡಲಾಯಿತು. ಕಾರ್ಮಿಕರಿಗೆ ತಿಂಡಿ-ನೀರು, ಚಹಾ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ತಾಲೂಕಿನಲ್ಲಿ ಗುರುತಿಸಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಇವರೆಲ್ಲರೂ 15 ದಿನ ಇರಲಿದ್ದಾರೆ.

    ಊರಿಗೆ ಬಂದ ಸಂಭ್ರಮದಲ್ಲಿ ಶ್ರಮಿಕರು
    ಲಾಕ್ಡೌನ್ ಬಳಿಕ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕಾಮರ್ಿಕರ ಮೊಗದಲ್ಲಿ ಕೊನೆಗೂ ತಮ್ಮೂರಿಗೆ ಬಂದ ಬಗ್ಗೆ ಸಂಭ್ರಮ, ಖುಷಿ ಕಂಡುಬಂದಿತು. ನಿಲ್ದಾಣಕ್ಕೆ ರೈಲು ಬರುತ್ತಲೇ ಕಾಮರ್ಿಕರು ಕೇಕೆ ಹಾಕಿ ಸಂಭ್ರಮಿಸಿದರು. ಬಂದವರು ತಮ್ಮನ್ನು ಕರೆತರಲು ಶ್ರಮಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಕ್ವಾರಂಟೈನ್ಗೆ ಹೋದರೂ ಚಿಂತೆಯಿಲ್ಲ, ನಮ್ಮೂರಿನ ಹತ್ತಿರ ಇದ್ದೇವಲ್ಲ ಎಂಬುದು ಸಮಾಧಾನದ ವಿಷಯ ಎಂದು ಚಿತ್ತಾಪುರ ತಾಲೂಕಿನ ಯಾಗಾಪುರದ ಲಕ್ಷ್ಮಣ ರಾಠೋಡ್ ಹೇಳಿಕೊಂಡರು. ಸಂಸದರು ಮತ್ತು ಜಿಲ್ಲೆಯ ಎಲ್ಲ ಶಾಸಕರ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts