More

    ತಂತ್ರಜ್ಞಾನದ ಬಳಕೆ ಮಿತಿಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ

    ಕಲಬುರಗಿ : ಡಿಜಿಟಲï ತಂತ್ರe್ಞÁನದ ಬಳಕೆ ಮಿತಿಮೀರಿದರೆ ಅಪಾಯ ತಪ್ಪಿದ್ದಲ್ಲ. ಅಗತ್ಯವಿದ್ದಷ್ಟು ಬಳಸುವುದು ಸೂಕ್ತ ಎಂದು ಖ್ವಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಡಾ.ನಮ್ರತಾ ರಾವುತ್ ಹೇಳಿದರು.

    ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಇಂಜಿನಿಯರಿAಗ್ ಕಾಲೇಜಿನಲ್ಲಿ ಗೋದುತಾಯಿ ಅವ್ವ ವುಮೆನ್ಸ್ ಕ್ಲಬ್ ಸೋಮವಾರ ಏರ್ಪಡಿಸಿದ್ದ ಡಿಜಿಟಲï ಅಡಿP್ಷÀನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಬೈಲ್ ನಮ್ಮನ್ನು ಪ್ರe್ಞÁಹೀನರನ್ನಾಗಿ ಮಾಡಿದೆ. ಎಲ್ಲ ವಯೋಮಾನದವರು ಮೊಬೈಲ್ ದಾಸರಾಗಿದ್ದು, ಹೊರಬರಲು ಸ್ವಯಂ ನಿಯಂತ್ರಣ ಒಂದೇ ದಾರಿ. ತರ್ಕಬದ್ಧ ಯೋಚನೆಯೊಂದಿಗೆ ವಿದ್ಯಾರ್ಥಿಗಳು ಮಾಹಿತಿ ಕಲೆ ಹಾಕಲು ಸಾಧಾರಣ ಮೊಬೈಲ್ ಬಳಸಿದರೆ ಉತ್ತಮ ಎಂದು ಕಿವಿಮಾತು ಹೇಳಿದರು.

    ಡಿಜಿಟಲ್ ಗೀಳಿನ ಬಗ್ಗೆ ಬೆಂಗಳೂರಿನ ಮನೋತಜ್ಞ ಭುಜಬಲಿ ಬೋಗಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಏಕಾಗ್ರತೆ, ನಿದ್ರಾಹೀನತೆ, ಓದಿದ್ದು ನೆನಪಿನಲ್ಲಿ ಉಳಿಯದಿರುವುದು ಸೇರಿ ಹತ್ತಾರು ಮಾನಸಿಕ ಕಾಯಿಲೆಗಳು ಬರುತ್ತಿವೆ. ಮೊಬೈಲ್‌ನಲ್ಲಿ ವ್ಯಸನಿ ತಂತ್ರe್ಞÁನ (ಅಡಿP್ಷÀನ್ ಟೆಕ್ನಾಲಜಿ) ಅಳವಡಿಸಿರುತ್ತಾರೆ. ಈ ಕಾರಣಕ್ಕೆ ಎಲ್ಲರೂ ಬೇಗ ಮೊಬೈಲ್ ವ್ಯಸನಿಗಳಾಗುತ್ತಿz್ದÁರೆ ಎಂದರು.


    ಕಲರ್, ಸೈಜ್, ಫಾಂಟ್ ಹೀಗೆ ಮೊಬೈಲ್ ಬಳಸುವ ವೀP್ಷÀಕರ ಮನಸ್ಥಿತಿ ಅರಿತು ಉತ್ಪಾದಕರು ಕೊಡುತ್ತಾರೆ. ಮಕ್ಕಳನ್ನು ದಾರಿಗೆ ತರುವುದು ಪಾಲಕರ ಜವಾಬ್ದಾರಿ. ಪಾಲಕರು ಮನೆಯಲ್ಲಿ ಮೊಬೈಲ್ ನೋಡುತ್ತ ಕುಳಿತು ಮಕ್ಕಳಿಗೆ ಬಿಡಿ ಎಂದು ಹೇಳಿದರೆ ನಡೆಯಲ್ಲ. ಮೊದಲು ನೀವು ನೋಡುವುದನ್ನು ನಿಲ್ಲಿಸಬೇಕು. ರಾತ್ರಿ ಮೊಬೈಲ್ ಬಳಕೆಯಿಂದ ನಿದ್ರಾಹೀನತೆ ಕಾಡುತ್ತದೆ. ಬದ್ಧತೆ ರೂಢಿಸಿಕೊಂಡು ದಿನದಲ್ಲಿ ಇಷ್ಟೇ ಹೊತ್ತು ಮೊಬೈಲ್ ನೋಡಬೇಕು ಎಂಬುದನ್ನು ನಿರ್ಧರಿಸಬೇಕು. ಬೆಳಗ್ಗೆ ಎದ್ದ ತP್ಷÀಣ ಮೊದಲು ಒಂದು ಗಂಟೆ ಮೊಬೈಲ್ ಮುಟ್ಟಲೇಬಾರದು. ತಮ್ಮ ವಿದ್ಯಾಭ್ಯಾಸ, ಯೋಗ, ಧ್ಯಾನ ಮಾಡಬೇಕು. ಹಂತ-ಹAತವಾಗಿ ಮೊಬೈಲ್ ಬಳಕೆ ಅವಧಿ ಕಡಿಮೆ ಮಾಡುತ್ತ ಹೋಗಬೇಕು. ಪಾಲಕರು ಮಕ್ಕಳಿಗೆ ಟೈಂ ಟೇಬಲï ಹಾಕಬೇಕು. ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ಕೊಡಬೇಕು ಎಂದು ಸಲಹೆ ನೀಡಿದರು.

    ಶರಣಬಸವ ವಿವಿ ಡೀನ್ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ ಅಧ್ಯP್ಷÀತೆ ವಹಿಸಿದ್ದರು. ಪೂಜಾ ಪ್ರಾರ್ಥಿಸಿ ಸ್ವಾಗತಿಸಿದರು. ವಿದ್ಯಾಶ್ರೀ ಪರಿಚಯಿಸಿದರು. ನೀಲಮ್ ವಂದಿಸಿದರು. ಸ್ಮೀತಾ ನಿರೂಪಣೆ ಮಾಡಿದರು. ಐಎಸ್‌ಟಿ ನಿಕಾಯದ ಮುಖ್ಯಸ್ಥೆ ಶೀತಲï ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts