More

    ಡಿಮ್ಹಾನ್ಸ್​ನಲ್ಲಿ ಪ್ರಯೋಗಾಲಯ ಪ್ರಾರಂಭ

    ಧಾರವಾಡ: ನಗರದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಆವರಣದಲ್ಲಿ ಸ್ಥಾಪಿಸಿದ ಕೋವಿಡ್-19 ಪ್ರಯೋಗಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಶುಕ್ರವಾರ ಉದ್ಘಾಟಿಸಿದರು.

    ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಮಾತನಾಡಿ, ಈ ಕೇಂದ್ರ ಸರ್ಕಾರದ ಆರ್ಥಿಕ ನೆರವು, ರಾಜ್ಯ ಸರ್ಕಾರದ ಮೂಲ ಸೌಕರ್ಯಗಳೊಂದಿಗೆ ಪ್ರಯೋಗಾಲಯ ಪ್ರಾರಂಭವಾಗಿದೆ. ಆರೋಗ್ಯ ಸಂಶೋಧನಾ ನಿರ್ದೇಶನಾಯಲಯವು 5 ವರ್ಷ ಈ ಪ್ರಯೋಗಾಲಯಕ್ಕೆ ನೆರವು ನೀಡಲಿದೆ. ಆರ್​ಟಿಪಿಸಿಆರ್, ಆರ್​ಎನ್​ಎ ಎಕ್ಸ್​ಟ್ರ್ಯಾಕ್ಟರ್, ಬಯೋ ಸೇಫ್ಟಿ ಕ್ಯಾಬಿನೆಟ್ ಸೇರಿ ಅಗತ್ಯ ಉಪಕರಣ, ತಜ್ಞ ಮಾನವ ಸಂಪನ್ಮೂಲಗಳೊಂದಿಗೆ ಡಿಮ್ಹಾನ್ಸ್​ನ ಮಲ್ಟಿ ಡಿಸಿಪ್ಲೆನರಿ ರಿಸರ್ಚ್ ಯೂನಿಟ್ ಕಟ್ಟಡದಲ್ಲಿ ಈ ಪ್ರಯೋಗಾಲಯ ಕಾರ್ಯನಿರ್ವಹಿಸಲಿದೆ. ನಿತ್ಯ 100 ಗಂಟಲ ದ್ರವ ಮಾದರಿಗಳನ್ನು ಪರೀಕ್ಷಿಸಬಹುದು ಎಂದರು.

    ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ವಿ.ಪ. ಸದಸ್ಯರಾದ ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಡಿಮ್ಹಾನ್ಸ್ ಪ್ರಾಧ್ಯಾಪಕ ಡಾ. ರಾಘವೇಂದ್ರ ನಾಯಕ್, ಪ್ರಯೋಗಾಲಯ ತಜ್ಞರು, ಸಿಬ್ಬಂದಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts