More

    ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಂಕು ಕಳೆಯುವ ಸುರಂಗ

    ಧಾರವಾಡ: ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಧಾರವಾಡದ ಟಾಟಾ ಹಿಟಾಚಿ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲಾದ ಸೋಂಕು ಕಳೆಯುವ ಸುರಂಗಕ್ಕೆ ಟಾಟಾ ಹಿಟಾಚಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಐಐನ ಕರ್ನಾಟಕ ಅಧ್ಯಕ್ಷ ಸಂದೀಪ್ ಸಿಂಗ್ ಶನಿವಾರ ಚಾಲನೆ ನೀಡಿದರು.

    ಈ ವೇಳೆ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ಮಾತನಾಡಿ, ಟಾಟಾ ಹಿಟಾಚಿ ಸಂಸ್ಥೆ 200 ಲೀ. ಸ್ಯಾನಿಟೈಸರ್ ಹಾಗೂ 20,000 ಮಾಸ್ಕ್​ಗಳು ಹಾಗೂ 5,000 ಎನ್ 95 ಮಾಸ್ಕ್​ಗಳು ನೀಡಲು ಒಪ್ಪಿದೆ. 4 ಸೋಂಕು ಕಳೆಯುವ ಸುರಂಗ ನಿರ್ಮಾಣ ಮಾಡಲು ಒಪ್ಪಿದ್ದಾರೆ ಎಂದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಶಸ್ತ್ರ ಚಿಕಿತ್ಸ ಕ ಡಾ. ಶಿವಕುಮಾರ ಮಾನಕರ, ಟಾಟಾ ಹಿಟಾಚಿ ಆಡಳಿತಾಧಿಕಾರಿ ಪ್ರಶಾಂತ ದೀಕ್ಷಿತ್, ಅಜಿತ್ ಕುಲಕರ್ಣಿ, ವಿಎಸ್​ವಿ ಪ್ರಸಾದ, ಬಾಲಾ ವಿಜಯನ್, ಡಾ. ಪ್ರಭು, ಯಂಗ್ ಇಂಡಿಯಾದ ಅಧ್ಯಕ್ಷ ಶ್ರೀನಿವಾಸ ಜೋಶಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts