More

    ಜಿಲ್ಲಾದ್ಯಂತ 31ರವರೆಗೆ ನಿಷೇಧಾಜ್ಞೆ ಜಾರಿ

    ಗದಗ: ಶುಕ್ರವಾರ ಸಂಜೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಮತ್ತೆರಡು ಕರೊನಾ ಸೋಂಕು ಶಂಕೆ ಪ್ರಕರಣಗಳು ದಾಖಲಾಗಿವೆ.

    ಮುಂಡರಗಿಯ ಸಾರಿಗೆ ಸಂಸ್ಥೆ ಕಂಡಕ್ಟರ್ ಹಾಗೂ ಇದೇ ತಾಲೂಕಿನ ಕದಂಪುರ ಗ್ರಾಮದ ವ್ಯಕ್ತಿ ದಾಖಲಾಗಿದ್ದಾರೆ.

    ಇಬ್ಬರ ರಕ್ತದ ಮಾದರಿ ಮತ್ತು ಗಂಟಲ ದ್ರವವನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಜಿಲ್ಲೆಯಲ್ಲಿ 16 ಸೋಂಕಿತರ ಪೈಕಿ 14 ಪ್ರಕರಣಗಳು ನೆಗೆಟಿವ್ ಬಂದಿವೆ.

    ಇಂದಿನಿಂದ ನಿಷೇಧಾಜ್ಞೆ: ಜಿಲ್ಲೆಯಲ್ಲಿ ಕರೊನಾ ಪಿಡುಗು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶದನ್ವಯ ಜಿಲ್ಲಾದ್ಯಂತ ಶನಿವಾರದಿಂದ ಮಾ. 31ರವರೆಗೆ ದಂಡ ಸಂಹಿತೆ ಪ್ರಕ್ರಿಯೆ 144ರ ಪ್ರಕಾರ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶಿಸಿದ್ದಾರೆ.

    ಜಿಲ್ಲಾದ್ಯಂತ ಅಂಗನವಾಡಿ, ಶಾಲಾ, ಕಾಲೇಜು ಹಾಗೂ ಕೋಚಿಂಗ್ ಸೆಂಟರ್ ಎಲ್ಲ ತರಹದ ಶಿಕ್ಷಣ ಸಂಸ್ಥೆಗಳಿಗೆ (ಪರೀಕ್ಷೆ ಹೊರತುಪಡಿಸಿ) ರಜೆಯನ್ನು ಘೊಷಿಸಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಹ ಸ್ಥಳಗಳಾದ ಸಂತೆ, ಜಾತ್ರೆಗಳನ್ನು ಮುಂದೂಡಲಾಗಿದೆ. ಚಿತ್ರಮಂದಿರ, ನಾಟಕ ಪ್ರದರ್ಶನ, ಉದ್ಯಾನ, ಹೋಟೆಲ್, ಡಾಬಾ ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಿದೆ.

    ಧಾರ್ವಿುಕ ಕೇಂದ್ರಗಳ ಉತ್ಸವ, ಜಾತ್ರೆಗಳನ್ನು ಆಯಾ ಕೇಂದ್ರಗಳ ಮುಖ್ಯಸ್ಥರು, ಅಧಿಕಾರಿ, ಸಿಬ್ಬಂದಿ ಸರಳವಾಗಿ ಆಚರಿಸಬೇಕು. ದೇವಸ್ಥಾನದಲ್ಲಿ ದೇವರ

    ದರ್ಶನಕ್ಕೆ ಮಾತ್ರ ಅವಕಾಶವಿದ್ದು, ವಸತಿಗೆ

    ಅವಕಾಶವಿಲ್ಲ. ಬೇಸಿಗೆ ಶಿಬಿರ ಸಮಾರಂಭ, ವಿಚಾರ ಸಂಕಿರಣ, ಕ್ರೀಡಾಕೂಟ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಗೊಳಿಸಲಾಗಿದೆ. ಮದುವೆ ನಿಶ್ಚಿತಾರ್ಥಗಳಲ್ಲಿ 100ಕ್ಕೂ ಹೆಚ್ಚು ಜನರ ಸೇರುವಿಕೆ ನಿರ್ಬಂಧಿಸಿದೆ. ವಿದೇಶ, ಅನ್ಯ ರಾಜ್ಯ ಹಾಗೂ ಕರೊನಾ ಪೀಡಿತ ಪ್ರದೇಶಗಳಿಂದ ಬರುವ ವ್ಯಕ್ತಿಗಳು ನೇರವಾಗಿ ಸಂಬಂಧಿತ ಆರೋಗ್ಯ ಕೇಂದ್ರಗಳಲ್ಲಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಪ್ರತಿಬಂಧಕಾಜ್ಞೆಯಡಿ ದಿನಬಳಕೆಯ ಅಗತ್ಯ ವಸ್ತುಗಳ ಮಾರಾಟಕ್ಕೆ ವಿನಾಯ್ತಿ ನೀಡಲಾಗಿದೆ.

    ಸಾರ್ವಜನಿಕರು ಕರೊನಾ ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts