More

    ಗದುಗಿನ ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

    ಗದಗ: ಕನಕದಾಸ ಶಿಕ್ಷಣ ಸಮಿತಿಯ ಕಲಾ, ವಾಣಿಜ್ಯ , ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬಿಎ 2ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಪವಿತ್ರಾ ಕಡಕೋಳ ಸೈಕ್ಲಿಂಗ್ ನಲ್ಲಿ ರಾಷ್ಟ್ರಮಟ್ಡಕ್ಕೆ ಆಯ್ಕೆಯಾಗಿದ್ದಾಳೆ ಎಂದು ಸಮಿತಿಯ ಕಾರ್ಯದರ್ಶಿ ರವೀಂದ್ರನಾಥ ದಂಡಿನ ಹೇಳಿದರು.
    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖೇಲೋ ಇಂಡಿಯಾ ಟ್ಯಾಲೆಂಟ್‌ ಡೆವಲಪ್ಮೆಂಟ್ ಪ್ರೋಗ್ರಾಮ್ ನ ಡೆಪ್ಯುಟಿ ಡೈರೆಕ್ಟರ್ ಆದೇಶದ ಮೇರೆಗೆ ಪಟಿಯಾಲದ ನೇತಾಜಿ ಸುಭಾಷ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾಳೆ ಎಂದರು.
    ಕಳೆದ ಮಾರ್ಚ್ ತಿಂಗಳ 28ರಿಂದ 31ರ ವರೆಗೆ ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಎಂಟಿಬಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 2 ಬೆಳ್ಳಿ ಪದಕ, 1 ಕಂಚಿನ ಒದಕ ಪಡೆದು ಗದಗ ಜಿಲ್ಲೆ ಸೇರಿ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ ಎಂದು ಹೇಳಿದರು.
    ರಾಜ್ಯ ಸೈಕ್ಲಿಂಗ್ ಅಮೆಚ್ಯೂರ್ ಅಸೋಸಿಯೇಷನ್ ನ ಜಿ.ಬಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 1997ರಿಂದಲೂ ಸೈಕ್ಲಿಂಗ್ ನಲ್ಲಿ ಅನೇಕ ಕ್ರೀಡಾಪಟುಗಳು ಸಾಧನೆ ಮಾಡುತ್ತಾ ಬಂದಿದ್ದಾರೆ. 2008ರಿಂದ ಹಾಸ್ಟೆಲ್ ಆರಂಭವಾಯಿತು. ಈ ಹಾಸ್ಟೆಲ್ ಆರಂಭವಾದ ನಂತರ ಅನೇಕ ಬಡಕುಟುಂಬದ ಪ್ರತಿಭೆಗಳಿಗೆ ತಮ್ಮ ಕೌಶಲಗಳನ್ನು ಪ್ರದರ್ಶಿಸಲು ಅನುಕೂಲವಾಗಿದೆ. ಆರ್ ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ 10 ಎಕರೆ ಜಮೀನು ಮೀಸಲಿಡಲಾಗಿದೆ ಎಂದು ಹೇಳಿದರು.
    ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಮಾತನಾಡಿ, ಮೊದಲ ಬಾರಿ ಗದಗನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದೆ. ನಂತರ ಈವರೆಗೆ 9 ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ 8 ಪದಕಗಳನ್ನು ಪಡೆದಿದ್ದೇನೆ. 19 ಮೌಂಟನ್ ಬೈಕ್ ಸೈಕ್ಲಿಂಗ್ ನ್ಯಾಷನಲ್ ಚಾಂಪಿಯನ್ ಶಿಪ್ ಭಾಗವಹಿಸಿದ್ದೇನೆ. 18 ಟೈಮ್ ಟ್ರೈಲ್ ಟೀಮ್ ಗೋಲ್ಡ್ ಮೆಡಲ್, 16 ಯೂತ್ ಗರ್ಲ್ಸ್ ಟೈಮ್ ಟ್ರೈಲ್ ಸಿಲ್ವರ್ ಮೆಡಲ್, 16 ಯೂತ್ ಗರ್ಲ್ಸ್ ಮಾಸ್ ಸ್ಟಾರ್ಟ್ ಬ್ರೌನ್ ಮೆಡಲ್ ಪಡೆದು ಈಗ ಪಟಿಯಾಲದ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿದ್ದೇನೆ ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ.ಬಿ. ಗವಾನಿ, ಉಪಪ್ರಾಚಾರ್ಯ ಡಾ. ಜಿ.ಪಿ ಜಂಪಣ್ಣನವರ, ಎಸ್.ಎಸ್. ರಾಯ್ಕರ್, ವಿ.ಎಚ್. ಕೊಳ್ಳಿ, ಬಿ.ಐ. ಬಿರಾದಾರ ಸೇರಿ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts