More

    ಜಾಗೃತಿ ಜಾಥಾ,ಕಾಯಿಸಿ,ಆರಿಸಿದ ನೀರು ಕುಡಿಯಲು ಸಲಹೆ


    ಚಿತ್ರದುರ್ಗ: ಸ್ವಚ್ಛತೆ,ವೈಯಕ್ತಿಕ ಶುಚಿತ್ವ ಕುರಿತ ವಿಶೇಷ ಆಂದೋಲನ ಜಿಲ್ಲೆಯ 189 ಗ್ರಾಪಂಗಳಲ್ಲಿ ಶನಿವಾರ ಏಕಕಾಲಕ್ಕೆ ಜರುಗಿತು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ನಿರ್ದೇಶನದಂತೆ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿ ಗ್ರಾ ಪಂ ಗಳಲ್ಲಿ ಜಾಗೃತಿ ಜಾಥಾವನ್ನು ಏರ್ಪಡಿಸಲಾಗಿತ್ತು.
    ನಾನು ಬದಲಾದರೆ ಜಗತ್ತು ಬದಲಾದಂತೆ,ಬದಲಾವಣೆ ನಮ್ಮಿಂದಲೇ ಆಗಲಿ ಎಂಬ ಘೋಷವಾಕ್ಯದೊಂದಿಗೆ ಗ್ರಾಮೀಣ ಜನರಿಗೆ ವೈಯಕ್ತಿಕ ಶುಚಿತ್ವ ಹಾಗೂ ನೈರ್ಮಲ್ಯ ಕುರಿತು ಅರಿವು ಮೂಡಿಸಲಾಯಿತು. ಗ್ರಾಮಗಳಲ್ಲಿ ಕಸ ಸಂಗ್ರಹಿಸುವ ಸ್ವಚ್ಛ ವಾಹಿನಿ ಮೂಲಕ ಸ್ವಚ್ಛ ತೆಯ ಮಹತ್ವನ್ನು ಬಿತ್ತರಿಸಲಾಯಿತು.
    ಚುನಾಯಿತ ಪ್ರತಿನಿಧಿಗಳು,ಗ್ರಾ.ಪಂ ಸಿಬ್ಬಂದಿ,ಆಶಾ,ಅಂಗನವಾಡಿ ಕಾರ‌್ಯಕರ್ತೆಯರು,ಶಿಕ್ಷಕರು,ವಿದ್ಯಾರ್ಥಿಗಳು,ಸಂಘ-ಸಂಸ್ಥೆಗಳ ಸ ದಸ್ಯರು ಜಾಥಾದಲ್ಲಿದ್ದರು. ಕುಡಿಯುವ ನೀರಿನಿಂದ ಬರಹುದಾದ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ,ಬಯಲು ಶೌಚ ಬೇಡ,ಘನ ಮತ್ತು ದ್ರವ ತ್ಯಾಜ್ಯನಿರ್ವಹಣೆ ಹಾಗೂ ನೈರ್ಮಲ್ಯ ಅಭ್ಯಾಸಗಳ ಕುರಿತಂತೆ ತಿಳಿಸಲಾಯಿತು.
    ಕಾಯಿಸಿ ಆರಿಸಿದ ನೀರು ಕುಡಿಯಿರಿ
    ಮನೆ ಸುತ್ತಲಿನ ಪರಿಸರ ಸ್ವಚ್ಛವಿರಬೇಕು. ಕೊಳವೆಬಾವಿ,ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತಂದರೂ ತಪ್ಪದೇ ಕಾಯಿಸಿ ಆರಿಸಿ ಕುಡಿಯುವಂತೆ ಚಿತ್ರದುರ್ಗ ತಾ.ಪಂ.ಇಒ ಹನುಮಂತಪ್ಪ ಹೇಳಿದರು. ಚಿತ್ರದುರ್ಗ ತಾಲೂಕು ಜಾನಕೊಂಡದಲ್ಲಿ ಏರ್ಪಡಿಸಿದ್ದ ಜಾಥಾದಲ್ಲಿ ಅವರು ಮಾತನಾಡಿ,ಸಾಂಕ್ರಾಮಿಕ ರೋಗಗಳು ಗಂಭೀರ ಸ್ವರೂಪ ಪಡೆದುಕೊಳ್ಳುವ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಜಿಪಂ ಸಹಾಯಕ ಯೋಜನಾ ಅಧಿಕಾರಿ ಸುಮಾ,ಗ್ರಾ.ಪಂ.ಅಧ್ಯಕ್ಷ ಚಂದ್ರಪ್ಪ,ಉಪಾಧ್ಯಕ್ಷೆ ರಂಗಮ್ಮ,ಪಿಡಿಒ ಮಂಜುನಾಥ,ಸದಸ್ಯರು,ಶಿಕ್ಷಕರು ಮತ್ತಿತರರು ಇದ್ದರು.


    (ಪೋಟೊ ಇಲ್ಲ)


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts