More

    ಗ್ರಾಪಂ ಬೊಕ್ಕಸ ಭರ್ತಿಗೆ ತೊಡಕಾದ ಬರ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
    ಎದುರಾಗಿರುವ ತೀವ್ರ ಬರಗಾಲ, ರಾಜ್ಯದ ಗ್ರಾಪಂಗಳ ಕಂದಾಯ ವಸೂಲಿಗೂ ಹಿನ್ನಡೆ ಉಂಟು ಮಾಡಿದ್ದು, ಗ್ರಾಪಂಗಳ ಆರ್ಥಿಕ ಸ್ವಾವಲಂಬನೆಗೆ ತೊಡಕಾಗಿದೆ. ಕಂದಾಯ ವಸೂಲಿ ಪ್ರಗತಿ ಪರಿಶೀಲನೆ ವೇಳೆ ಪ್ರಗತಿ ಕುಂಟಿತಗೊಂಡಿರುವುದಕ್ಕೆ ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
    ಸಂಪನ್ಮೂಲ ಕ್ರೋಢಿಕರಿಸದಿದ್ದರೆ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಕಷ್ಟವಾಗಲಿದೆ ಎಂಬುದು ಪಿಡಿಒಗಳ ಎಚ್ಚರ. 2023-24ನೇ ಸಾಲಿನ ಕಂದಾಯ ವಸೂಲಿಯಲ್ಲಿ ರಾಜ್ಯದಲ್ಲೇ ರಾಮನಗರ ಜಿಲ್ಲೆ ಮುಂಚೂಣಿಯಲ್ಲಿದ್ದರೆ, ಬೆಳಗಾವಿ ಹಾಗೂ ಯಾದಗಿರಿ ಜಿಲ್ಲೆಗಳು ಕೊನೆಯಲ್ಲಿವೆ.
    ರಾಜ್ಯದಲ್ಲಿರುವ 5949 ಗ್ರಾಪಂಗಳ ಪೈಕಿ ಬಹಳಷ್ಟು ಪಂಚಾಯಿತಿಗಳು 15ನೇ ಹಣಕಾಸು ಅನುದಾನವನ್ನೇ ನೆಚ್ಚಿಕೊಂಡಿವೆ. ಪಂಚಾಯಿತಿ ನಿರ್ವಹಣೆ, ಮೂಲ ಸೌಕರ್ಯಗಳಿಗೆ ತೆರಿಗೆಯೇ ಪ್ರಮುಖ ಆದಾಯವಾಗಿದೆ. 2023-24ನೇ ಸಾಲಿಗೆ ಸಂಬಂಧಿಸಿದಂತೆ ಬಿಡುಗಡೆ ಆಗಬೇಕಿರುವ ಅನುದಾನದಲ್ಲಿ ಎರಡು ಕಂತು (ನಿರ್ಬಂಧಿತ ಮತ್ತು ಅನಿರ್ಬಂಧಿತ) ಬಿಡುಗಡೆಯಾಗಿದ್ದು, ಇನ್ನೆರೆಡು ಕಂತುಗಳಲ್ಲಿ ಅನುದಾನ ಬಿಡುಗಡೆ ಆಗಬೇಕಿದೆ.
    ಕರ ವಸೂಲಿಯಲ್ಲಿ ಬಹಳಷ್ಟು ಜಿಲ್ಲೆಗಳಲ್ಲಿ ಹಿನ್ನಡೆ ಆಗಿದೆ. ರಾಜ್ಯದ ಪಂಚಾಯಿತಿಗಳ ಒಪನಿಂಗ್ ಬ್ಯಾಲೆನ್ಸ್, 2117.4 ಕೋಟಿ ರೂ ಹಾಗೂ ಕರೆಂಟ್ ಡಿಮ್ಯಾಂಡ್ 1451.04 ಕೋಟಿ ರೂ. ಸೇರಿ ವಸೂಲಾಗ ಬೇಕಿರುವ ಮೊತ್ತ 3568.78 ಕೋಟಿ ರೂ. ಇದೆ. ಆದರೆ, ಇದರಲ್ಲಿ ಕರೆಂಟ್ ಡಿಮ್ಯಾಂಡ್‌ಗೆ ಸಂಬಂಧಿಸಿದಂತೆ 714.7 ಕೋಟಿ ರೂ. ವಸೂಲಾಗಿದ್ದು, ಬಾಕಿ 2854.08 ರೂ. (ಶೇ.49) ಇದೆ.
    ವಸೂಲಿ, ಬಾಕಿ, ಸಾಧನೆ (ಕೋಟಿ ರೂ.ಗಳಲ್ಲಿ): ಯಾದಗಿರಿ ಜಿಲ್ಲೆಯಲಿರುವ 122 ಗ್ರಾಪಂಗಳ ಒಪನಿಂಗ್ ಬ್ಯಾಲೆನ್ಸ್ 39.85 ಕೋಟಿ ರೂ. ಹಾಗೂ ಕರೆಂಟ್ ಡಿಮ್ಯಾಂಡ್ 13.42 ಕೋಟಿ ರೂ. ಸೇರಿ ಒಟ್ಟು 53.27 ಕೋಟಿ ರೂ. ಸಂಗ್ರಹ ಗುರಿ ಪೈಕಿ, 3.11 ಕೋಟಿ ರೂ. ಕಂದಾಯ ವಸೂಲಾಗಿದ್ದು, 50.16 ಕೋಟಿ ರೂ. ಬಾಕಿ ಇದೆ. ಕರೆಂಟ್ ಡಿಮ್ಯಾಂಡ್‌ಗೆ ಸಂಬಂಧಿಸಿದಂತೆ ಆಗಿರುವ ವಸೂಲಿಯ ಸಾಧನೆ ಶೇ.23.
    ಬೆಳಗಾವಿ-500-165.33-111.76-279.09-26.5-252.59.-ಶೇ.23. ಧಾರವಾಡ-145-31.71-25.75-57.46-6.4-51.06-ಶೇ.25. ವಿಜಯನಗರ-137-37.04-16.37-53.41-4.3-49.1-ಶೇ.26. ವಿಜಯಪುರ-211-79.91-45.7-125.6-12.18-113.43.ಶೇ.27. ಹಾವೇರಿ 223-77.55-44.55.122.11-12.73.109.38-ಶೇ.29. ಗದಗ-122-35.97-17.42.-53.39-5.21.-48.19-ಶೇ.30.
    ಬಾಗಲಕೋಟೆ-195-49.49-33.06-82.55-9.98-72-57-ಶೇ.30. ಚಿತ್ರದುರ್ಗ-189-79.64-39.8-119.44-13.07-106.36.-ಶೇ.33. ಬೀದರ್-185-63.49-26.3-89.79-8.8-80.98, ಶೇ.33. ತುಮಕೂರು-330-107.64-74.-29-181.93-26.26-155.68-ಶೇ.35. ಮಂಡ್ಯ-233-104.42-59.5-163.92-21.75-142.17-ಶೇ.37. ಕಲಬುರಗಿ-261-97.54-29.74-127.28-10.9-116.38-ಶೇ.37.
    ಚಿಕ್ಕಬಳ್ಳಾಪುರ-157-50.54-31.17-81.7-11.74-69.96-ಶೇ.38. ಚಾಮರಾಜನಗರ-130-37.02-17.39-54.42-6.63-47.79-ಶೇ.38. ಕೊಪ್ಪಳ-153-31.37-21.45-52.83-8.54-44.29.ಶೇ.40. ದಾವಣಗೆರೆ-194-40.99-26.11-67.1-10.57-56.53-ಶೇ.40. ಹಾಸನ-264-67.14-51.84-118.97-21.84-97.14-ಶೇ.42.
    ಮೈಸೂರು-256-109.6-71.66-181.26-13.43-150.83-ಶೇ.42. ಕೋಲಾರ-154-62.13-45.02-107.16-20.12-87.04-ಶೇ.45. ಶಿವಮೊಗ್ಗ-262-20.41-27.28-47.7-12.63-35.06-ಶೇ.46-ಚಿಕ್ಕಮಗಳೂರು-226-365-34.01-67.66-15.94-51.97.ಶೇ.47.
    ರಾಯಚೂರು-179-22.69-14.62.37.32-8.97-28.35-ಶೇ.61. ಉಡುಪಿ-155-9.49-32.49-41.97-20.48-21.49-ಶೇ.63. ಬೆಂಗಳೂರು ಗ್ರಾಮಾಂತರ-101-146.62-116.81-26.44-80.89-182.55-ಶೇ.69. ಬೆಂಗಳೂರು-84-409-47-294.22-703.68-207.98-495.7-ಶೇ.71
    ಬಳ್ಳಾರಿ-100-12.99-10-22.98-7.16-15.82-ಶೇ.72. ಕೊಡಗು-103-11.7-13.3-25-9.53-15.47-ಶೇ.72. ದಕ್ಷಿಣಕನ್ನಡ-223-13.54-37.51-51.05-27.32-23.73-ಶೇ.73.ಉತ್ತರಕನ್ನಡ-229-4.49-15.46-19.95-12.14-7.81-ಶೇ.79 ಹಾಗೂ ರಾಮನಗರ ಜಿಲ್ಲೆಯ 126 ಗ್ರಾಪಂಗಳ ಓಪನಿಂಗ್‌ಬ್ಯಾಲೆನ್ಸ್-64.35 ಕೋಟಿ ರೂ., ಕರೆಂಟ್ ಡಿಮಾಂಡ್-51.02 ಕೋಟಿ ರೂ. ಸೇರಿ ಒಟ್ಟು 115.37 ಕೋಟಿ ರೂ. ಸಂಗ್ರಹ ಗುರಿ ಪೈಕಿ 40.59 ಕೋಟಿ ರೂ. ವಸೂಲಾಗಿದ್ದು, 74.78 ಕೋಟಿ ರೂ.ಬಾಕಿದ್ದು, ಕರೆಂಟ್ ಡಿಮ್ಯಾಂಡ್‌ಗೆ ಸಂಬಂಧಿಸಿದಂತೆ ವಸೂಲಿಯಲ್ಲಿ ಶೇ.80 ಸಾಧನೆಯಾಗಿದೆ.

    *ಹೆಚ್ಚಿನ ಮತ್ತು ಕಡಿಮೆ ಪ್ರಗತಿ ಸಾಧಿಸಿದ ಜಿಲ್ಲೆಗಳು
    ಕರ ವಸೂಲಿಯಲ್ಲಿ ರಾಮಗರ (ಶೇ.80), ಉತ್ತರ ಕನ್ನಡ (ಶೇ.79), ದಕ್ಷಿಣಕನ್ನಡ (ಶೇ.73), ಕೊಡಗು (ಶೇ.72), ಬಳ್ಳಾರಿ(ಶೇ.72) ಜಿಲ್ಲೆಗಳು ಹೆಚ್ಚಿನ ಪ್ರಗತಿ ಸಾಧಿಸಿದ್ದರೆ, ವಿಜಯಪುರ (ಶೇ.27), ವಿಜಯನಗರ (ಶೇ.26), ಧಾರವಾಡ (ಶೇ.25), ಬೆಳಗಾವಿ(ಶೇ.23), ಯಾದಗಿರಿ (ಶೇ.23).

    *ಕೋಟ್
    ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.19 ಪ್ರಗತಿಯಲ್ಲಿದ್ದ ವಸೂಲಿ ಪ್ರಮಾಣವನ್ನು ಶೇ.33ಕ್ಕೆ ಏರಿಸಲಾಗಿದೆ. ಕರ ವಸೂಲಿಗೆ ವಿಶೇಷ ಗಮನ ಹರಿಸುವಂತೆ ಪಿಡಿಒಗಳಿಗೆ ನಿರ್ದೇಶಿಸಲಾಗಿದೆ.
    ಎಸ್.ಜೆ.ಸೋಮಶೇಖರ್, ಸಿಇಒ, ಜಿಪಂ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts