More

    ಜನರ ಸಮಸ್ಯೆ ಪರಿಹರಿಸುವ ಭರವಸೆ

    ಹಳಿಯಾಳ: ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಸಂಚಾರ ನಡೆಸಿದ ಶಾಸಕ ಆರ್.ವಿ. ದೇಶಪಾಂಡೆ ಜನರ ಅಹವಾಲುಗಳನ್ನು ಆಲಿಸಿದರು.

    ಬೀದಿ ಬದಿಯ ಹಣ್ಣು ಹೂವು ಮಾರಾಟ ಮಾರಾಟಗಾರರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ವ್ಯಾಪಾರ ವಹಿವಾಟಿನ ಸ್ಥಿತಗತಿ ಮಾಹಿತಿ ಪಡೆದರು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು, ಸ್ಯಾನಿಟೈಸರ್ ಬಳಸಿ, ಅಂಗಡಿ ಸುತ್ತಮುತ್ತ ಶುಚಿತ್ವ ಕಾಪಾಡಿ ಎಂದರು. ಆರೋಗ್ಯ, ಉದ್ಯೋಗ, ಮನೆ ಬಾಡಿಗೆ, ಔಷಧ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

    ಪುರಸಭೆ ಸದಸ್ಯ ಅಜರ ಬಸರಿಕಟ್ಟಿ, ಫಯಾಜ್ ಶೇಖ್, ನವೀನ ಕಾಟ್ಕರ್, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಉಪಾಧ್ಯಕ್ಷ ಸತ್ಯಜಿತ ಗಿರಿ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಪುರಸಭಾ ಮುಖ್ಯಾಧಿಕಾರಿ ಕೇಶವ ಚೌಗಲೆ, ಪರಿಸರ ಇಂಜಿನಿಯರ್ ಹರ್ಷಿತಾ ಉಪಸ್ಥಿತರಿದ್ದರು.

    ಮುರ್ಕವಾಡ ಗ್ರಾಮಸ್ಥರ ಭೇಟಿ: ಶನಿವಾರ ಸಂಜೆ ಮುರ್ಕವಾಡ ಜಿ.ಪಂ ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ಆರ್.ವಿ.ದೇಶಪಾಂಡೆ ಗ್ರಾಮಸ್ಥರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದರು. ಕಳೆದ ವಾರ ಬಿದ್ದ ಮಳೆಯಿಂದ ಬೆಳೆ ಹಾನಿಯಾದ ರೈತರಿಗೆ ನೆರವಿನ ಭರವಸೆ ನೀಡಿದರು. ಅಲ್ಲದೆ, ಮಾವು, ಗೇರು, ತರಕಾರಿ, ಹೂವು ಮೊದಲಾದ ಬೆಳೆಗಳು ನಷ್ಟವನ್ನುಭವಿಸಿದವರು ತಾಲೂಕು ಆಡಳಿತಕ್ಕೆ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ಕಾಂಗ್ರೆಸ್ ಮುಖಂಡ ಸಂಜು ಮಿಶಾಳೆ, ಇಮ್ತಿಯಾಜ್ ಮನಿಯಾರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರವೀಣಕುಮಾರ ಸಾಲಿ, ನರೇಗಾ ಮೇಲ್ವಿಚಾರಣಾಧಿಕಾರಿ ಪರಶುರಾಮ ಗಸ್ತಿ ಮೊದಲಾದವರು ಉಪಸ್ಥಿತರಿದ್ದರು.

    ಮುಖ್ಯಮಂತ್ರಿಗಳಿಗೆ ಪತ್ರ: ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ವಾರ ಬಿದ್ದ ಆಕಾಲಿಕ ಮಳೆಗೆ ಹಾನಿಯನ್ನು ಅನುಭವಿಸಿದ ಮಾವು, ಗೇರು, ತರಕಾರಿ ಬೆಳೆಗಾರರಿಗೆ ಪರಿಹಾರವನ್ನು ನೀಡಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಪ್ರಸಕ್ತ ವರ್ಷ ಮಾವಿನ ಫಸಲು ಇಳುವರಿಯಲ್ಲಿ ಕುಂಠಿತವಾಗಿದ್ದು, ಮಾವಿನ ದರದಲ್ಲಿಯೂ ಬಾರಿ ಕುಸಿತ ಕಂಡು ಬಂದಿದೆ. ಅದಲ್ಲದೆ, ಬಿರುಗಾಳಿ ಮಳೆಗೆ ಮಾವು ನೆಲಕ್ಕುರಳಿ ಬಿದ್ದಿದ್ದರಿಂದ ರೈತರಿಗೆ ಅಪಾರ ನಷ್ಟವಾಗಿದೆ. ಸರ್ಕಾರ ಮಾವು ಬೆಳೆಗಾರರ ಕಷ್ಟಕರ ಪರಿಸ್ಥಿತಿಯನ್ನು ಮನಗಂಡು, ವಿಶೇಷ ಆರ್ಥಿಕ ಪ್ಯಾಕೇಜ್ ಘೊಷಿಸಿ ಸೂಕ್ತ ಪರಿಹಾರವನನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts