More

    ಜನರಿಕ್ ಔಷಧ ತಯಾರಿಕೆಗೆ ಆಗ್ರಹ

    ಕಲಬುರಗಿ: ಕರೊನಾ ವೈರಸ್ಗೆ ಚಿಕಿತ್ಸೆ ನೀಡಲು ಪೂರಕವಾಗಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ (ರೆಮ್ಮ ಡಿಸಿವರ್)ವನ್ನು ಜನರಿಕ್ ಔಷಧಿಯಾಗಿ ದೇಶದಲ್ಲಿಯೇ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾಕ್ಸ್​ರ್) ಪಕ್ಷದ ಮುಖಂಡರು ಮಂಗಳವಾರ ಪ್ರತಿಭಟನೆ ಮಾಡಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಜನರಿಗೆ ಕಡಿಮೆ ಬೆಲೆಯಲ್ಲಿ ಸಿಗುವಂತೆ ಜನರಿಕ್ ಔಷಧಿಯಾಗಿ ಭಾರತದಲ್ಲಿಯೇ ತಯಾರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ವಿದೇಶಿ ಔಷಧ ತಯಾರಿಕಾ ಕಂಪನಿಗಳು ಹಣ ಕೊಳ್ಳೆ ಹೊಡೆಯುವ ಉದ್ದೇಶದಿಂದಲೇ ಕೃತಕ ಅಭಾವ ಸೃಷ್ಟಿಸಿ ಸುಲಿಗೆ ಮಾಡುವ ತಂತ್ರವನ್ನು ಮಾಡುತ್ತಿವೆ. ಇದರಿಂದ ದೇಶವಾಸಿಗಳು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ, ಹೀಗಾಗಿ ಕೇಂದ್ರ ಸಕರ್ಾರ ಉತ್ಪಾದನೆಗೆ ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ಗಿಲಿಯಡ್ ಎಂಬ ಕಂಪನಿ ಪೇಟೆಂಟ್ ಹೊಂದಿದ್ದು, ಐದು ದಿನದ ಔಷಧಿಗೆ ಅಮೆರಿಕದಲ್ಲಿ 2.25 ಲಕ್ಷ ರೂ. ನಿಗದಿಪಡಿಸಲಾಗಿದೆ. ಅದನ್ನು ಭಾರತದಲ್ಲಿ ಐದು ಕಂಪನಿಗಳು ಉತ್ಪಾದಿಸಲು ಮುಂದಾಗಿವೆ. ಹೀಗಾಗಿ ಖಾಸಗಿಯವರಿಗೆ ಅನುಮತಿ ನೀಡುವ ಬದಲಿಗೆ, ಸಕರ್ಾರದ ಕಂಪನಿಗಳಲ್ಲಿಯೇ ಉತ್ಪಾದನೆ ಮಾಡಬೇಕು, ಅಗ ಕೇವಲ 100 ರೂ.ಗಳಿಗೆ ಜನರಿಗೆ ಸಿಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಎಂ.ಬಿ.ಸಜ್ಜನ್, ಗಂಗಮ್ಮ ಬಿರಾದಾರ, ಮೇಘರಾಜ ಕಠಾರೆ, ನಾಗಯ್ಯ ಸ್ವಾಮಿ, ಆನಂದ ಎನ್.ಜೆ, ಹಲವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts