More

    ಜನಮನ ಸೆಳೆದ ಮುಧೋಳ ಹಲಗೆ ಹಬ್ಬ

    ಮುಧೋಳ: ಅಳಿಸಿ ಹೋಗುವ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮುಧೋಳದ ಹಿಂಜಾವೇ ಯುವಕರ ಕಾರ್ಯ ಶ್ಲಾಘನೀಯ ಎಂದು ಯೂಟ್ಯೂಬ್ ಸ್ಟಾರ್ ಮಲ್ಲು ಬಾಗಲಕೋಟೆ ಹೇಳಿದರು.

    ನಗರದ ಹಿಂದು ಜಾಗರಣಾ ವೇದಿಕೆ ಭಾನುವಾರ ಹಮ್ಮಿಕೊಂಡ ಮುಧೋಳ ಹಲಗೆ ಹಬ್ಬ-2024ಕ್ಕೆ ಜಡಗಣ್ಣ ಬಾಲಣ್ಣ ವೃತ್ತದಲ್ಲಿ ಹಲಗೆ ಬಾರಿಸಿ ಚಾಲನೆ ನೀಡಿ ಅವರು ಮಾತನಾಡಿದರು.

    ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುವ ಜತೆಗೆ ನಮ್ಮ ಮೂಲ ಸಂಸ್ಕೃತಿ, ಸಂಪ್ರದಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಮ್ಮ ಎಲ್ಲ ಹಬ್ಬಗಳನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಹೋಳಿ ಹಬ್ಬದಲ್ಲಿ ಕೇವಲ ಹಲಗೆ ಮಾತ್ರವಲ್ಲ, ನಮ್ಮ ಗ್ರಾಮೀಣ ಪ್ರದೇಶದ ನಾಡಿಮಿಡಿತಗಳಾದ ಕರಡಿ ಮೇಳ, ಡೊಳ್ಳು ಕುಣಿತ, ಗೊಂದಲಿಗರ ಮೇಳ, ಜಗ್ಗಲಿಕೆ ಮೇಳಗಳು ರಾರಾಜಿಸಿರುವುದು ಸಂತಸದ ವಿಷಯ. ಈ ಹಬ್ಬದಲ್ಲಿ ಭಾಗಿಯಾಗಿರುವುದು ನನ್ನ ಹಳೆಯ ನೆನೆಪನ್ನು ಮರುಕಳಿಸಿದಂತಾಗಿದೆ ಎಂದು ಹೇಳಿದರು.

    ಜಡಗಣ್ಣ ಬಾಲಣ್ಣ ವೃತ್ತದಿಂದ ಆರಂಭವಾದ ಹಲಗೆ ಮೇಳ ಗಾಂಧಿ ಸರ್ಕಲ್, ತಂಬಾಕ ಚೌಕ, ಮಹಾತ್ಮ ಗಾಂಧಿ ಸರ್ಕಲ್ ಮಾರ್ಗದಲ್ಲಿ ಸಂಚರಿಸಿ ಶಿವಾಜಿ ಸರ್ಕಲ್ ತಲುಪಿತು. ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿರುವ ಈ ಹಲಗೆ ಹಬ್ಬದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಯುವಕರು, ಮಕ್ಕಳು ಪಾಲ್ಗೊಂಡಿದ್ದರು. ಹಿಂಜಾವೇ ತಾಲೂಕು ಅಧ್ಯಕ್ಷ ಸಂಕೇತ ಜಾಮಗೌಡ ಅಧ್ಯಕ್ಷತೆ ವಹಿಸಿದ್ದರು. ಕಿರು ಚಿತ್ರನಟಿ ಬೆಳಗಾವಿಯ ಪ್ರಿಯಾ ಸವಡಿ, ರೈತ ಮುಖಂಡ ದುಂಡಪ್ಪ ಯರಗಟ್ಟಿ, ಕಲ್ಮೇಶ ಹಣಗೂಜಿ, ನಾರಾಯಣ ಯಡಹಳ್ಳಿ, ಶಂಕರಗೌಡ ಪಾಟೀಲ ಹಲಗೆ ಬಾರಿಸಿ ಚಾಲನೆ ನೀಡಿದರು.

    ಸಂಗಣ್ಣ ಕಾತರಕಿ, ಸಂಗಪ್ಪ ತೋರಗಲ್ಲ, ಅನಿಲ ತೇಲಿ, ಅನಿಲ ಕುಮಕಾಲೆ, ಆನಂದ ಲೋಣಾರಿ ಗುರುಪಾದ ಕುಳಲಿ, ಬಸವರಾಜ ಮಹಾಲಿಂಗೇಶ್ವರಮಠ, ದತ್ತಾ ಮಾನೆ, ಆನಂದ ಗಣಾಚಾರಿ, ಸತೀಶ ಘೋರ್ಪಡೆ, ಶಂಕರ ಕಮತಗಿ, ಆಕಾಶ ಮೇತ್ರಿ, ಸೂರಜಸಿಂಗ್ ರಜಪೂತ, ಸಿದ್ದು ಕುಮಕಾಲೆ, ಮಲ್ಲು ಗುಡ್ಲಾರ್, ಪುಂಡಲೀಕ ಮೋಹತೆ, ಶಿವರಾಜ ನ್ಯಾಮಣ್ಣವರ ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts