More

    ಜನತೆಗೆ ದಿನಕ್ಕೊಂದು ಆದೇಶದ ಕಿರಿಕಿರಿ

    ವಿಜಯವಾಣಿ ವಿಶೇಷ ಕಲಬುರಗಿ: ಕರೊನಾ ರಣಕೇಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ದಿನಕ್ಕೊಂದು ಕೈಗೊಳ್ಳುವ ನಿರ್ಧಾರ ಜನ ಮತ್ತು ವ್ಯಾಪಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲಾಕ್ಡೌನ್ನಲ್ಲಿ ಸಡಿಲಿಕೆ ನೀಡಿ ಕೆಲ ಅಂಗಡಿಗಳ ವಹಿವಾಟಿಗೆ ಹೊರಡಿಸಿದ್ದ ಆದೇಶ 24 ತಾಸಿನಲ್ಲೇ ಹಿಂಪಡೆಯುವ ಮೂಲಕ ವ್ಯಾಪಾರಿಗಳಿಗೆ ರಾತ್ರೋರಾತ್ರಿ ಲಕ್ಷಾಂತರ ರೂ. ನಷ್ಟ ತಂದೊಡ್ಡಿದೆ.
    ಯಾರದ್ದೇ ಅಭಿಪ್ರಾಯ ಪಡೆಯದೆ ಜಿಲ್ಲಾಡಳಿತ ಮನಬಂದಂತೆ ನಿರ್ಧಾರ ಕೈಗೊಳ್ಳುತ್ತಿರುವುದು ಜಿಲ್ಲೆ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕರೊನಾ ಹರಡಿದ ನಂತರ ಕೆಲದಿನ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಡೆ ಕೆಲವು ಅಂಗಡಿಗಳನ್ನು ತೆರೆಯಲು ಮಂಗಳವಾರ ಅವಕಾಶ ನೀಡಿದ್ದವು. ಪರಿಸ್ಥಿತಿ ನೋಡಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದವು. ಆದರೆ ಹಿಂದೆ ಮುಂದೆ ಯೋಚಿಸದೆ ಜಿಲ್ಲಾಡಳಿತ ದಿನಕ್ಕೊಂದು ಆದೇಶ ಹೊರಡಿಸಿ ಜನರನ್ನು ಇಕ್ಕಿಟ್ಟಿಗೆ ಸಿಲುಕಿಸುತ್ತಿದೆ.
    ಬುಧವಾರ ಸಂಜೆ ಆದೇಶವೊಂದನ್ನು ಹೊರಡಿಸಿದ ಜಿಲ್ಲಾಧಿಕಾರಿ, ಕಲಬುರಗಿ ನಗರ ಸೇರಿ ಜಿಲ್ಲಾದ್ಯಂತ ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಡೆ ಬಟ್ಟೆ, ಭಾಂಡೆ ಮೊದಲಾದ ವಾಣಿಜ್ಯ ವಹಿವಾಟಿಗೆ ಸಡಿಲಿಕೆ ನೀಡಿತು. ಈ ಆದೇಶ ಗುರುವಾರದಿಂದ ಜಾರಿಗೂ ಬಂದಿತು.
    ಗುರುವಾರ ಬಟ್ಟೆ, ಭಾಂಡೆ, ಚಿನ್ನ, ಮೊಬೈಲ್, ರಿಸಚಾರ್ಜ ಸೆಂಟರ್, ಬೇಕರಿ, ಇಲೆಕ್ಟ್ರಾನಿಕ್, ಹೋಮ್ ಅಪ್ಲಾಯನ್ಸಸ್, ಬುಕ್ ಸ್ಟಾಲ್, ಸ್ಟೇಷನರಿ, ಹಾರ್ಡ್​ವೆರ್​, ಪೇಂಟ್, ಆಟೋಮೊಬೈಲ್ ಹಾಗೂ ಕಂಪ್ಯೂಟರ್ (ಸಾಫ್ಟ್ವೇರ್ ಮತ್ತು ಹಾರ್ಡ್​ವೆರ್) ಅಂಗಡಿಗಳನ್ನು ತೆರೆಯಲಾಯಿತು. ಜತೆಗೆ ಎಲ್ಲ ತರಹದ ಹೋಟೆಲ್ನವರು ಪರಸ್ಪರ ಅಂತರ ಕಾಯ್ದುಕೊಂಡು ಪಾರ್ಸಲ್ಗೆ ಅವಕಾಶ ಕಲ್ಪಿಸಿದರು. ವ್ಯವಹಾರ ವೇಳೆ ಪರಸ್ಪರ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಹ್ಯಾಂಡ್ವಾಶ್, ಸ್ಯಾನಿಟೈಸರ್ ಬಳಕೆ ಜತೆಗೆ ಮಾಸ್ಕ್ ಹಾಕಿಕೊಳ್ಳಲೇಬೇಕು ಎಂದು ಸೂಚಿಸಲಾಯಿತು.
    ಗುರುವಾರ ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಎಲ್ಲೆಡೆ ವ್ಯಾಪಾರಕ್ಕಾಗಿ ಜನ ಮನೆಗಳಿಂದ ಹೊರಬಂದು ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿದರು. ಹೀಗಾಗಿ ಜನರ ಗುಂಪು ಕಂಡಿತು. ಇದೆಲ್ಲ ಗಮನಿಸಿದ ಜಿಲ್ಲಾಡಳಿತ ಗುರುವಾರ ರಾತ್ರಿಯೇ ಮತ್ತೊಂದು ಆದೇಶ ಹೊರಡಿಸಿ ಬುಧವಾರದ ಆದೇಶ ವಾಪಸ್ ಪಡೆಯಲಾಗಿದ್ದು, ಶುಕ್ರವಾರ ಈ ಯಾವುದೇ ವ್ಯವಹಾರ ನಡೆಯುವುದಿಲ್ಲ ಎಂದು ಹೇಳಿತು.
    ಹೊಸ ಆದೇಶ ಹೊರಡಿಸುವ ಮುನ್ನ ಜಿಲ್ಲಾಡಳಿತ ಸಾಧಕ-ಬಾಧಕ ಅರಿತುಕೊಳ್ಳಬೇಕಾಗಿತ್ತು. ಎರಡು ತಿಂಗಳಿಂದ ತಮ್ಮ ಅಂಗಡಿ-ಮುಂಗಟ್ಟು ಬಂದ್ ಮಾಡಿರುವ ವ್ಯಾಪಾರಿಗಳು ವ್ಯವಹಾರ ಆರಂಭಿಸಿಲು ಸಜ್ಜಾಗಿದ್ದರು. ಆದರೆ ಗುರುವಾರದ ಆಟ ಶುಕ್ರವಾರ ನಡೆಯಲಿಲ್ಲ.
    ಮದ್ಯದ ಅಂಗಡಿಗಳ ಮುಂದೆ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥಿತವಾಗಿ ಜನರಿಗೆ, ಮದ್ಯದಂಗಡಿ ಮಾಲೀಕರಿಗೆ ರಕ್ಷಣೆ ಕೊಡುವ ಪೊಲೀಸ್ ಇಲಾಖೆಯವರು ಬೇರೆ ಬೇರೆ ಅಂಗಡಿಗಳಲ್ಲಿಯೂ ದೈಹಿಕ ಅಂತರದ ವ್ಯವಸ್ಥೆ ಮಾಡಲು ಮುಂದಾಗಲಿಲ್ಲ.ಇನ್ನು ಜಿಲ್ಲಾಧಿಕಾರಿ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಜನಪ್ರತಿನಿಧಿಗಳ ಜತೆ ಚಚರ್ಿಸುವ ಗೋಜಿಗೂ ಹೋಗಿಲ್ಲವೆನ್ನಲಾಗಿದೆ. ಇನ್ಮುಂದಾದರೂ ಯಾವುದೇ ಆದೇಶ ಹೊರಡಿಸುವ ಮುನ್ನ ಸಾಧಕ-ಬಾಧಕ ಅರಿತುಕೊಳ್ಳುವುದು ಒಳ್ಳೆಯದು.

    ನೋಡಿ ಇವರ ಸ್ಟೈಲ್
    ಮೋಟಾರ್ ಬೈಕ್ಗಳಲ್ಲಿ ಒಬ್ಬರೇ ಓಡಾಡಬಹುದು ಎಂದು ಸಕರ್ಾರ ಆದೇಶ ನೀಡಿದೆ. ಆದರೆ ಕಲಬುರಗಿಯಲ್ಲಿ ಮಧ್ಯಾಹ್ನ ಬೈಕ್ನಲ್ಲಿ ಹೊರಟಿದ್ದ ಒಬ್ಬರಿಗೂ ಈ ಪೊಲೀಸ್ ಅಧಿಕಾರಿ ಲಾಠಿ ರುಚಿ ಉಣಿಸಿಯೇ ಬಿಟ್ಟರು. ಎಲ್ಲಿಗೆ ಹೊರಟಿದ್ದೀರಿ? ಏಕೆ ಹೊರಟಿದ್ದೀರಿ ಎಂಬೆಲ್ಲ ಪ್ರಶ್ನೆಗಳನ್ನು ಕೇಳಲಿಲ್ಲ. ಮೊದಲು ಹೊಡೆಯುವುದು, ನಂತರ ಎನ್ಕ್ವೈರಿ. ಪಾಪ ಬೈಕ್ ಸವಾರ ಏಟು ತಿನ್ನುವುದು ಅನಿವಾರ್ಯ ಆಯಿತು. ಹಿರಿಯ ಅಧಿಕಾರಿಗಳು ಈ ಬಗ್ಗೆ ಕಿರಿಯ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡುವುದು ಸೂಕ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts