More

    ಚಿಂಚೋಳಿಗೂ ಕಾಲಿಟ್ಟ ಲಿಂಪಿಸ್ಕಿನ್

    ವಿಜಯವಾಣಿ ವಿಶೇಷ ಚಿಂಚೋಳಿ: ಕರೊನಾ ಮಹಾಮಾರಿಯಿಂದ ಇಡೀ ದೇಶದ ಜನತೆ ಸಂಕಷ್ಟ ಅನುಭವಿಸುತ್ತಿದ್ದು, ಇದೀಗ ಜಾನುವಾರುಗಳಲ್ಲಿ ಚರ್ಮರೋಗ (ಲಿಂಪಿಸ್ಕಿನ್) ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೆ ದೂಡಿದೆ.
    ಸುಂಠಾಣ, ಸುಂಠಾಣ ದೊಡ್ಡ ತಾಂಡಾ, ಶೇರಿ, ಶೇರಿ ದೊಡ್ಡ ತಾಂಡಾ, ಅಲ್ಲಾಪುರ್, ಕೋಡ್ಲಿ, ನಾವದಗಿ, ಚಿಂತಕುಂಟಾ, ಗಂಜಗೇರಾ, ತಾಡಪಳ್ಳಿ, ಕೊಳ್ಳೂರ್, ನಾಗಇದಲಾಯಿ, ಚಿಮ್ಮನಚೋಡ, ಸುಲೇಪೇಟ್, ಚಿಂಚೋಳಿ, ಚಂದಾಪುರ, ಪಸ್ತಾಪುರ, ನಿಡಗುಂದಾ ಸೇರಿ ಇನ್ನಿತರ ಗ್ರಾಮಗಳಲ್ಲಿ ಕಾಯಿಲೆ ಉಲ್ಬಣಿಸಿದೆ. ಈ ಹಳ್ಳಿಗಳಿಗೆ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮರ್ಪಕ ಚಿಕಿತ್ಸೆ ನೀಡುತ್ತಿದ್ದಾರೆ.
    ತಾಲೂಕಿನಲ್ಲಿ ಇಲ್ಲಿವರೆಗೆ 1200ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಮುಂಗಾರು ಅಂತ್ಯದೊಳಗೆ ರೋಗ ಲಕ್ಷಣಗಳು ಕಡಿಮೆಯಾಗುವ ಸಾಧ್ಯತೆ ಇದೆ. ಸೋಂಕಿತ ಹಸುಗಳನ್ನು ರೈತರು ಪ್ರತ್ಯೇಕವಾಗಿರಬೇಕು. ಮೊದಲೇ ವೈರಸ್ ಪತ್ತೆ ಹಚ್ಚಿದರೆ ಎಲ್ಲೆಡೆ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ಪಶು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಕರೊನಾ ಸೋಂಕಿನಿಂದಲೇ ಹಸುಗಳು ಕಡಿಮೆ ಹಾಲು ಕೊಡುತ್ತಿದ್ದವು, ಇದೀಗ ಲಿಂಪಿಸ್ಕಿನ್ ಕಾಯಿಲೆಯಿಂದ ಹೈನೋದ್ಯಮ ಸಂಪೂರ್ಣ ಸ್ತಬ್ಧವಾಗಿದೆ. ಕಾಯಿಲೆಯಿಂದ ಬಳಲುವ ಹಸುಗಳು ಕಮ್ಮಿ ಹಾಲು ನೀಡುತ್ತಿವೆ. ಇನ್ನು ಎತ್ತುಗಳು ಉಳಿಮೆಯಲ್ಲಿ ತೊಡಗಲು ಆಗದಷ್ಟು ನಿಶಕ್ತಿ ಹೊಂದಿವೆ. ಈ ಕಾಯಿಲೆಯಿಂದ ಮಾನವನಿಗೆ ಯಾವುದೇ ತೊಂದರೆಯಿಲ್ಲ ಎಂಬುದು ಸಮಾಧಾನಕರ ಸಂಗತಿ ಎನ್ನಬಹುದು.

    ತಕ್ಷಣ ವೈದ್ಯರನ್ನು ಸಂಪರ್ಕಿಸಿ
    ಲಿಂಪಿಸ್ಕಿನ್ ವೈರಸ್ನಿಂದ ಹರಡುವ ಕಾಯಿಲೆಯಾಗಿದ್ದು, ಇದಕ್ಕೆ ಸದ್ಯ ಯಾವುದೇ ಔಷಧಿ ಸಿಕ್ಕಿಲ್ಲ. ಇದು ಮಾರಣಾಂತಿಕವಲ್ಲ ದಿದ್ದರೂ, ಚಿಕಿತ್ಸೆ ಸಿಗದಿದ್ದರೆ ಅಪಾಯದ ಹಂತ ತಲುಪಲಿದೆ. ಕೀಟಗಳಿಂದ ಸೋಂಕು ಹರಡುತ್ತದೆ. ರಾಸುಗಳ ಚರ್ಮದ ಮೇಲೆ ದೊಡ್ಡ ಗಾತ್ರದ ಗುಳ್ಳೆಗಳು ಕಾಣಸಿಕೊಳ್ಳಲಿದ್ದು, ತೀವ್ರ ಜ್ವರದಿಂದ ಯಾತನೆ ಅನುಭವಿಸುತ್ತದೆ. ಕೆಲವೊಮ್ಮೆ ನೋವಿನಿಂದ ರಾಸುಗಳು ಸಾಯಲುಬಹುದು. ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ಕೊಟ್ಟು ವೈದ್ಯರು ವಾಸಿ ಮಾಡುತ್ತಿದ್ದಾರೆ. ಹೀಗಾಗಿ ರೈತಾಪಿ ವರ್ಗ ತಮ್ಮ ರಾಸುಗಳಲ್ಲಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಹತ್ತಿರದ ಪಶು ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts