More

    ಚಾಮುಂಡಿದೇವಿ ಕಂಚಿನ ವಿಗ್ರಹ ಪ್ರತಿಷ್ಠಾಪನೆ

    ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ಕಡೇ ಆಷಾಢ ಶುಕ್ರವಾರದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಜರುಗಿದವು.

    ಪಟ್ಟಣದ ಗಂಗಾಧರೇಶ್ವರ, ಕೋಟೆ ಕಾಳಮ್ಮ, ಸಾರಂಗಪಾಣಿ, ಮೂಲೇ ಗಣೇಶ, ಮದ್ದೂರು ರಸ್ತೆ ಬದಿಯಲ್ಲಿರುವ ಮಹದೇಶ್ವರ, ದಂಡಿನ ಮಾರಮ್ಮ, ಪಟ್ಟಲದಮ್ಮ ಹಾಗೂ ಹೊರವಲದಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ದೇವರ ಮೂರ್ತಿಗಳಿಗೆ ವಿವಿಧ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ನವ ದಂಪತಿಗಳು ಹಾಗೂ ಪಟ್ಟಣದ ಹಾಗೂ ಅಕ್ಕಪಕ್ಕದ ಗ್ರಾಮಗಳ ಭಕ್ತರು ಆಗಮಿಸಿ ಸರದಿಯಲ್ಲಿ ಸಾಗಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

    ಪಟ್ಟಣದ ಮೈಸೂರು ಮುಖ್ಯರಸ್ತೆಯ ಶಾಂತಿ ಕಾಲೇಜು ಸಮೀಪ ಗೆಳೆಯರ ಬಳಗದ ಯುವಕರು ದ್ವಿತೀಯ ವರ್ಷದ ಚಾಮುಂಡೇಶ್ವರಿ ವಧರ್ಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಬ್ರಾಹ್ಮಣೋತ್ತಮರ ತಂಡದವರು ಚಾಮುಂಡಿದೇವಿ ಕಂಚಿನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದವರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

    ತಾಲೂಕಿನ ಮುತ್ತತ್ತಿ ಆಂಜನೇಯ, ಬಸವನ ಬೆಟ್ಟದ ಹೆಬ್ಬಟ್ಟದ ಬಸವೇಶ್ವರ, ಕಲ್ಕುಣಿ ವಿಜಯ ನಗರೇಶ್ವರಿ, ಮಹಾಶಕ್ತಿ ಮಂಚದ ಕಾಳಿಕಾಂಬ, ತೆಂಕಹಳ್ಳಿ ಸಮೀಪದ ಶನೈಶ್ಛರ, ಪೂರಿಗಾಲಿ ಪಾತಾಳೇಶ್ವರ, ಸರಗೂರು ಸಮೀಪದ ಮಹದೇಶ್ವರ, ಬೆಳಕವಾಡಿ ಕಾಶಿ ವಿಶ್ವನಾಥ, ಗೌಡಗೇರೆ ಗ್ರಾಮದಲ್ಲಿರುವ ಬಸವೇಶ್ವರ, ಮತ್ತಿತಾಳೇಶ್ವರ, ಹಿಟ್ಟನಹಳ್ಳಿ ಸಮೀಪದ ಮಾರಮ್ಮ, ಮಿಕ್ಕೆರೆ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಸಾಂಗವಾಗಿ ನೆರೆವೇರಿತು. ಭಕ್ತಗಣ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts