More

    ಜೀವರಕ್ಷಕ ಸಾಧನವಿರುವ ವಾಹನಗಳನ್ನು ಖರೀದಿಸಿ

    ಮಳವಳ್ಳಿ: ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಜೀವರಕ್ಷಕ ಸಾಧನಗಳಿಗೆ ಆದ್ಯತೆ ನೀಡಿರುವ ವಾಹನಗಳನ್ನು ಗ್ರಾಹಕರು ಖರೀದಿಸಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ರವಿಕುಮಾರ್ ಸಲಹೆ ನೀಡಿದರು.

    ಮಾಂಡೋವಿ ಮೋಟಾರ್ ಪ್ರೈವೇಟ್ ಲಿ.ವತಿಯಿಂದ ಬುಧವಾರ ಪಟ್ಟಣದಲ್ಲಿ ಆಯೋಜಿಸಿದ್ದ ಮಾರುತಿ ಸಂಸ್ಥೆ ಆವಿಷ್ಕಾರಗೊಳಿಸಿರುವ ಹೊಸ ಮಾದರಿಯ ಕಾರು ಬಿಡುಗಡೆ ಹಾಗೂ ಗ್ರಾಮೀಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಜನಸಾಮಾನ್ಯರು ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಎಲ್ಲ ಬಗೆಯ ವಸ್ತುಗಳ ತಯಾರಿಕೆಯಲ್ಲಿ ಪೈಪೋಟಿ ಹೆಚ್ಚಿದೆ. ಹಾಗಾಗಿ ಯಾವುದೇ ವಸ್ತು ಖರೀದಿಸುವ ಸಂದರ್ಭ ನಮ್ಮ ಜೀವರಕ್ಷಣೆಗೆ ಮೊದಲ ಆದ್ಯತೆ ಇರುವುದನ್ನು ಖರೀದಿ ಮಾಡಬೇಕು. ಈ ನಿಟ್ಟಿನಲ್ಲಿ ಮಾರುತಿ ಸಂಸ್ಥೆ ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗ್ರಾಹಕರ ಸ್ನೇಹಿಯಾಗಿದೆ ಎಂದರು.

    ಸವಾರರು ಚಾಲನಾ ಪರವಾನಗಿ ಜತೆಗೆ ತಮ್ಮ ವಾಹನಗಳನ್ನು ಸುಸ್ಥಿಯಲ್ಲಿಟ್ಟುಕೊಂಡು ವಿಮೆ ಹಾಗೂ ಇತರ ದಾಖಲೆಗಳನ್ನು ಕಾಲಾನುಸಾರ ಮರು ನೋಂದಣಿ ಮಾಡಿಕೊಳ್ಳಬೇಕು. ಸಾರಿಗೆ ನಿಯಮಗಳನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

    ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ವಿನಯ್, ಎಚ್‌ಡಿಎಫ್‌ಸಿ ಶಾಖೆಯ ಮ್ಯಾನೇಜರ್ ರಾಘವೇಂದ್ರ, ಶಾಂತಿ ಕಾಲೇಜು ಪ್ರಾಂಶುಪಾಲೆ ಅನಿತಾ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಲ್ಕುಣಿ ದೇವರಾಜು, ಮಾಂಡೋವಿ ಶೋ ರೂಂ ಜಿಲ್ಲಾ ವ್ಯವಸ್ಥಾಪಕ ಬಸವರಾಜು, ಮಳವಳ್ಳಿ ವಿಭಾಗದ ವ್ಯವಸ್ಥಾಪಕ ಸಿ.ಎಂ.ಆದರ್ಶ, ಮದ್ದೂರು ವಿಭಾಗದ ವ್ಯವಸ್ಥಾಪಕ ಸಂತೋಷ್, ಶಶಿಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts