More

    ಚರ್ಮಗಂಟು ರೋಗ ನಿಯಂತ್ರಣಕ್ಕೆ ಒತ್ತಾಯ

    ಬೆಳಗಾವಿ: ತಾಲೂಕಿನ ಕರಡಿಗುದ್ದಿ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣವಾಗುತ್ತಿದೆ. ಅಧಿಕಾರಿಗಳು ಸಮರೋಪಾದಿಯಲ್ಲಿ ರೋಗ ನಿಯಂತ್ರಣಕ್ಕೆ ಪ್ರಯತ್ನಿಸಬೇಕು ಎಂದು ಒತ್ತಾಯಿಸಿ ಗ್ರಾಮದ ರೈತರು ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದರು.

    ಕಳೆದ 50 ದಿನಗಳಿಂದ ನಮ್ಮ ಗ್ರಾಮದಲ್ಲಿ ಚರ್ಮಗಂಟು ರೋಗ ಹೆಚ್ಚಾಗುತ್ತಿದೆ. ಗ್ರಾಮದಲ್ಲಿರುವ 548 ಜಾನುವಾರುಗಳ ಪೈಕಿ ನ. 14ರವರೆಗೆ 214 ಜಾನುವಾರುಗಳಿಗೆ ರೋಗ ಬಂದಿದೆ. 23 ಜಾನುವಾರುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿವೆ. 8 ಜಾನುವಾರುಗಳು ರೋಗದ ತೀವ್ರತೆಯಿಂದ ಬಳಲುತ್ತಿವೆ. 45 ಜಾನುವಾರುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಹೀಗಾಗಿ ಚಿಕಿತ್ಸೆಗೆ ಪೂರಕವಾಗಿ ತುರ್ತು ಚಿಕಿತ್ಸೆಗಾಗಿ ಔಷಧ, ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ರೋಗ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಚರ್ಮಗಂಟು ರೋಗದಿಂದ ಮೃತಪಟ್ಟ ಎತ್ತುಗಳಿಗೆ 30 ಸಾವಿರ ರೂ., ಆಕಳಿಗೆ 20 ಸಾವಿರ ರೂ., ಕರುಗಳಿಗೆ 5 ಸಾವಿರ ರೂ. ಪರಿಹಾರ ಘೋಷಿಸಿದೆ. ಆದರೆ, ಈ ಮೊತ್ತ ಕಡಿಮೆಯಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಜತೆಗೆ ಘೋಷಣೆಯಾಗಿರುವ ಪರಿಹಾರದ ಮೊತ್ತವು ಸರಿಯಾದ ಸಮಯಕ್ಕೆ ರೈತರಿಗೆ ತಲುಪುತ್ತಿಲ್ಲ. ಪರಿಹಾರ ಮೊತ್ತವನ್ನು ಎತ್ತುಗಳಿಗೆ 1 ಲಕ್ಷ ರೂ., ಆಕಳುಗಳಿಗೆ 50 ಸಾವಿರ ರೂ., ಕರುಗಳಿಗೆ 25 ಸಾವಿರ ರೂ. ನೀಡಬೇಕು. ಒಂದು ವಾರದೊಳಗೆ ಚರ್ಮಗಂಟು ರೋಗವನ್ನು ಹತೋಟಿಗೆ ತರಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

    ಸಿ.ಎಸ್. ಹಿರೇಮಠ, ಬಸನಗೌಡ ಪಾಟೀಲ, ಬಸಪ್ಪ ಉರಿಬನಟ್ಟಿ, ಸಿದ್ದಪ್ಪ ಗೌಡಗೇರಿ, ಗೋಪಾಲ ಬಡಿಗೇರ, ಬಿ.ಬಿ. ನಾಯ್ಕ, ರಾಜು ಬಡಿಗೇರ, ಅಶೋಕ ಉರಿಬಿನಟ್ಟಿ, ಬಸು ಪಾಟೀಲ, ಎಲ್.ಎ. ಗಣಾಚಾರಿ, ಯಲ್ಲಪ್ಪ ಧವನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts