More

    ಗ್ರಾಮ ಪಂಚಾಯಿತಿಯಲ್ಲಿ ಪ್ರಭುತ್ವ ಸಾಧಿಸಲು ಪಕ್ಷಗಳ ಕಸರತ್ತು

    ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿದ್ದು, ಪಂಚಾಯಿತಿಯಲ್ಲಿ ಪ್ರಭುತ್ವ ಸಾಧಿಸಲು ಪಕ್ಷಗಳ ಕಸರತ್ತು ಪ್ರಾರಂಭವಾಗಿವೆ.

    ಒಂದೆಡೆ ಜಿಲ್ಲಾಡಳಿತ ಗ್ರಾಪಂ ಮತಗಟ್ಟೆ, ಮತದಾರ ಪಟ್ಟಿ ಮತ್ತು ಅಗತ್ಯ ಸಿಬ್ಬಂದಿ ನಿಯೋಜನೆ ಸೇರಿ ನಾನಾ ಸಿದ್ಧತೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ರಾಜಕೀಯ ಪಕ್ಷಗಳು ಸಂಘಟನೆ, ಪಂಚಾಯಿತಿ ವಾರು ಆಕಾಂಕ್ಷಿಗಳು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ, ಪಕ್ಷದ ಪರ ಅನುಕೂಲ, ಅನನುಕೂಲ ವಾತಾವರಣ ವಿಮರ್ಶೆ ಚಟುವಟಿಕೆ ಬಿರುಸುಗೊಂಡಿದ್ದು, ಲೋಕಲ್ ಪೈಟ್ ನಿಧಾನವಾಗಿ ಕಳೆಗಟ್ಟುತ್ತಿದೆ.

    ಜಿಲ್ಲೆಯ 157 ಗ್ರಾಪಂ ಗಳ ಪೈಕಿ 152 ಗ್ರಾಪಂಗಳಿಗೆ ಚುನಾವಣೆ ನಡೆಯುವುದು ಪಕ್ಕಾ ಆಗಿದೆ. ಇನ್ನೇನು ಚುನಾವಣಾ ವೇಳಾ ಪಟ್ಟಿ ಪ್ರಕಟವಾಗುವುದೊಂದೇ ಬಾಕಿದ್ದು, ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಯಾವುದೇ ಕ್ಷಣದಲ್ಲಾದರೂ ದಿನಾಂಕ ಘೋಷಣೆಯಾಗುಬಹುದೆಂದು ಎದುರು ನೋಡುತ್ತಿರುವ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿವೆ.

    ಸಾಮೂಹಿಕ ನಾಯಕತ್ವಕ್ಕೆ ಕೈ ಜೈ : ತಾಲೂಕಿನ ನಂದಿ ಕ್ರಾಸ್‌ನ ರೆಸಾರ್ಟ್‌ನಲ್ಲಿ ಮಂಗಳವಾರ ಕಾಂಗ್ರೆಸ್ ಮುಖಂಡರ ಸಭೆ ನಡೆದಿದೆ, ಪಂಚಾಯಿತಿ ಚುನಾವಣೆ ಚರ್ಚೆಯ ಸಂದರ್ಭದಲ್ಲಿ ನಾಯಕರು ಹಿಡಿತ ಸಾಧಿಸುವ ನಿಟ್ಟಿನಲ್ಲಿ ಅಭಿಪ್ರಾಯ ಮಂಡಿಸಿದ್ದು ಕೊನೆಗೆ ಎಂದಿನಂತೆ ಸಾಮೂಹಿಕ ನಾಯಕತ್ವದ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
    ತಾಲೂಕಿನ 23 ಗ್ರಾಪಂಗಳ ಪೈಕಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ನಿಟ್ಟಿನಲ್ಲಿ ಆಡಳಿತ ಪಕ್ಷಕ್ಕೆ ಪೈಪೋಟಿಯಾಗಿ ಆರ್ಥಿಕ, ರಾಜಕೀಯ ತಂತ್ರದೊಂದಿಗೆ ಸವಾಲು ಎದುರಿಸಬೇಕು, ಈ ವಿಚಾರದಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ಹೊರುವವರಿಗೆ ಆದಷ್ಟು ಹೆಚ್ಚಿನ ಬಿ ಫಾರಂಗಳನ್ನು ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ, ಆದರೆ ಹಿಂದಿನಿಂದಲೂ ಪಕ್ಷ ಸಂಘಟನೆಗೆ ಹಲವರು ಶ್ರಮಿಸಿಕೊಂಡು ಬಂದಿದ್ದು, ಸಾಮೂಹಿಕ ನಾಯಕತ್ವದ ಮೂಲಕ ಚುನಾವಣೆ ಎದುರಿಸಬೇಕೆಂಬ ಅಂತಿಮ ಮುದ್ರೆಯೊತ್ತಲಾಗಿದೆ ಎನ್ನಲಾಗಿದೆ.

    ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ, ಕೋಚಿಮುಲ್ ನಿರ್ದೇಶಕ ಎನ್.ಸಿ.ವೆಂಕಟೇಶ್, ಜಿ.ಪಂ.ಸದಸ್ಯ ಪಿ.ಎನ್.ಪ್ರಕಾಶ್, ಮುಖಂಡರಾದ ಯಲುವಹಳ್ಳಿ ಎನ್.ರಮೇಶ್, ವಿನಯ್ ಶ್ಯಾಮ್, ನಗರಸಭೆ ಸದಸ್ಯ ಎಸ್.ಎಂ.ರಫಿಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ರಾಮಕೃಷ್ಣಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲರೆಡ್ಡಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts