More

    ಗ್ರಾಮೀಣ ನೈರ್ಮಲ್ಯ ಕಾಪಾಡಲು ಶ್ರಮಿಸಿ

    ಯಾದಗಿರಿ: ಕಡ್ಡಾಯವಾಗಿ ಗ್ರಾಮೀಣ ಜನರಿಗೆ ಶೌಚಗೃಹ ಬಳಕೆ ಮಾಡುವಂತೆ ತಿಳಿ ಹೇಳುವುದರ ಜತೆಗೆ ಗ್ರಾಮೀಣ ನೈರ್ಮಲ್ಯ ಕಾಪಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ಆರ್. ನಾಯ್ಕ್ ಹೇಳಿದರು.

    ಇಲ್ಲಿನ ತಾಪಂ ಸಭಾಂಗಣದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿ ಗ್ರಾಮ ನೈರ್ಮಲ್ಯ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ಪಿಡಿಒ ಮತ್ತು ಡೆಟಾ ಎಂಟ್ರಿ ಆಪರೇಟರ್ಗಾಗಿ ಗುರುವಾರ ಹಮ್ಮಿಕೊಂಡ ತರಬೇತಿ ಕಾಯರ್ಾಗಾರದಲ್ಲಿ ಮಾತನಾಡಿದ ಅವರು, ಗ್ರಾಮಗಳ ನೈರ್ಮಲ್ಯಕ್ಕಾಗಿ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

    ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳನ್ನು ಈಗಾಗಲೇ ಬಯಲು ಬಹಿದರ್ೆಸೆ ಮುಕ್ತ ಎಂದು ಘೋಷಿಸಲಾಗಿದೆ. ಒಡಿಎಫ್ ಹಾಗೂ ಗ್ರಾಮೀಣ ಭಾಗದಲ್ಲಿ ಶೌಚಗೃಹ ಬಳಕೆ ಮಾಡುವ ಮೂಲಕ ಸ್ವಚ್ಛತೆ ಕಾಪಾಡುವುದು ಈಗಾಗಲೇ ಜಿಲ್ಲೆಯಲ್ಲಿ ಆರಂಭವಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಚರಂಡಿಗೆ ಹರಿಯುವ ಬಚ್ಚಲು ನೀರು, ಪಾತ್ರೆ-ಬಟ್ಟೆ ತೊಳೆದ ನೀರು ಹಾಗೂ ಶೌಚಗೃಹದ ಮಲ ಮಿಶ್ರಿತ ನೀರನ್ನು ವಿಂಗಡಿಸಿ ಮರು ಬಳಕೆಗೆ ಬರುವಂತೆ ಸಂಸ್ಕರಿಸುವುದರ ಜತೆಗೆ ಇದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು.

    ಗ್ರಾಮೀಣ ಗ್ರಂಥಾಲಯಗಳಿಗೆ ಬರುವ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಲು ಪಿಡಿಒಗಳು ಗ್ರಂಥಾಲಯಕ್ಕೆ ಖುಚರ್ಿ, ಟೇಬಲ್, ಶುದ್ಧ ಕುಡಿವ ನೀರು, ವಿದ್ಯುತ್ ಸೇರಿ ಇತರೆ ಸೌಲಭ್ಯ ಕಲ್ಪಿಸುವ ಮೂಲಕ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಬೇಕು.

    ಗ್ರಾಮಗಳಲ್ಲಿ ಕಂಡು ಬರುವ ಅಪೌಷ್ಟಿಕತೆ ನಿಮರ್ೂಲನೆಗೆ ತಮ್ಮ ವ್ಯಾಪ್ತಿಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಗುಣಮಟ್ಟ ಪರಿಶೀಲಿಸಬೇಕು. ಅಲ್ಲದೆ ಅಂಗನವಾಡಿಗೆ ಸಣ್ಣ-ಪುಟ್ಟ ದುರಸ್ತಿ ಕಾರ್ಯ ಇದ್ದರೆ ಅದನ್ನು ಮಾಡಿಕೊಡಬೇಕು ಎಂದರು.

    ಸಕರ್ಾರದಿಂದ ಗ್ರಾಪಂಗೆ ವಿವಿಧ ಯೋಜನೆಯಡಿ ಅನುದಾನ ಬಿಡುಗಡೆಯಾಗುತ್ತಿದ್ದು, ಪಿಡಿಒಗಳು ಗ್ರಾಮಗಳ ಅಭಿವೃದ್ಧಿಗೆ ಸಮರ್ಪಕ ಕ್ರಿಯಾ ಯೋಜನೆ ತಯಾರಿಸಿ, ಗ್ರಾಮಗಳ ಸವಾರ್ಂಗೀಣ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಮಾಡಿ ಪ್ರಗತಿ ಸಾಧಿಸಬೇಕು. ಅಲ್ಲದೆ ಸಕರ್ಾರಕ್ಕೆ ಅಭಿವೃದ್ಧಿ ಯೋಜನೆಗಳ ಮಾಹಿತಿ ಕಾಲ-ಕಾಲಕ್ಕೆ ತಂತ್ರಾಂಶದ ಮೂಲಕ ವರದಿ ಸಲ್ಲಿಸುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂದರು.

    ಜಲಜೀವನ ಮಿಷನ್ ಜಿಲ್ಲಾ ಕಾರ್ಯಕ್ರಮ ನಿವರ್ಾಹಕ (ಡಿಪಿಎಂ) ಲಕ್ಷ್ಮೀ ಹಾಗೂ ಕಲ್ಯಾಣ ಕನರ್ಾಟಕದ ಯುನಿಸೆಫ್ ಸಂಯೋಜಕ ಆದಿಲ್ ಖದೀಮ್ ಹುಸೇನ್ ಅವರು ಗ್ರಾಮ ನೈರ್ಮಲ್ಯ ಕ್ರಿಯಾ ಯೋಜನೆ ತಯಾರಿಸುವ ಕುರಿತು ತರಬೇತಿ ನೀಡಿದರು.

    ಯಾದಗಿರಿ ತಾಪಂ ಇಒ ಬಸವರಾಜ ಶರಬೈ, ಸಹಾಯಕ ಲೆಕ್ಕಾಧಿಕಾರಿ ಕಾಶೀನಾಥ, ವ್ಯವಸ್ಥಾಪಕ ಶಿವರಾಯ, ನರೇಗಾ ವಿಷಯ ನಿವರ್ಾಹಕ ಅನ್ಸಾರ್ ಪಟೇಲ್, ಸ್ವಚ್ಛ ಭಾರತ ಮಿಷನ್ ಸಂಯೋಜಕ ನಾರಾಯಣ ಚಂಡ್ರಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts