More

    ಸಾಮೂಹಿಕ ಆತ್ಮಹತ್ಯೆಗೆ ನಿರ್ಧಾರ

    ಯಾದಗಿರಿ: ಕಳೆದ ತಿಂಗಳು ಕೆಂಭಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದೆ ಎಂಬ ಸುಳ್ಳು ವರದಿ ಆಧರಿಸಿ ಮುಖ್ಯ ಅಡುಗೆ ಮಾಡುವ ಮತ್ತು ಐವರು ಸಹಾಯಕಿಯರನ್ನು ಕೆಲಸದಿಂದ ತೆಗೆದು ಹಾಕಿದ್ದರಿಂದ ಕುಟುಂಬಗಳು ಬೀದಿ ಪಾಲಾಗಿವೆ ಎಂದು ರಾಜ್ಯ ಬಿಸಿಯೂಟ ನೌಕರರ ಸಂಘದ ಉಪಾಧ್ಯಕ್ಷೆ ಸುರೇಖಾ ಕುಲಕರ್ಣಿ ಆರೋಪಿಸಿದರು.

    ಜು.೭ರಂದು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಅಡುಗೆ ಸಿದ್ಧಪಡಿಸುವಾಗ ಹಲ್ಲಿ ಬಿದ್ದಿದೆ ಎಂದು ಕೆಲವರು ವದಂತಿ ಹರಡಿಸಿದ್ದಾರೆ. ಊಟ ಮಾಡಿದ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಳಾಗಿದ್ದು, ವೈದ್ಯರು ನೀಡಿದ ವರದಿಯಲ್ಲಿ ಆಕೆಗೆ ಅಸ್ತಮಾ ಸಮಸ್ಯೆ ಇದ್ದ ಕಾರಣ ವಾಂತಿ ಮಾಡಿಕೊಂಡಿದ್ದಾಳೆ. ಅಲ್ಲದೆ ಈ ಘಟನೆಗೆ ಸಂಬಂಧಿಸಿದಂತೆ ತಾಲೂಕು ಅಧ್ಯರ ದಾಸೋಹದ ಸಹಾಯಕ ನಿರ್ದೇಶಕರು ಆಹಾರವನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳಿಸಿದ್ದು, ಇನ್ನೂ ವರದಿ ಬಂದಿಲ್ಲ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಶಾಲೆ ಎಸ್‌ಡಿಎಂಸಿಯಲ್ಲಿ ಕಾಂಗ್ರೆಸ್, ಬಿಜೆಪಿ ಬಣಗಳಿದ್ದು, ಅವರ ಕಿತ್ತಾಟವನ್ನು ಬಿಸಿಯೂಟದ ಮೇಲೆ ಹಾಕಿದ್ದಾರೆ. ಯಾವುದೇ ನೋಟಿಸ್ ನೀಡದೆ ಜಿಪಂ ಸಿಇಒ ಆರು ಜನರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ೧೫ ವರ್ಷಗಳಿಂದ ಸಾವಿರಾರು ಮಕ್ಕಳಿಗೆ ಕೊಂಚವೂ ತೊಂದರೆಯಾಗದAತೆ ಅಡುಗೆ ಮಾಡಿ ಹಾಕಿದ ಇವರ ಕುಟುಂಬಗಳು ಸದ್ಯ ಸಮಸ್ಯೆ ಅನುಭವಿಸುತ್ತಿವೆ ಎಂದರು.

    ಕೆಲಸದಿಂದ ತೆಗೆದು ಹಾಕಿದ ಸಿಬ್ಬಂದಿಯನ್ನು ಪುನಃ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸಿಇಒಗೆ ಪತ್ರದ ಮೂಲಕ ಸೂಚಿಸಿದರೂ ಪ್ರಯೋಜನವಾಗಿಲ್ಲ. ನ್ಯಾಯ ಸಿಗದ ಕಾರಣ ಆ.೧೫ರ ಸ್ವಾತಂತ್ರ್ಯ ದಿನದಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಉಸ್ತುವಾರಿ ಸಚಿವರ ಕಚೇರಿ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಎಚ್ಚರಿಸಿದರು.

    ಸೈಯದಾ ಬೇಗಂ, ಶಿವಲೀಲಾ, ಬಿಸ್ಮಿಲ್ಲಾ ಮಹ್ಮದ್, ಮುತ್ತಮ್ಮ, ಪ್ರಕಾಶ ಆಲ್ಹಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts